ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : Motivitalz ಚಾಲಿತ ಕುನಿಲ್ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಆವಿಷ್ಕಾರ ಎನ್ನುವ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆಯು 06/01/2023 ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯ ಮೂಲಕ ಪ್ರಾರಂಭ ವಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದೀಪಾ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕುನಿಲ್ ಇಲ್ಮು ಅಕಾಡೆಮಿಯ ಕೋಶಾಧಿಕಾರಿಯಾದ ಶ್ರೀ ಆದಿಲ್ ಸೂಫಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಕುನಿಲ್ ಪಿಯು ಕಾಲೇಜಿನ ಆಡಳಿತ ನಿರ್ದೇಶಕರು ಹಾಗೂ MOTIVITALZ ನ ಅಧ್ಯಕ್ಷರಾದ ಶ್ರೀ ಹಸನ್ ತೌಶೀದ್ ಬಾವ, MOTIVITALZ ನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ನಸ್ರೀನ್ ಬಿಂತ್ ಅಹ್ಮದ್ ಬಾವ ಹಾಗೂ ಕಾಲೇಜಿನ ಆಡಳಿತ ವ್ಯವಸ್ಥಾಪಕಿ ಶ್ರೀಮತಿ ಮಮತಾ ಭಂಡಾರಿ ಉಪಸ್ಥಿತರಿದ್ದರು.
ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಮೋಕ್ಷಿತ ಅವರು ಆವಿಷ್ಕಾರ ಕಾರ್ಯಕ್ರಮದ ಕಾರ್ಯ ಸೂಚಿ ವರದಿಯನ್ನು ಮಂಡಿಸಿದರು. ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿರುವ ಆದಿಲ್ ಸೂಫಿ ಇವರು ಸಮಯದ ಮಹತ್ವ ಮತ್ತು ವಿದ್ಯ ಕಡೆಗೆ ಗಮನಹರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ನೀಡಿದರು. ಒಟ್ಟಾರೆಯಾಗಿ 20 ಶಾಲೆಗಳಿಗೆ ಭೇಟಿ ನೀಡಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿ ಅಲ್ಲಿ ಹೆಚ್ಚು ಅಂಕ ಬಂದ, ಆಯ್ದ ಕೆಲವು ಶಾಲೆಗಳಿಗೆ ಅಂತಿಮ ಸುತ್ತನ್ನು ತಮ್ಮ ಕಾಲೇಜ್ ನಲ್ಲಿ ಗಣಿತ ಉಪನ್ಯಾಸಕರಾದ ಮನಿಷಾ ಅವರ ಮಾರ್ಗದರ್ಶನದಲ್ಲಿ ಅಂತಿಮ ಸುತ್ತನ್ನು ಏರ್ಪಡಿಸಲಾಯಿತು.
ಅಂತಿಮ ಸುತ್ತಿನಲ್ಲಿ ಪ್ರಥಮ ಬಹುಮಾನವನ್ನು ಅಲ್ ಮದೀನಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ದ್ವಿತೀಯ ಬಹುಮಾನವನ್ನು ಕುನಿಲ್ ಇಲ್ಮು ಅಕಾಡೆಮಿ ಹಾಗೂ ತೃತೀಯ ಬಹುಮಾನವನ್ನು ರೆಹಮಾನ್ಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆದ್ದುಕೊಂಡರು. ಗೆದ್ದಂತ ಮೂರು ವಿದ್ಯಾರ್ಥಿ ವರ್ಗದವರಿಗೆ ಪ್ರಶಸ್ತಿ ಫಲಕವನ್ನು ಕೊಟ್ಟು ಗೌರವಿಸಲಾಯಿತು.
ರಾಸಾಯನಶಾಸ್ತ್ರದ ವಿಭಾಗ ಉಪನ್ಯಾಸಕರಾದ ಗೌತಮಿಯವರು ನಿರೂಪಣೆ ನಿರ್ವಹಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಸೀನಾರವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.