(www.vknews.in) ; ಇತ್ತೀಚಿನ ದಿನಗಳಲ್ಲಿ ನಮ್ಮ ಮಂಗಳೂರಿನಲ್ಲಿ ಸಕತ್ ಸುದ್ದಿ ಮಾಡುತ್ತಿರುವ ಮತ್ತು ಬೆಚ್ಚಿ ಬೀಳಿಸುತ್ತಿರುವ ವಿಚಾರ ಅಂದರೆ ವೈದ್ಯ ವಿದ್ಯಾರ್ಥಿಗಳ ಮತ್ತು ವೈದ್ಯ ಉಪನ್ಯಾಸಕರು ಮಾದಕ ದ್ರವ್ಯದ ಜಾಲಕ್ಕೆ ಸಿಲುಕಿ ತಾವು ಹಾಳಾಗುವುದರ ಜೊತೆಗೆ ಇತರರನ್ನು ಮತ್ತು ಸಮಾಜದ ಮುಗ್ಧರನ್ನು ದಾರಿ ತಪ್ಪಿಸುತ್ತಿರುವುದು ಬಹಳ ಆತಂಕಕಾರಿ. ಸುಮಾರು 20ಕ್ಕೂ ಹೆಚ್ಚು ವೈದ್ಯರು ಮಾದಕ ದ್ರವ್ಯದ ಸಮೇತ ಸಿಕ್ಕಿಬಿದ್ದು ಪೊಲೀಸರ ಅತಿಥಿಗಳಾಗಿದ್ದಾರೆ. ಸಮಾಜಕ್ಕೆ ತಿದ್ದಿ ಹೇಳಿ, ಮಾದಕ ದ್ರವ್ಯಗಳ ಚಟಕ್ಕೆ ಬಿದ್ದವರನ್ನು ಸರಿದಾರಿಗೆ ತರಬೇಕಾದ ವೈದ್ಯರೇ ಈ ರೀತಿಯ ಚಟಕ್ಕೆ ದಾಸರಾಗಿ ಚಟ್ಟಕ್ಕೇರುವ ಹುನ್ನಾರವನ್ನು ಸೃಷ್ಟಿಸಿಕೊಂಡಿರುವುದು ಬಹಳ ಕುಚೋದ್ಯದ ಸಂಗತಿ ಮತ್ತು ಬೇಲಿಯೇ ಹೊಲವನ್ನು ಮೇಯ್ದಂತೆ ಎಂಬ ಮಾತನ್ನು ಪುಷ್ಟೀಕರಿಸುವಂತಿದೆ.
ಇದು ಕೇವಲ ಟಿಪ್ ಆಫ್ ದಿ ಐಸ್ಬರ್ಗ್ ಅಂದರೆ ಇದರ ಹಿಂದೆ ಬಹಳಷ್ಟು ಕಾಣದ ಕೈಗಳು ಇರುವುದಂತೂ ಸತ್ಯ. ಮಂಗಳೂರಿನಲ್ಲಿ ಸುಮಾರು 8 ಮೆಡಿಕಲ್ ಕಾಲೇಜು ಮತ್ತು 20ಕ್ಕೂ ಹೆಚ್ಚು ಇಂಜಿನಿಯರಿಂಗ್ ಸಂಸ್ಥೆಗಳಿದ್ದು ಸಾವಿರಾರು ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಶಿಕ್ಷಣದ ಕಾಶಿ ಎಂಬ ಹೆಸರು ಪಡೆದಿರುವ ಮಂಗಳೂರು ಈಗ ನಶೆಗಳ ನಗರ ಎಂಬ ಹಣೆಪಟ್ಟಿ ಪಡೆದಿರುವುದು ನಾಚಿಗೆಗೇಡು ಮತ್ತು ಅಸಹ್ಯಕರ ವಿಚಾರ. ಈ ಚಟವನ್ನು, ವ್ಯಸನವನ್ನು ಮತ್ತು ಪಿಡುಗನ್ನು ಬೇರು ಸಮೇತ ಕಿತ್ತು ಹಾಕಲೇ ಬೇಕು. ಇಲ್ಲವಾದಲ್ಲಿ ನಮ್ಮ ಮಂಗಳೂರು ಕ್ರೈಮ್ ನಗರವಾಗಿ ಪರಿವರ್ತನೆಯಾದರೂ ಆಶ್ವರ್ಯವೇನಲ್ಲ.
ಎಲ್ಲಾ ಓಕೆ ಗಾಂಜಾ, ಅಫೀಮು ಯಾಕೆ?
ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ ಏನೆಲ್ಲಾ ನಡೆದು ಬಿಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡವೂ ಬಹಳ ಇರುತ್ತದೆ. ಈಗಿನ ಒತ್ತಡದ, ಧಾವಂತದ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯುವ ಜನತೆ ವೇಗಕ್ಕೆ ತಾಳ ಹಾಕಲು ಕಷ್ಟವಾಗಿ ತಪ್ಪುದಾರಿ ಹಿಡಿಯುತ್ತಾರೆ ಎಂದರೂ ತಪ್ಪಲ್ಲ. ನಮ್ಮ ಇಂದಿನ ನಾಗರೀಕ ಜೀವನಶೈಲಿಯಲ್ಲಿ ಮೋಜು,ಮಸ್ತಿ ತಡ ರಾತ್ರ್ರಿಯ ಪಾರ್ಟಿ ಇತ್ಯಾದಿಗಳು ಮಾಮೂಲಿಯಾಗಿವೆ. ಈ ಹಂತದಲ್ಲಿ ಹದಿ ಹರೆಯದ ಯುವ ಜನತೆ ದಾರಿ ತಪ್ಪುವುದು ಸಾಮಾನ್ಯ. ಈ ದಿಸೆಯಲ್ಲಿ ತಂದೆ ತಾಯಂದಿರ ಆಸರೆ, ಮಾರ್ಗದರ್ಶನ ಅತೀ ಅಗತ್ಯ. ಹದಿ ಹರೆಯದಲ್ಲಿ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯದಿದ್ದಲ್ಲಿ ಅನಾಹುತವಾಗುವ ಸಾಧ್ಯತೆಯಿದೆ.
ಅಪೀಮ, ಗಾಂಜಾ, ಕೋಕೇನ್, ಮಾರಿಜುವಾನಾ ಇವೆಲ್ಲಾ ಮಾದಕ ವಸ್ತುಗಳ ಸೇವನೆ ನಮ್ಮ ದೇಶಗಳಲ್ಲಿ ಶತಶತಮಾನಗಳಿಂದ ಇದೆ. ಒಮ್ಮೆ ಇದರ ಚಟಕ್ಕೆ ಬಿದ್ದಲ್ಲಿ ಮತ್ತೆ ಹೊರಬರುವುದು ಬಹಳ ಕಷ್ಟ. ಅಭ್ಯಾಸ ಬಲದಿಂದ ಮತ್ತೆ ಮತ್ತೆ ಮಾಡುವ ಕೆಲಸವನ್ನು ಚಟ ಎನ್ನುತ್ತೇವೆ. ಸಾಮಾನ್ಯವಾಗಿ ಚಟಗಳೆಲ್ಲಾ ದುಶ್ಚಟಗಳೇ. ಆ ವ್ಯಕ್ತಿಗೆ ಹಾಗೆಂದು ಗೊತ್ತಿದ್ದರೂ ಅದನ್ನು ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಇದಕ್ಕೆ ಮುಖ್ಯ ಕಾರಣ, ಅದನ್ನು ನಿಲ್ಲಿಸಿದರೆ ಆತನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಹಿಂಸೆಯಾಗುತ್ತದೆ. ಹೀಗಾಗಿ ಹೇಗೊ ಆತನಿಗೆ ಅಂಟಿಕೊಂಡ ಚಟಗಳು ಅವನನ್ನು ಬಿಡದೆ ಆವರಿಸಿಕೊಂಡಿರುತ್ತದೆ.
ಅಪೀಮು ಎನ್ನುವುದು ಗಸಗಸೆಯಿಂದ ತಯಾರು ಮಾಡಲಾದ, ಔಷಧಿಯ ಗುಣವುಳ್ಳ ವಸ್ತು. ಅಪೀಮುನಿಂದ ತಯಾರಾದ ಒoಡಿಠಿhiಟಿe (ಮಾರ್ಪಿನ್) ಎನ್ನುವ ಶುದ್ಧ ರಾಸಾಯನಿಕ ವಸ್ತುವನ್ನು, ಇಂದಿಗೂ ವೈದಕೀಯ ಶಾಸ್ತ್ರದಲ್ಲಿ ನೋವುನಿವಾರಕ ಚುಚ್ಚುಮದ್ದಿನ ರೂಪದಲ್ಲಿಬಳಸಲಾಗುತ್ತದೆ. ಅಫಘಾತದಲ್ಲಿ ಪೆಟ್ಟುಬಿದ್ದು ತೀವ್ರ ಸ್ಪರೂಪದ ನೋವಿರುವಾಗ, ಹೃದಯಘಾತವಾಗಿ ಅತಿಯಾದ ಎದೆನೋವು ಇದ್ದಲ್ಲಿ ನೋವುನಿವಾರಕವಾಗಿ ಇಂದಿಗೂ ಬಳಸಲಾಗುತ್ತದೆ. ಇದರಿಂದ ಸಣ್ಣ ಪ್ರಮಾಣದಲ್ಲಿ ನಿದ್ದೆಬರಬಹುದು. ಅಪೀಮುನಿಂದ ತಯಾರಿಸಲಾದ ಹೆರಾಯಿನ್ ಎಂಬ ಮಾದಕವಸ್ತು ಕೂಡಾ ಪಾಶ್ಚಾತ್ಯ ದೇಶಗಳಲ್ಲಿ ಹೇರಳವಾಗಿ ಬಳಕೆಯಲ್ಲಿದೆ. ಇದರಿಂದ ಶರೀರದ ನೋವು, ಬಳಲಿಕೆ, ಮಾನಸಿಕ ದುಗುಡ ಕಡಿಮೆಯಾಗಿ ಕ್ಷಣಿಕವಾಗಿ ಖುಷಿ ಸಿಗುತ್ತದೆ. ಮನಸ್ಸಿನ ಬೇಸರ, ನಿರಾಸೆ ಎಲ್ಲವೂ ತಗ್ಗಿ ನಿರಾಳವಾಗುತ್ತದೆ. ಈ ಕಾರಣದಿಂದಲೇ ಜನ ಹೆರಾಯಿನಾ ಚುಚ್ಚುಮದ್ದನ್ನು ಮತ್ತೆ ಮತ್ತೆ ಬಳಸುತ್ತಾರೆ. ಕ್ರಮೇಣ ಚಟವಾಗಿ ಮಾರ್ಪಾಡಾಗುತ್ತದೆ. ಮತ್ತೆ ಮತ್ತೆ ತೆಗೆದುಕೊಳ್ಳಬೇಕೆಂಬ ತುಡಿತ ಉಂಟಾಗುತ್ತದೆ. ತೆಗೆದುಕೊಳ್ಳದಿದ್ದಲ್ಲಿ ತಿiಣhಜಡಿತಿಚಿಟ sಥಿಟಿಜಡಿome ಉಂಟಾಗುತ್ತದೆ. ಮನುಷ್ಯ ಆ ಮಾನಸಿಕ ಸ್ತಿಮಿತ ಕಳಕೊಂಡು ಹುಚ್ಚನಂತಾಗುತ್ತಾನೆ. ಹೆರಾಯಿನ್ ಬಳಕೆಯಿಂದ ಲೈಗಿಂಕ ಆಸೆ ಹೆಚ್ಚಾಗುತ್ತದೆ. ಆದರೆ ಲೈಂಗಿಕ ಸಾಮಥ್ರ್ಯ ಕುಗ್ಗುತ್ತದೆ. ಈಗೀನ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಮಾದಕ ವಸ್ತುಗಳ ಬಳಕೆ ಎಂದರೂ ತಪ್ಪಲ್ಲ. ಒಟ್ಟಿನಲ್ಲಿ ಅಫೀಮು ಎನ್ನುವುದು ಔಷಧೀಯ ಗುಣವುಳ್ಳ ಮಾದಕವಸ್ತು ಇದರ ಚಟಕ್ಕೆ ಹದಿಹರೆಯದ ಯುವಕರು ಬಿದ್ದಲ್ಲಿ ಮತ್ತೆ ಹೊರ ಬರುವುದು ಬಹಳ ಕಷ್ಟ.
ಇನ್ನು ‘ಗಾಂಜಾ’ದ ವಿಷಯಕ್ಕೆ ಬರೋಣ. ಇದು ಕೂಡಾ ಸಸ್ಯ ಮೂಲದಿಂದಲೇ ಬಂದಂತಹ ಇನ್ನೊಂದು ಮಾದಕವಸ್ತು. ಈಗೀಗ ಹಳ್ಳಿ ಹಳ್ಳಿಗಳಲ್ಲೂ ಇದನ್ನು ಅಕ್ರಮವಾಗಿ ಬೆಳೆಸುತ್ತಿದ್ದಾರೆ. ಸರಕಾರ ಇದರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೂ, ಜನರು ಅಕ್ರಮವಾಗಿ ಬೆಳೆದು, ಹಣಮಾಡುವ ದಂದೆಯಲ್ಲಿ ತೊಡಗಿದ್ದಾರೆ. ಅದೇ ರೀತಿ ಸಸ್ಯಮೂಲದಿಂದ ಬಂದಿರುವ ಕೋಕೇನ್ (ಅoಛಿಚಿiಟಿe) ಮಾರಿಜುವಾನಾ (ಒಚಿಡಿisuಚಿಟಿಚಿ) ಮತ್ತು ಹಷೀಷ್ (ಊಚಿshish) ಕೂಡಾ ಮಾದಕ ದ್ರವ್ಯಗಳೇ. ಈ ಮೇಲೆ ತಿಳಿಸಿದ ಎಲ್ಲಾ ವಸ್ತುಗಳ ಬಳಕೆಯಿಂದ ಮನಸ್ಸು ಉತ್ತೇಜಿತ ಗೊಳ್ಳುತ್ತದೆ ಮತ್ತು ಅಸ್ವಾದಗೊಳ್ಳುತ್ತದೆ. ಜೊತೆಗೆ ಒತ್ತಡದಿಂದ ಬಳಲಿದ ದೇಹ ಮತ್ತು ಮನಸ್ಸಿಗೆ ಭ್ರ್ರಮೆ ಮತ್ತು ಭ್ರಾಂತಿಗಳನ್ನು ಮಾಡಿಸುತ್ತದೆ. ಈ ಕಾರಣದಿಂದಲೇ ಅತೀವ ಒತ್ತಡ, ಹತಾಶೆ ಮತ್ತು ನಿರಾಶೆಯಿಂದ ಕೂಡಿದ ಯುವ ಜನರು, ಸ್ಪರ್ಧಾತ್ಮಕ ಜಗತ್ತಿನ ವೇಗಕ್ಕೆ ಹೊಂದಿಕೊಳ್ಳಲಾಗದೆ ಮಾದಕ ವಸ್ತುಗಳ ಚಟಕ್ಕೆ ದಾಸರಾಗುತ್ತಾರೆ. ಮೊದಮೊದಲು ಒಂದು ಮಾದಕ ದ್ರವ್ಯದ ಬಳಕೆ, ಬಳಿಕ ಎರಡು ಮೂರು ವಸ್ತುಗಳನ್ನು ಬಳಸತೊಡಗುತ್ತಾರೆ. ಇದನ್ನು Poಟಥಿಜಡಿug ಚಿbuse ಎಂದು ಹೇಳುತ್ತಾರೆ.
ಕಾಲಕ್ರಮೇಣ ಮಾದಕ ವಸ್ತುಗಳ ಬಳಕೆ ಜಾಸ್ತಿಯಾದಂತೆ, ಶರೀರದ ಒಂದೊಂದು ಅಂಗಗಳನ್ನು ಆಪೋಶನ ತೆಗೆದುಕೊಳ್ಳುತ್ತದೆ. ಕೆಲಸ ಮಾಡಲು ಅಶಕ್ತರಾಗಿ, ಗಳಿಕೆ ಇಲ್ಲದಂತಾಗಿ, ಮನೆಮಠ ಕಳೆದುಕೊಂಡು, ಹೆಂಡತಿ ಮಕ್ಕಳನ್ನು ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಚಟಕ್ಕೆ ದಾಸರಾಗಿ, ಮಾದಕ ದ್ರವ್ಯ ಸಿಗದಾದಾಗ ಹಣದ ಅವಶ್ಯಕತೆಗಾಗಿ ಕೊಲೆ, ಸುಳಿಗೆ, ಕಳ್ಳತನ ಮಾಡಲೂ ಹೇಸದ ಮನೋಸ್ಥಿತಿಗೆ ಬಂದು ತಲುಪುತ್ತಾರೆ. ಒಟ್ಟಿನಲ್ಲಿ ಮಾದಕ ದ್ರವ್ಯಗಳ ದಾಸನಾದವನನ್ನು ಚಟ ಬಿಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಒಂದು ದೊಡ್ಡ ಭಗೀರಥ ಪ್ರಯತ್ನವೆಂದರೂ ಸುಳ್ಳಲ್ಲ. ಒಟ್ಟಿನಲ್ಲಿ ಅತೀ ಒತ್ತಡದ ಬದುಕನ್ನು ನಡೆಸುವವರು ತಮ್ಮ ಮನಸ್ಸಿನ ವೇಗವನ್ನು ಕಡಿಮೆ ಮಾಡಿಕೊಂಡು ಪರ್ಯಾಯ ಬದುಕನ್ನು ಕಲ್ಪಿಸಿಕೊಳ್ಳಲು ಮಾದಕ ದ್ರವ್ಯಕ್ಕೆ ದಾಸÀರಾಗುತ್ತದೆ ಆದರೆ ಅದು ನಶ್ವರವೆಂದು ಗೊತ್ತಾದಾಗ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಮತ್ತಷ್ಟು ಒತ್ತಡಕ್ಕೆ ಒಳಗಾಗಿ ಸಂಪೂರ್ಣವಾಗಿ ವ್ಯಸನಿಗಳಾಗಿ ಬಿಡುತ್ತಾರೆ. ಬದುಕಿನ ವಾಸ್ತವವನ್ನು ಎದುರಿಸಲಾಗಿದೆ ಮಾದಕದ್ರವ್ಯದ ಸಹಾಯದಿಂದ ಕಲ್ಪನಾ ಲೋಕದಲ್ಲೇ ಮುಳುಗಿದ್ದು ತಮ್ಮ ಸಮಸ್ಯೆಗಳಿಗೆ ಕ್ಷಣಕವಾದ ಪರಿಹಾರ ಪಡೆಯಲು ಹೋಗಿ ಅಮೂಲ್ಯವಾದ ಬದುಕನ್ನು ಬರಡಾಗಿಸುವುದು ಮಾಯಾ ಲೋಕದ ದುರಂತವೇ ಸರಿ.
ಯುವ ಜನತೆ ಮಾದಕ ದ್ರವ್ಯಗಳ ವ್ಯಸನಕ್ಕೆ ಯಾಕಾಗಿ ಬಲಿಯಾಗುತ್ತಾರೆ?
1. ತಮಗೆ ಆತ್ಮೀಯರಾದ ಸ್ನೇಹಿತರು, ಕುಟುಂಬದ ಹಿರಿಯರು, ಅನುಕರಣೀಯರಾದ ರೋಲ್ ಮಾಡೆಲ್ಗಳು ಮಾದಕದ್ರವ್ಯ ಸೇವಿಸಿದಾಗ ಅವರನ್ನು ಅನುಕರಿಸುತ್ತಾರೆ. ಕ್ರಮೇಣ ಅದಕ್ಕೆ ದಾಸರಾಗುತ್ತಾರೆ. 2. ಮಾದಕ ದ್ರವ್ಯಗಳನ್ನು ಸೇವಿಸಿದಾಗ ಜೀವನದ ಒತ್ತಡ ಕಡಿಮೆಯಾಗುತ್ತದೆ ಎಂಬ ಕುರುಡು ನಂಬಿಕೆಯಿಂದ ಬಳಸುತ್ತಾರೆ. ಅದೇ ಮುಂದೆ ಅಭ್ಯಾಸವಾಗಿ ಸಣ್ಣ ಪುಟ್ಟ ಒತ್ತಡಗಳಿಗೂ ಬಳಸಿ ಮಾದಕ ದ್ರವ್ಯದ ಚಟಕ್ಕೆ ಬಲಿಯಾಗುತ್ತಾರೆ.
3. ಜೀವನದಲ್ಲಿ ಬೇಜಾರು ಕಳೆಯಲು ಮತ್ತು ಜೀವನಕ್ಕೆ ಕಿಕ್ ಸಿಗಬೇಕೆಂದು ಯುವಜನತೆ ಮಾದಕದ್ರವ್ಯಕ್ಕೆ ಜೋತು ಬೀಳುತ್ತಾರೆ. ಕೈಯಲ್ಲಿ ಕಾಸಿದ್ದು, ಮಾಡಲು ಕೆಲಸವಿಲ್ಲದಿದ್ದಾಗ ಜೀವನದ ಏಕತಾನತೆ ಕಳೆಯಲು ತಮ್ಮದೇ ಆದ ಕಲ್ಪನಾ ಪ್ರಪಂಚವೊಂದನ್ನು ಸೃಷ್ಟಿಸಿಕೊಳ್ಳಲು ಮಾದಕ ದ್ರವ್ಯಗಳನ್ನು ಬಳಸಲು ಆರಂಭಿಸುತ್ತಾರೆ. ಕ್ರಮೇಣ ಅದುವೇ ಚಟವಾಗಿ ಮಾರ್ಪಡಾಗುತ್ತದೆ. 4. ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವಂತವರು ತಾವು ಇತರರಂತೆ ಅಲ್ಲ, ತಾವು ಇತರರಿಗಿಂತ ಕೀಳು ಎಂಬ ಕೀಳರಿಮೆ ತೊಡೆಯಲು ಮಾದಕ ದ್ರವ್ಯವನ್ನು ಬಳಸುತ್ತಾರೆ. ಆ ಮೂಲಕ ತಾವು ನಾರ್ಮಲ್ ಮತ್ತು ಇತರರಿಗಿಂತ ಮೇಲು ಎಂಬ ಕಲ್ಪನಾ ಲೋಕದಲ್ಲಿ ಮಿಂದೇಳುತ್ತಾರೆ. ಕ್ರಮೇಣ ಮಾದಕ ದ್ರವ್ಯಕ್ಕೆ ಜೋತು ಬಿದ್ದು ವ್ಯಸನಿಗಳಾಗುತ್ತಾರೆ.
5. ಸಾಮಾನ್ಯವಾಗಿ ಹದಿಹರೆಯದ ಯುವಕ ಯುವತಿಯರು ಮೋಜಿಗಾಗಿ ಮಾದಕ ದ್ರವ್ಯವನ್ನು ಆರಂಭದಲ್ಲಿ ಸೇವಿಸುತ್ತಾರೆ. ಕ್ರಮೇಣ ಮೋಜು ಮಸ್ತಿಯನ್ನು ಮಾದಕ ದ್ರವ್ಯ ಅಪೋಶನ ತೆಗೆದುಕೊಳ್ಳುತ್ತದೆ ಎಂಬುದೇ ಸೋಜಿಗದ ಸಂಗತಿ. ಮಾದಕ ದ್ರವ್ಯಗಳಿಂದ ದೊರಕುವ ಉನ್ಮಾದ ನಿಜ ಜೀವನದಲ್ಲಿ ಸಿಗದಾಗ ಈ ಮತ್ತಿನ ಪರಾಕಾಷ್ಟೆಯ ಹುಡುಕಾಟ ನಿರಂತರವಾಗುತ್ತದೆ. ಈ ಹುಡುಕಾಟದ ಧಾವಂತದಲ್ಲಿ ಮಾದಕ ದ್ರವ್ಯದ ಪ್ರಮಾಣ ಮತ್ತು ಉಪಯೋಗ ಜಾಸ್ತಿಯಾಗಿ ವ್ಯಸನವಾಗಿ ಪರ್ಯಾಯವಾಗುತ್ತದೆ. 6. ಬಾಲ್ಯ ಜೀವನದಲ್ಲಿ ಅಥವಾ ಹರಿಹರೆಯದಲ್ಲಿ ಉಂಟಾದ ದುರ್ಘಟನೆಯನ್ನು ಮರೆಯಲು ಮಾದಕದ್ರವ್ಯವನ್ನು ಬಳಸುತ್ತಾರೆ. ಬಾಲ್ಯದ ಮತ್ತು ಹದಿಹರೆಯದ ಕಹಿ ಘಟನೆಗಳು ಯೌವನಾವಸ್ಥೆಯಲ್ಲಿ ಬಹಳ ಕಾಡುತ್ತದೆ. ಅಂತಹ ನೆನಪುಗಳನ್ನು ಮರೆಯಲು ಸಾಧ್ಯವಾಗದೆ ಅದನ್ನು ತಪ್ಪಿಸಿಕೊಳ್ಳುವ ಮಾರ್ಗವಾಗಿ ಮಾದಕ ದ್ರವ್ಯಕ್ಕೆ ಶರಣಾಗುತ್ತಾರೆ.
7. ಕೆಲವೊಮ್ಮೆ ಸಹಪಾಠಿಗಳೊಂದಿಗೆ, ಸಹದ್ಯೋಗಿಗಳೊಂದಿಗೆ, ಸಮಾನ ವಯಸ್ಕರೊಂದಿಗೆ ಹೊಂದಿಕೊಳ್ಳಲಾಗದೆ ತಾವು ಗುಂಪಿನಲ್ಲಿ ಬೇರೆಯಾಗಿ ನಿಂತು ಅವಹೇಳನಕ್ಕೊಳ್ಳಗಾಗಬಾರದೆಂಬ ಒಂದೇ ಕಾರಣಕ್ಕಾಗಿ ಮಾದಕ ದ್ರವ್ಯಗಳಿಗೆ ಶರಣಾಗುತ್ತಾರೆ. 8. ವೈದ್ಯರು ಕೊಟ್ಟ ಔಷಧಿಯನ್ನು ಖಾಯಿಲೆ ಗುಣವಾದ ಬಳಿಕವೂ ಬಳಸುವ ಖಯಾಲಿ ಹೆಚ್ಚಿನ ರೋಗಿಗಳಿಗೆ ಇದೆ. ಒಂದೆಡೆ ಔಷಧಿ ನಿಲ್ಲಿಸಿದರೆ ಖಾಯಿಲೆ ಮರುಕಳಿಸಿದರೆ ಎಂಬ ಭಯ, ಮತ್ತೊಂದೆಡೆ ಔಷಧಿ ಜಾಸ್ತಿ ಸೇವಿಸಿದಲ್ಲಿ ರೋಗ ಬರುವ ಪ್ರಮೇಯ ಇಲ್ಲ ಎಂಬ ಹುಚ್ಚು ಭಾÀ್ರಂತಿ. ಈ ಕಾರಣಗಳಿಂದಾಗಿ ಹೆಚ್ಚಿನ ರೋಗಿಗಳು ವೈದ್ಯರು ಕೆಲವು ವಾರಗಳ ಅಥವಾ ತಿಂಗಳುಗಳಿಗೆ ನೀಡಿದ ಔಷಧಿಯನ್ನು ಜೀವನ ಪರ್ಯಂತ ವೈದ್ಯರ ಅನುಮತಿ ಇಲ್ಲದೆ ಸೇವಿಸುವುದು ದುರಂತವೇ ಸರಿ. ನಮ್ಮ ಭಾರತದಂತಹಾ ರಾಷ್ಟ್ರದಲ್ಲಿ ಎಲ್ಲ ಔಷಧಿಗಳೂ ಮೆಡಿಕಲ್ ಶಾಪ್ಗಳಲ್ಲಿ ವೈದ್ಯರ ಭೆÉೀಟಿ ಮತ್ತು ಚೀಟಿ ಇಲ್ಲದೆ ಸಿಗುವ ಕಾರಣದಿಂದಾಗಿ ಹೆಚ್ಚಿನ ರೋಗಿಗಳು ಔಷಧಿಗಳ ದಾಸರಾಗಿದ್ದಾರೆ ಎಂದರೂ ತಪ್ಪಲ್ಲ. ಈ ರೀತಿಯ ಮಾತ್ರೆ ತಿನ್ನುವ ಖಯಾಲಿ ಮಾದಕ ದ್ರವ್ಯಗಳ ವ್ಯಸನದಷ್ಟೇ ಅಪಾಯಕಾರಿ ಮತ್ತು ಅನಾರೋಗ್ಯಕರ.
ಮಾರಕ ದ್ರವ್ಯ ವ್ಯಸನಿಗಳನ್ನು ಗುರುತಿಸುವುದು ಹೇಗೆ ?
ಮಾದಕ ದ್ರವ್ಯ ಸೇವಿಸುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಹದಗೆಡುತ್ತದೆ. 1. ಹಸಿವಿಲ್ಲದಿರುವುದು, ದೇಹದ ತೂಕ ಕಡಿಮೆಯಾಗುವುದು. ಒಮ್ಮೆ ಮಾದಕ ದ್ರವ್ಯ ಸೇವಿಸಿದ ಬಳಿಕ ದಿನವಿಡೀ ಆಹಾರ ಸೇವಿಸದೇ ಇರಬಹುದು. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. 2. ನಿದ್ರಾ ಹೀನತೆ, ಮಾದಕ ದ್ರವ್ಯ ಸೇವಿಸಿದ ಬಳಿಕ ವ್ಯಕ್ತಿ ಭ್ರಮಾಲೋಕದಲ್ಲಿ ವಿಹರಿಸುತ್ತಿರುತ್ತಾನೆ. ಮತ್ತು ದಿನವೊಂದರಲ್ಲಿ ಒಂದೆರಡು ಗಂಟೆ ಮಾತ್ರ ನಿದ್ರಿಸುತ್ತಾನೆ. ನಿದ್ರೆ ಬರುವುದೇ ಇಲ್ಲ. 3. ಮಲಬದ್ಧತೆ ಉಂಟಾಗುತ್ತದೆ. ಕಾಲಕಾಲಕ್ಕೆ ಸರಿಯಾಗಿ ಆಹಾರ ಸೇವಿಸದೆ ಮಲಬದ್ಧತೆ ಉಂಟಾಗಬಹುದು. 4. ಸಣ್ಣ ಸಣ್ಣ ವಿಚಾರಕ್ಕೆ ಸಿಡುಕುವುದು, ಮಾನಸಿಕ ಖಿನ್ನತೆ, ಮಾನಸಿಕ ಉದ್ವೇಗ ಕಂಡು ಬರುತ್ತದೆ. 5. ವ್ಯಕ್ತಿ ಒಬ್ಬನೆ ತಮ್ಮ ಪಾಡಿಗೆ ತಾನು ಮಾತನಾಡುತ್ತಿರುತ್ತಾನೆ. ಭ್ರಮಾ ಲೋಕದಲ್ಲಿ ತೇಲಾಡುತ್ತಿರುತ್ತಾನೆ. 6. ಕಲಿಕೆಯಲ್ಲಿ ಮುಂದಿದ್ದ ಮಕ್ಕಳು ನಿಧಾನವಾಗಿ ತನ್ನ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ.
ಮಾದಕ ವಸ್ತು ಚಟಕ್ಕೆ ಬೀಳದಂತೆ ತಡೆಗಟ್ಟುವುದು ಹೇಗೆ?
1. ಹದಿಹರೆಯದಲ್ಲಿ ಬೆಳೆಯುವ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. 2. ಅತಿಯಾದ ಒತ್ತಡ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸಬಾರದು. ನಮ್ಮ ನಿರೀಕ್ಷೆಗಳಿಗೆ ಕಡಿವಾಣ ಹಾಕಿ ಮಕ್ಕಳ ಮೇಲೆ ವಿಪರೀತ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು. 3. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅನಗತ್ಯವಾಗಿ ಅವರಿಗೆ ಬೈದು, ಹೊಡೆದು, ಬುದ್ಧಿ ಹೇಳುವುದನ್ನು ಬಿಟ್ಟು, ಆಪ್ತಮಿತ್ರರಂತೆ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಅವರಿಗೆ ಸೂಕ್ತ ಸಾಂತ್ವನ ಕೊಡಬೇಕು. ಇದು ತಂದೆ ತಾಯಿಂದಿರ ಆದ್ಯ ಧರ್ಮ. 4. ಮಕ್ಕಳ ಮೇಲೆ ಅತೀಯಾದ ನಿರೀಕ್ಷೆಗಳನ್ನು ಹೇರಿ, ಒತ್ತಡದ ಸನ್ನಿವೇಶಗಳನ್ನು ಮಾಡಿಕೊಡಬಾರದು. ತಮ್ಮ ಮಕ್ಕಳ ಸಾಮಥ್ರ್ಯ ಮತ್ತು ಬುದ್ದಿವಂತಿಕೆಗಳ ಅರಿವು ಹೆತ್ತವರಿಗೆ ಇರಬೇಕು. ಅವರ ಸಾಮಥ್ರ್ಯ ಮತ್ತು ಬುದ್ಧಿಶಕ್ತಿಗೆ ಮೀರಿದ ಗುರಿಗಳನ್ನು ಸಾಧಿಸುವಂತೆ ಇವರಿಗೆ ಒತ್ತಡ ತಂದಲ್ಲಿ ವ್ಯಕ್ತಿರಿಕ್ತ ಪರಿಣಾಮ ಉಂಟಾಗಬಹುದು. ತಾವು ಸಾಧಿಸಲಾಗದ ಗುರಿಗಳನ್ನು ತಮ್ಮ ಮಕ್ಕಳಾದರೂ ಸಾಧಿಸಲಿ ಎಂಬ ಹುಂಬತನಕ್ಕೆ ಪ್ರಯತ್ನಿಸಲೇ ಬಾರದು. 5. ಮಕ್ಕಳನ್ನು ಅತಿಯಾಗಿ ಮುದ್ದುಮಾಡಿ, ಕೈತುಂಬಾ ಹಣ ನೀಡಿ, ಕೇಳಿದ್ದೆಲ್ಲಾ ನೀಡಿದ್ದಲ್ಲಿ ದಾರಿ ತಪ್ಪುವ ಎಲ್ಲಾ ಸಾಧ್ಯತೆ ಇರುತ್ತದೆ. ಮಾಹಿತಿ ತಂತ್ರಜ್ಞಾನ, ಅಂತರ್ಜಾಲದ ದುರ್ಬಳಕೆಯಿಂದ, ಹದಿಹರೆಯದ ಮಕ್ಕಳು ಬಹುಬೇಗ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಈ ದಿಸೆಯಲ್ಲಿ ಹೆತ್ತವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನಮ್ಮ ಮಕ್ಕಳ ಸಾಮಥ್ರ್ಯದ ಅರಿವಿನ ಜೊತೆಗೆ, ಹೆತ್ತವರು ತಮ್ಮ ಸ್ಥಾನಮಾನದ ಬಗ್ಗೆ ಹೆಚ್ಚು ಪ್ರಾಶಾಸ್ತ ಕೊಡದೆ ಮಕ್ಕಳನ್ನು ಮಕ್ಕಳ ರೀತಿಯಲ್ಲಿ ಬೆಳೆಸಿದ್ದಲ್ಲಿ ಅವರು ಮುಂದೆ ಸಮಾಜದ ಸತ್ಪ್ರಜೆ ಆಗಬಹುದು. ಅದರಲ್ಲೇ ನಮ್ಮ ನಿಮ್ಮ ಮತ್ತು ಸಮಾಜದ ಹಿತ ಅಡಗಿದೆ.
ಮುಕ್ತಾಯಕ್ಕೆ ಮುನ್ನ
ವಿಶ್ವದಾದ್ಯಂತ ಜೂನ್ 26ರಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಎಂದು ಆಚರಿಸಲಾಗುತ್ತದೆ. 1987 ರಲ್ಲಿ ಆರಂಭವಾದ ಈ ಆಚರಣೆ, ಜಗತ್ತಿನಾದ್ಯಂತ ‘ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಅದರ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ ಮಾದಕ ವ್ಯಸನಿಗಳನ್ನು ವ್ಯಸನಮುಕ್ತಗೊಳಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಗುರುತರವಾದ ಉದ್ದೇಶವನ್ನು ಹೊಂದಿದೆ. ಒಂದು ಅಂದಾಜು ಮೂಲದ ಪ್ರಕಾರ ಸುಮಾರು 200 ಮಿಲಿಯನ್ ಮಂದಿ ಜಗತ್ತಿನೆಲ್ಲೆಡೆ ಮಾದಕ ದ್ರವ್ಯ ವ್ಯಸನದಿಂದ ಬಳಲುತ್ತಿದ್ದಾರೆ ಮತ್ತು ಜಾಗತಿಕವಾಗಿ ಮಾದಕ ದ್ರವ್ಯಗಳಿಗಾಗಿ ಬಳಸುವ ವೆಚ್ಚÀ ವರ್ಷವೊಂದರಲ್ಲಿ 1,36,500 ಮಿಲಿಯನ್ ಡಾಲರ್ ಎಂದು ತಿಳಿದು ಬಂದಿದೆ. ಅಫೀಮು, ಕೊಕೈನ್, ಹೆರೋಯಿನ್, ಮಾರಿಜುವಾನಾ ಮುಂತಾದ ಮಾದಕ ದ್ರವ್ಯಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದ್ದು, ಇದರ ದುಷ್ಪರಿಣಾಮಗಳ ಅರಿವಿದ್ದೂ, ಯುವಜನತೆ ಮಾದÀಕ ದ್ರವ್ಯಗಳ ಚಟಕ್ಕೆ ದಾಸರಾಗಿ ಸರ್ವಸ್ವವನ್ನೂ ಕಳೆದುಕೊಂಡು ಅನಾರೋಗ್ಯದ ಹಂದರವಾಗಿ ಸಮಾಜಕ್ಕೆ, ಕುಟುಂಬಕ್ಕೆ ಹೊರೆಯಾಗುವುದೇ ಆಧುನಿಕ ಜಗತ್ತಿನ ಕುಚೋಧ್ಯವೇ ಸರಿ.
ಇಂದಿನ ಜೀವನಶೈಲಿ, ಅತಿಯಾದ ಕೆಲಸದ ಒತ್ತಡ, ಸಂಬಂಧಗಳಲ್ಲಿನ ಭಾವನಾತ್ಮಕತೆಯ ಕೊರತೆ, ದಿನ ನಿತ್ಯದ ಜೀವನದಲ್ಲಿನ ಜಂಜಾಟಗಳು, ಯಾಂತ್ರೀಕೃತ ಬದುಕಿನ ನೋವು ಮತ್ತು ಸಂಕಟಗಳು, ದಿನನಿತ್ಯದ ವ್ಯವಹಾರದಲ್ಲಿನ ಆರ್ಥಿಕ ಏರು ಪೇರು, ಇವಲ್ಲೆವೂ ಮೇಳ್ಮೆಸಿ ನಮ್ಮ ಮನಸ್ಸು ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಮನುಷ್ಯ ಮಾನಸಿಕ ಖಿನ್ನತಗೆ ಬಲಿಯಾಗುತ್ತಾನೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಬಲಿಯಾಗುತ್ತಿರುವವರ ಸಂಖ್ಯೆ ಬಹಳವಾಗಿದ್ದು, ಅದರಲ್ಲೂ ವಿಶೇಷವಾಗಿ ಇಂದು ನಮ್ಮ ಯುವ ಜನತೆ ಹೆಚ್ಚಿನ ಪ್ರಮಾಣದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮಾದಕ ದ್ರವ್ಯಗಳ ದುಷ್ಚಟಗಳಿಗೆ ಬಳಿಯಾಗುವುದು ನಿಜಕ್ಕೂ ವಿಪರ್ಯಾಸ. ಮತ್ತು ನಾಗರೀಕ ಜಗತ್ತಿನ ದುರಂತವೇ ಸರಿ. ಈ ದಿಸೆಯಲ್ಲಿ ನಾವು ಹಿರಿಯವರೆಲ್ಲಾ ಸೇರಿ ಹದಿಹರೆಯದ ಚಂಚಲ ಮನಸ್ಸಿನ ಯುವ ಜನತೆಗೆ ಹೆಚ್ಚಿನ ಆತ್ಮ ವಿಶ್ವಾಸ ತುಂಬಬೇಕು. ಮತ್ತು ಒತ್ತಡ ನಿರ್ವಹಿಸಲು ಸಹಕರಿಸಬೇಕು. ಮತ್ತು ಮಾದಕ ವಸ್ತುಗಳ ಮೊರೆ ಹೋಗದಂತೆ ಸರಿಯಾದ ಮಾರ್ಗದರ್ಶನ ನೀಡಬೇಕು. ಹಾಗೇ ಮಾಡಿದ್ದಲ್ಲಿ ಮಾತ್ರ ‘ವಿಶ್ವಮಾದಕ ದ್ರವ್ಯ ವಿರೋಧಿ ದಿನ’ ಆಚರಣೆಗೆ ಹೆಚ್ಚಿನ ಮೌಲ್ಯ ಬರಬಹುದು. ಮತ್ತು ಅದರಲ್ಲಿಯೇ ನಮ್ಮ ನಾಡು, ದೇಶ ಮತ್ತು ವಿಶ್ವದ ಶಾಂತಿ ಮತ್ತು ಸಾಮರಸ್ಯ ಅಡಗಿದೆ.
ಡಾ|| ಮುರಲೀ ಮೋಹನ್ಚೂಂತಾರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.