ಕಾರ್ಕಳ (ವಿಶ್ವ ಕನ್ನಡಿಗ ನ್ಯೂಸ್) : ಕಾರಿನೊಳಗೆ ಪೆಟ್ರೋಲ್ ಸುರಿದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಕುದ್ರೊಟ್ಟು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸ್ಥಳೀಯ ನಿವಾಸಿ ಕೃಷ್ಣ ಮೂಲ್ಯ( 48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕೃಷ್ಣ ಮೂಲ್ಯ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, ತನ್ನ ಮಾರುತಿ ಓಮ್ನಿ ಕಾರಿನ ಒಳಗೆ ಕುಳಿತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ನಿನ್ನೆ ರಾತ್ರಿ ಅಕ್ಕನ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬಳಿಕ ಅಣ್ಣ ತಮ್ಮಂದಿರಿಗೆ ಜಮೀನಿನ ವಿಷಯದಲ್ಲಿ ತಕರಾರು ನಡೆದಿದೆ ಎನ್ನಲಾಗಿದೆ.
ಮಾನಸಿಕವಾಗಿ ನೊಂದ ಕೃಷ್ಣ ಮೂಲ್ಯ ಸಚ್ಚೇರಿಪೇಟೆಯ ಬಸ್ಸು ತಂಗುದಾಣ ಹಾಗೂ ಇನ್ನಿತರ 2-3 ಕಡೆಗಳಲ್ಲಿ 3-4 ಮಂದಿಯಿಂದ ತನಗೆ ಲಕ್ಷಾಂತರ ರೂಪಾಯಿ ವಂಚನೆ ನಡೆದಿದೆ ಎಂದು ಡೆತ್ನೋಟ್ ಬರೆದು ಅಂಟಿಸಿದ್ದಾರೆ. ಅಲ್ಲದೇ ಜಮೀನಿನ ವಿಷಯದಲ್ಲಿ ಮಧ್ಯವರ್ತಿಯೊಬ್ಬ ವಂಚಿಸಿದ್ದಾನೆ ಎಂದು ಅವರ ಕಚೇರಿಗೂ ಬೆಂಕಿ ಹಚ್ಚಿದ್ದು, ಅಲ್ಲಿ ಹೆಚ್ಚಿನ ಯಾವುದೇ ಅನಾಹುತ ಸಂಭವಿಸಿಲ್ಲ.
ಆ ಬಳಿಕ ಕೃಷ್ಣ ಮೂಲ್ಯ ತನ್ನ ಕಾರು ಸಹಿತ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.