(www.vknews.in) ಜಗದ್ವಿಖ್ಯಾತ ಜಾಮಿಅ ದಾರುಸ್ಸಲಾಂ ನಂದಿ ಅರಬಿಕ್ ಕಾಲೇಜಿನಲ್ಲಿ “ದಾರಿಮಿ”ಬಿರುದು ಪ್ರಧಾನ ಕಾರ್ಯಕ್ರಮ ಪೆಬ್ರವರಿ ಕೊನೆಯ ವಾರದಲ್ಲಿ ನಡೆಯಲಿದ್ದು ಇದರ ಪ್ರಯುಕ್ತ ಪೆಬ್ರವರಿ 18 ರಂದು
“ಸಮಸ್ತ” ದ ವಿವಿಧ ಪೋಷಕ ಸಂಘಟನೆಗಳ ಸಹಕಾರದೊಂದಿಗೆ ದಾರಿಮಿ ಒಕ್ಕೂಟದ ವತಿಯಿಂದ ನಡೆಯಲಿರುವ ರಾಜ್ಯ ಮಟ್ಟದ ಬೃಹತ್ ಸುನ್ನೀ ಸಮಾವೇಶದ ಪ್ರಚಾರಕಾರ್ಯವು ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯಲಿದ್ದು ಇದಕ್ಕೆ ಮಿತ್ತೂರು ಸಿರಾಜುಲ್ ಹುದಾ ಮಸೀದಿ ಸಭಾಂಗಣದಲ್ಲಿ ಅಜ್ಮೀರ್ ಮೌಲಿದ್ ನೊಂದಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಸ್ಥಳೀಯ ಖತೀಬ್ ಮಜೀದ್ ದಾರಿಮಿ ಪ್ರಾರ್ಥನೆ ನೆರವೇರಿಸಿದರು. ಉದ್ಘಾಟಿಸಿ ಮಾತನಾಡಿದ ದಾರಿಮಿ ಉಲಮಾ ಒಕ್ಕೂಟದ ಎಸ್ ಬಿ ದಾರಿಮಿ, ಕೆಲವರ ರಾಜಕೀಯ ಹಿತಕ್ಕೋಸ್ಕರ ಮುಸ್ಲಿಂ ಸಮುದಾಯವನ್ನು ವಿನಾ ಕಾರಣ ನಿರಂತರ ಬೇಟೆಯಾಡಲಾಗುತ್ತಿರುವ ಇಂದಿನ ಸಂಧರ್ಭದಲ್ಲಿ ಯುವಕರು ಯಾವುದೇ ಪ್ರಚೋದನೆಗೆ ಒಳಗಾಗದೇ ಒಳಿತಿಗಾಗಿ ನಿರಂತರ ಪ್ರಾರ್ಥನೆ ಮಾಡುವುದರ ಜೊತೆಗೆ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಸಮನ್ವಯ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ಸಮುದಾಯವನ್ನು ಸಬಲೀಕರಿಸುವ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ ಎಂದ ಅವರು ನಮ್ಮ ಮಕ್ಕಳು ಡ್ರಗ್ಸ್ ,ಗಾಂಜಾ ,ಮಾದಕ ವ್ಯಸನಗಳ ಗುಲಾಮರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ಸಂಘಟನೆಗಳು ಕಾರ್ಯೊನ್ಮುಖರಾಗ ಬೇಕಿದೆ ಎಂದರು. ಮುಖ್ಯ ಭಾಷಣ ಮಾಡಿದ ಕೆ ಆರ್ ಹುಸೈನ್ ದಾರಿಮಿ ಮಾತನಾಡಿ ದೇಶದಾದ್ಯಂತ ಧಾರ್ಮಿಕ ಕ್ಷೇತ್ರಕ್ಕೆ ದಾರಿಮಿ,ಪೈಝೀ ಗಳಂತಹ ಅನೇಕ ಬಿರುದು ದಾರಿಗಳು ಅನನ್ಯ ಕೊಡುಗೆಗಳನ್ನು ನೀಡುತ್ತಿದ್ದು ಇದಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವ ಸಮುದಾಯದ ಉಮರಾ ನಾಯಕರನ್ನು ಶ್ಲಾಘಿಸಿದರಲ್ಲದೇ ಜನ ಸಾಮಾನ್ಯರು ತಮ್ಮ ದುಡಿತದ ಒಂದಂಶವನ್ನು ಧಾರ್ಮಿಕ ಕಾರ್ಯಕ್ಕೆ ಮೀಸಲಿಡುವುದರಿಂದ ದೀನಿ ಚಟುವಟಿಕೆಗಳು ಸರಾಗವಾಗಿ ಮುಂದುವರೆಯುತ್ತಿದೆ ಎಂದರು. ಸಂಪ್ಯ ಉಸ್ತಾದ್ ಹಮಿದ್ ದಾರಿಮಿ ,ಕೊಡಾಜೆ ಖತೀಬ್ ಅಝೀಝ್ ದಾರಿಮಿ,ಹಂಝ ಮದನಿ ಮಿತ್ತೂರು,ಜಬ್ಬಾರ್ ಅರ್ಶದಿ , ಇಬ್ರಾಹಿಂ ದಾರಿಮಿ, ರಮ್ಲಾನ್ ಅಝ್ಹರಿ ,ಅದಂ M M S , ಹಂಝಾ ಕಂದಕ್, ಅಬ್ದುಲ್ ರಹ್ಮಾನ್ ಹಾಜಿ M M S, ಮಿತ್ತೂರು ಮುಹಮ್ಮದ್ ಕಂದಕ್ ,ಯಂಗ್ ಮೆನ್ಸ್ ಅಧ್ಯಕ್ಷ ಹಮೀದ್ ಕಂದಕ್ ,ಅಹ್ಮದ್ ಹಾಜಿ ಕುಕ್ಜರೆಬೆಟ್ಟು ,ಶಾಹುಲ್ ಹಮೀದ್ ಕುಕ್ಕರೆಬೆಟ್ಟು , ಸಿದ್ದೀಕ್ ಕಾರ್ಯದರ್ಶಿ ,ಸ್ವಾದಿಕ್ ಕಾರ್ಯದರ್ಶಿ ಇಬ್ರಾಹಿಂ ಕಲೀಲ್ ,ಅಚೋನ್ ಹಾಜಿ, ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ಹಾರಿಸ್ ಕೌಸರಿ ಕೋಲ್ಪೆ ಸ್ವಾಗತಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.