ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್) : ವ್ಯಕ್ತಿಯೋರ್ವರು ಮನೆಯ ಒಳಗಡೆ ಮಂಚದಿಂದ ಕೆಳಗಡೆ ಬಿದ್ದ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನೆರಿಯ ಗ್ರಾಮದ ನೆಕ್ಕರೆ ಎಂಬಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತರೆಳಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ನಿವಾಸಿ ಗೋಪಾಲ್ (55) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಮನೆಯಲ್ಲಿ ಇವರೊಬ್ಬರೇ ವಾಸವಿದ್ದರು ಎನ್ನಲಾಗುತ್ತಿದ್ದು, ನೆರೆಮನೆಯವರು ಇವರ ಮನೆಗೆ ಹೋಗಿ ನೋಡಿದಾಗ ಮೃತಪಟ್ಟಿರುವುದು ಪತ್ತೆಯಾಗಿದೆ. ಅವರು ಮಲಗಿದ್ದಲ್ಲಿ ವಾಂತಿ ಮಾಡಿರುವುದು ಕಂಡು ಬಂದಿದ್ದು, ಯಾವುದೇ ರೀತಿಯ ವಿಷಸೇವಿಸಿರಬಹುದೇ ಅಧವಾ ಇನ್ಯಾವುದೇ ಕಾರಣದಿಂದ ಮೃತಪಟ್ಟಿರಬಹುದೆ ಎಂದು ಸ್ಪಷ್ಟವಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.