ಸುಬ್ರಹ್ಮಣ್ಯ (ವಿಶ್ವ ಕನ್ನಡಿಗ ನ್ಯೂಸ್) : ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಮೂಕಮಲೆ ಅವರು ಪ್ರಿಯಕರನೊಂದಿಗೆ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿ ಆತನೊಂದಿಗೇ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ತನ್ನ ಪ್ರಿಯಕರ ನಂದನ್ ಮತ್ತು ನ್ಯಾಯವಾದಿ ಮುಖಾಂತರ ಸುಬ್ರಹ್ಮಣ್ಯ ಠಾಣೆಗೆ ಹಾಜರಾದ ಭಾರತಿ ಮೂಕಮಲೆ, ತಾನು ನಂದನ್ನೊಂದಿಗೆ ಜೀವನ ಮುಂದುವರೆಸುವುದಾಗಿ ಹೇಳಿ, ತನ್ನ ನಿರ್ಧಾರವನ್ನು ಲಿಖೀತ ರೂಪದಲ್ಲಿ ಬರೆದು ಕೊಟ್ಟು ಪ್ರಿಯಕರನೊಂದಿಗೆ ತೆರಳಿದ್ದಾರೆ.
ಎರಡು ತಿಂಗಳ ಹಿಂದೆ ಪತಿ ಹಾಗು ತನ್ನಿಬ್ಬರು ಸಣ್ಣ ಹೆಣ್ಣು ಮಕ್ಕಳನ್ನು ತೊರೆದು ನಾಪತ್ತೆಯಾಗಿದ್ದ ಭಾರತಿ ಮತ್ತು ಅವರ ಪ್ರಿಯಕರ ನಂದನ್ ಎಷ್ಟೇ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬಳಿಕ ಒಂದು ವೀಡಿಯೋ ಮಾಡಿ ಹರಿಯಬಿಟ್ಟಿದ್ದ ಭಾರತಿ, ತಾನು ಪ್ರಿಯಕರನೊಂದಿಗೆ ಇರುವುದಾಗಿ ತಿಳಿಸಿದ್ದು, ತನ್ನನ್ನು ಹುಡುಕುವ ಕಾರ್ಯ ಮಾಡಬೇಡಿ ಎಂದು ಕೇಳಿ ಕೊಂಡಿದ್ದರು.
ಆದರೂ ಸುಬ್ರಹ್ಮಣ್ಯ ಪೊಲೀಸರು ಅವರನ್ನು ಪತ್ತೆ ಮಾಡಲು ಶ್ರಮ ವಹಿಸಿದ್ದರೂ ಅವರು ಸಿಕ್ಕಿರಲಿಲ್ಲ. ಇದೀಗ ಅವರೇ ಪ್ರಿಯಕರನೊಂದಿಗೆ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.