(www.vknews.in) ; ಸುನ್ನಿ ಸಂಘ ಕುಟುಂಬದ ಕಾರ್ಯ ಚಟುವಟಿಕೆಗಳನ್ನು ಉದ್ದೇಶಿಸಿ ನೂತನವಾಗಿ ಖರೀದಿಸಿದ ಸ್ಥಳಕ್ಕೆ ಸಮಸ್ತ ಕೇರಳ ಕೇಂದ್ರ ಮುಶಾವರ ಕಾರ್ಯ ದರ್ಶಿ- ಸಿರಾಜುಲ್ ಹುದಾ ಕುಟ್ಯಾಡಿ ಇದರ ಸ್ಥಾಪಕರು, ಹಿರಿಯ ವಿಧ್ವಾಂಸರಾದ ಶೈಖುನಾ ಪೇರೋಡ್ ಉಸ್ತಾದ್ ರವರು ಭೇಟಿ ನೀಡಿದರು. ಸುನ್ನೀ ಅಂಗ ಸಂಸ್ಥೆಗಳಾದ ಎಸ್ಸೆಸ್ಸೆಫ್, ಎಸ್ ವೈ ಎಸ್, ಮುಸ್ಲೀಂ ಜಮಾ ಅತ್,ಎಸ್ ಬಿ ಎಸ್ ಜೋಗಿಬೆಟ್ಟು ಶಾಖೆ ಇದರ ಕಾರ್ಯಚರಣೆಗೆ ಅಗತ್ಯವಾಗಿ ಕೇಂದ್ರವೊಂದು ಬೇಕಾಗಿತ್ತು.
ಸರ್ವ ಕಾರ್ಯಕರ್ತರ ಸಹಕಾರದಿಂದ ಇತ್ತೀಚೆಗೆ ಜಾಗ ಖರೀದಿಸಲಾಯಿತು. ಪ್ರಸ್ತುತ ಸ್ಥಳಕ್ಕೆ ಪೇರೋಡ್ ಉಸ್ತಾದರು ಭೇಟಿ ನೀಡಿ ಯಶಸ್ಸಿಗಾಗಿ ಪ್ರಾರ್ಥಿಸಿದರು.ಕಾರ್ಯಕ್ರಮದಲ್ಲಿ ಎಸ್ ವೈ ಎಸ್ , ಮುಸ್ಲಿಂ ಜಮಾಅತ್ ಸಾರಥಿಗಳಾದ ಜಿ.ಎಂ ಮಹಮ್ಮದ್ ಕುಞಿ, ಕರೀಂ ಹಾಜಿ, ಅಶ್ರಫ್ ಮಟನ್, ಕರೀಂ ಬಾಗ್ಲೋಡಿ ಕೆಸಿ ಎಫ್ ನಾಯಕರಾದ ರಶೀದ್ ಜೋಗಿಬೆಟ್ಟು ಎಸ್ಸೆಸ್ಸೆಫ್ ಕಾರ್ಯದರ್ಶಿಯಾದ ಸಲೀತ್, ಮತ್ತು ಸದಸ್ಯರಾದ ಅಸ್ಕರ್, ಜಾಫರ್, ಉಸಾಮತ್, ಸಾಬಿತ್, ಶಾಕಿರ್ ಮತ್ತು ಅಝೀಝ್ ರವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.