(www.vknews.in) ; ವಿಶ್ವದ ಪ್ರಮುಖ ಡೇಟಾ ಪರಿಹಾರ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾಗಿರುವ iMerit, ಬೆಂಗಳೂರು ಹೊರತಾದ ಕರ್ನಾಟಕದ ಡಿಜಿಟಲ್ ಎಕಾನಮಿ ಮಿಷನ್ ನ (KDEM) ಭಾಗವಾಗಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ(HDB) ಕ್ಲಸ್ಟರ್ ನಲ್ಲಿ ಆಗುವ ಅಸಾಧಾರಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತದಲ್ಲಿ ಕಂಪನಿಯ ಕಾರ್ಯಾಚರಣೆಗಳು ಆರಂಭವಾದಾಗಿನಿಂದಲೂ ಮಹತ್ತರವಾದ ರೀತಿಯಲ್ಲಿ ಬೆಳವಣಿಗೆ ಸಾಧಿಸುತ್ತಾ ಬಂದಿದೆ. ಹುಬ್ಬಳ್ಳಿಯ ಸಶಕ್ತ ಪರಿಸರವನ್ನು ಉನ್ನತಿಗೆ ಕೊಂಡೊಯ್ಯುತ್ತಿದೆ ಮತ್ತು ಟೆಕ್ ಹಬ್ ಆಗಿ ಬೆಳೆಯುತ್ತಿದೆ. ಇಲ್ಲಿ ಗಮನಾರ್ಹವಾದ ಅಂಶವೆಂದರೆ ಹುಬ್ಬಳ್ಳಿಯಲ್ಲಿನ ಎಐ ತರಬೇತಿಗಾಗಿ iMerit ನ ಉತ್ಕೃಷ್ಟತೆ ಕೇಂದ್ರವು ಡೇಟಾ ಟಿಪ್ಪಣಿ ಸಾಮರ್ಥ್ಯಗಳಿಂದ ಬೆಂಬಲಿತವಾಗಿದೆ. ಇದು ಪ್ರಪಂಚದಾದ್ಯಂತ ಸ್ಟಾರ್ಟ್ ಎಐ-ಆಧಾರಿತ ಪರಿಹಾರಗಳನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ನೀತಿಯ ಮೂಲಕ ಅಂತರ –ಸಾಂಸ್ಥಿಕ ಸಹಕಾರ ಮತ್ತು ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಮತ್ತು ಕರ್ನಾಟಕ ಆಕ್ಸಲರೇಶನ್ ನೆಟ್ ವರ್ಕ್ ನಂತಹ ಸರ್ಕಾರದ ನೆರವಿನೊಂದಿಗೆ ತಾಂತ್ರಿಕ ಪ್ರಗತಿ, ಹೂಡಿಕೆಗಳು ಮತ್ತು ಅನೇಕ ಹೊಸ ಯುಗದಲ್ಲಿ ನಾವೀನ್ಯತೆಗಳ ಬಗ್ಗೆ ಜ್ಞಾನ ಹಂಚಿಕೆಗೆ ಅನುಕೂಲವಾಗುವ ರೀತಿಯಲ್ಲಿ ಉತ್ತೇಜನ ನೀಡುವ ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಎಡ್ ಟೆಕ್ ಮತ್ತು ಅಗ್ರಿ ಟೆಕ್ ನಂತಹ ಡೊಮೇನ್ ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಉದಯೋನ್ಮುಖ ಹಬ್ ಗಳಲ್ಲಿ ಸರಿಯಾದ ಅವಕಾಶಗಳೊಂದಿಗೆ ಹೂಡಿಕೆದಾರರನ್ನು ಸಂಪರ್ಕಿಸುವ ಮೂಲಕ ಮತ್ತು ಕಂಪನಿಗಳನ್ನು ಸ್ಥಾಪಿಸಲು ಆಹ್ವಾನಿಸುವುದರೊಂದಿಗೆ ಬಿಯಾಂಡ್ ಬೆಂಗಳೂರು ಯೋಜನೆಯು ಭವಿಷ್ಯದ ಉದ್ಯೋಗಗಳ ಸೃಷ್ಟಿಗೆ ನೆರವು ಮಾಡುತ್ತಿದೆ. ಈಗಾಗಲೇ ಎಕ್ಸಲರೇಟ್ ಟೆಕ್ನಾಲಜೀಸ್, ಐ-ಟ್ರಯಾಂಗಲ್, ಝೆಲಿಯೆಟ್, ಥರ್ಡ್ ಐ ಡೇಟಾ ಮತ್ತು ಇನ್ಫೋಸಿಸ್, IonIdea, 15 ಡಿಜಿಟಲ್, dhiOmics, IMOS AGನಂತಹ ಕಂಪನಿಗಳು ಎಚ್ ಡಿಬಿ ಕ್ಲಸ್ಟರ್ ನಲ್ಲಿ ಆರಂಭಗೊಂಡಿವೆ.
ಹುಬ್ಬಳ್ಳಿಯು 200 ಎಕರೆ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ ನ ಕೇಂದ್ರಸ್ಥಾನವಾಗಿದೆ. 2,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ 300 ಕೋಟಿ ರೂಪಾಯಿಗೂ ಹೆಚ್ಚು ಯೋಜಿತ ಹೂಡಿಕೆಯನ್ನು ಆಕರ್ಷಿಸುತ್ತದೆ.
ಸುಮಾರು 18 ತಿಂಗಳುಗಳಲ್ಲಿ ಎಚ್ ಬಿಡಿ ಕ್ಲಸ್ಟರ್ ನಲ್ಲಿ ಎಂಟು ಐಟಿ ಕಂಪನಿಗಳು ಹೂಡಿಕೆ ಮಾಡಿವೆ ಮತ್ತು ಅಸ್ತಿತ್ವದಲ್ಲಿರುವ ಮೂರು ಕಂಪನಿಗಳು ತಮ್ಮ ಸಾಮರ್ಥ್ಯವನ್ನು ವಿಸ್ತರಣೆ ಮಾಡಿಕೊಂಡಿವೆ. ಇದಲ್ಲದೇ, ಮುಂಬರುವ ದಿನಗಳಲ್ಲಿ ಇನ್ನೂ 40 ಕ್ಕೂ ಹೆಚ್ಚು ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಆರಂಭಿಸುವ ನಿರೀಕ್ಷೆ ಇದೆ. ಇದರಿಂದ 15000 ಕ್ಕೂ ಹೆಚ್ಚು ಉದ್ಯೋಗಾವಕಾಶ ದೊರೆಯಲಿದೆ. ಕೆಡಿಇಎಂ ತನ್ನ ಸ್ಥಳೀಯ ಉದ್ಯಮ ಸಲಹೆಗಾರರು ಮತ್ತು ಸದೃಢವಾದ ಪರಿಸರ ವ್ಯವಸ್ಥೆಯ ಪಾಲುದಾರರೊಂದಿಗೆ ಎಚ್ ಬಿಡಿ ಕ್ಲಸ್ಟರ್ ನಲ್ಲಿ ದೃಢವಾದ ಸಣ್ಣ ಮತ್ತು ಮಧ್ಯಮ ಉದ್ಯಮದ ಪರಿಸರ ವ್ಯವಸ್ಥೆಗೆ ಮೂಲಸೌಕರ್ಯ ಹಾಗೂ ಸ್ಥಳೀಯ ಆರ್ಥಿಕತೆಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ಡಿಜಿಟಲ್ ಉಪಕರಣಗಳ ಪ್ರವೇಶವನ್ನು ಬೆಂಬಲಿಸುವ ಕೆಲಸ ಮಾಡುತ್ತಿದೆ. ಇದಲ್ಲದೇ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ನಗರಗಳಲ್ಲಿ ಆರೋಗ್ಯಕರ, ಸಮಾನ ನಿರೀಕ್ಷೆಗಳನ್ನು ಪ್ರತಿಬಿಂಬಿಸುವ ಸಾಮಾಜಿಕ ಮತ್ತು ಕೈಗಾರಿಕಾ ಸೇರ್ಪಡೆ ಸೂಚ್ಯಂಕಗಳ ಆಧಾರದ ಮೇಲೆ ಮಹಿಳೆಯರಿಗೆ ಪ್ರಾಶಸ್ತ್ಯವಾದ ಪ್ರಮುಖ 11 ಭಾರತೀಯ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಹುಬ್ಬಳ್ಳಿಯಲ್ಲಿ ತಮ್ಮ ಕಾರ್ಯಾಚರಣೆ ಆರಂಭಿಸುತ್ತಿರುವ ಬಗ್ಗೆ ಮಾತನಾಡಿದ iMerit ನ ಸಂಸ್ಥಾಪಕ & ಸಿಇಒ ರಾಧಾ ಬಸು ಅವರು, “ಹುಬ್ಬಳ್ಳಿಯು ಕಡಿಮೆ ಅಪಾಯದ ಸಾಧ್ಯತೆಯನ್ನು ಹೊಂದಿರುವ ನಗರವಾಗಿದೆಯಷ್ಟೇ ಅಲ್ಲ. ಇಲ್ಲಿ ಹೆಚ್ಚಿನ ಪ್ರತಿಫಲದ ಅವಕಾಶವಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಇಲ್ಲಿ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಪ್ರೀತಿಯಿದೆ. ಐಐಟಿ ಧಾರವಾಡ ಮತ್ತು ದೇಶಪಾಂಡೆ ಸ್ಟಾರ್ಟಪ್ ಗಳಂತಹ ಉನ್ನತ ಮಟ್ಟದ ಸಂಸ್ಥೆಗಳು ಇರುವುದು ಇತರ ಸಂಸ್ಥೆಗಳಿಗೆ ಉತ್ತೇಜಕವಾಗಿದೆ. ಇದರ ಜೊತೆಗೆ ಇಲ್ಲಿ ವ್ಯವಹಾರಗಳನ್ನು ನಡೆಸುವ ವಿಧಾನಗಳು ಸುಲಭವಾಗಿವೆ. ಶೂನ್ಯ ನಷ್ಟ ದರ ಮತ್ತು ಅದ್ಭುತವಾದ ಪಾಲುದಾರಿಕೆ ಪರಿಸರ ವ್ಯವಸ್ಥೆಯನ್ನು ಕಾಣಬಹುದಾಗಿದೆ.
ಇದರ ಹೊರತಾಗಿಯೂ ನಾವು ನಿರೀಕ್ಷೆಗೂ ಮೀರಿದ ಯಶಸ್ಸನ್ನು ಗಳಿಸಿದ್ದೇವೆ. ನಾವು ನಮ್ಮ ಸಂಸ್ಥೆಯನ್ನು ಇಲ್ಲಿ 250 ಜನರೊಂದಿಗೆ ಆರಂಭಿಸಿದ್ದೆವು. ಈಗ ಸಿಬ್ಬಂದಿ ಸಂಖ್ಯೆ 600 ಕ್ಕೂ ಹೆಚ್ಚಿದ್ದು, ಇನ್ನೂ ವಿಸ್ತಾರಗೊಳ್ಳುತ್ತಿದೆ. ಇಲ್ಲಿಗೆ ಸ್ಥಳೀಯ ಪ್ರತಿಭೆಗಳನ್ನು ಸೇರಿಸುವ ಮೂಲಕ ದೊಡ್ಡ ಲಿಂಕ್ ಭಾಗವಾಗಿರುವ ನಾವೀನ್ಯತೆಯ ಉತ್ತೇಜಿಸುವ ಮೂಲಕ ಹಾಗೂ ಹುಬ್ಬಳ್ಳಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಈ ಪ್ರಯತ್ನವು ಬಿಯಾಂಡ್ ಬೆಂಗಳೂರು ದೃಷ್ಟಿಗೆ ಉತ್ತಮ ಕೊಡುಗೆ ನೀಡಲು ಯಶಸ್ವಿಯಾಗಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತಿದೆ. ಈ ನಗರವನ್ನು ಆಯ್ಕೆ ಮಾಡಿದ್ದಕ್ಕಾಗಿ ನಮಗೆ ಸಂತೋಷವಾಗಿದೆ’’ ಎಂದು ತಿಳಿಸಿದರು.
ಸಂಕಲ್ಪ್ ಸೆಮಿಕಂಡಕ್ಟರ್ ಸಂಸ್ಥಾಪಕರು ಮತ್ತು ದೇಶಪಾಂಡೆ ಫೌಂಡೇಶನ್ ನ ಸಿಇಒ ವಿವೇಕ್ ಪವಾರ್ ಅವರು ಮಾತನಾಡಿ, “ಇಲ್ಲಿ ಉದ್ಯಮಕ್ಕೆ ಸಹಕಾರವಾಗುವ ರೀತಿಯಲ್ಲಿ ಬೆಂಬಲ ದೊರೆಯುತ್ತಿದೆ. ನಾನು ಬೆಂಗಳೂರಿನಲ್ಲಿ ನನ್ನ ಹೈಟೆಕ್ ಸ್ಟಾರ್ಟಪ್ ಅನ್ನು ಆರಂಭಿಸಿದ್ದೆ. ಆದರೆ, ಆರು ತಿಂಗಳೊಳಗೆ ಈ ಸ್ಟಾರ್ಟಪ್ ಅನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡಿದ್ದೇನೆ. ಏಕೆಂದರೆ, ಇಲ್ಲಿ ಉತ್ತಮವಾದ ಉದ್ಯಮಶೀಲ ಪರಿಸರ ವ್ಯವಸ್ಥೆ ಇದೆ. ಇದಕ್ಕಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಇನ್ನು ಸಂಕಲ್ಪ್ ಅನ್ನು 2005 ರಲ್ಲಿ ಆರಂಭಿಸಲಾಯಿತು. ಜಾಗತಿಕ ಆರ್ಥಿಕ ಕುಸಿತದಿಂದ 2008 ರಲ್ಲಿ ಹಿಂಜರಿತವಿದ್ದರೂ 2009 ರಲ್ಲಿ ಆದಾಯವನ್ನು ದ್ವಿಗುಣಗೊಳಿಸಿತು. ಇದೀಗ ಹುಬ್ಬಳ್ಳಿಯಲ್ಲಿ ಕಡಿಮೆ ವೆಚ್ಚದಲ್ಲಿ ಕಂಪನಿಯನ್ನು ಸ್ಥಾಪಿಸಲು ಬೆಂಬಲ ದೊರೆತ್ತಿದ್ದರಿಂದ ನಾವು ಯಶಸ್ವಿಯಾಗಿದ್ದೇವೆ ಮತ್ತು ಸುಸ್ಥಿರವಾದ ವ್ಯಾಪಾರವನ್ನು ನಿರ್ಮಿಸಲು ಸುಲಭವಾಯಿತು.
ಈ ಎಲ್ಲಾ ಸೌಲಭ್ಯಗಳು ಮತ್ತು ಪರಿಸರ ವ್ಯವಸ್ಥೆಯಿಂದಾಗಿ ಈ ಪ್ರದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತಾಗಿದೆ. ಅಲ್ಲದೇ, ಜಾಗತಿಕ ಮಟ್ಟದ ಕಂಪನಿಗಳನ್ನು ಕೈಬೀಸಿ ಕರೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಹುಬ್ಬಳ್ಳಿಯಲ್ಲಿ ತಮ್ಮ ಆದ್ಯತೆಯ ವಾಣಿಜ್ಯ ತಾಣವನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾನು iMerit ಗೆ ಅಭಿನಂದಿಸುತ್ತೇನೆ ಹಾಗೂ ಕೆಡಿಇಎಂ ಮತ್ತು ಉದ್ಯಮ ಬೆಂಬಲವನ್ನು ಮುಂದುವರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ’’ ಎಂದು ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನ ಸಿಇಒ ಸಂಜೀವ್ ಗುಪ್ತ ಅವರು ಮಾತನಾಡಿ, “ಹೆಚ್ಚು ಕ್ರಿಯಾಶೀಲ-ಆಧಾರಿತ ಪ್ರಗತಿಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಹೊರಗಿನ ಭೌಗೋಳಿಕತೆಯನ್ನು ಅಭಿವೃದ್ಧಿಪಡಿಸುವಲ್ಲಿ ರಾಜ್ಯ ಸರ್ಕಾರವನ್ನು ನಿರಂತರವಾಗಿ ಹೂಡಿಕೆ ಮಾಡುತ್ತಿದೆ. ನಮ್ಮ ನೀತಿ, ಉದ್ಯಮ ಪಾಲುದಾರಿಕೆಗಳು ಮತ್ತು ಯೋಜನೆಗಳ ಸಂಯೋಜನೆಯು ಜಿಸಿಸಿಗಳಿಗೆ ಸ್ಪಷ್ಟವಾದ ಪ್ರಯೋಜನಗಳನ್ನು ಅರಿತುಕೊಳ್ಳಲು ಸಹಾಯ ಮಾಡಿದೆ. ವ್ಯಾಪಾರ ಮಾಡುವ ಸುಲಭತೆ, ಪ್ರತಿಭೆಯ ಸ್ವಾಧೀನ ಮತ್ತು ಗ್ರಾಹಕ ಪರಿಸರ ವ್ಯವಸ್ಥೆಗೆ ಪ್ರವೇಶವನ್ನು ಕಲ್ಪಿಸುತ್ತದೆ. ಬಜೆಟ್ ನಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಸ್ಕಿಲ್ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ಗಳಿಗಾಗಿ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಅನ್ನು ಘೋಷಣೆ ಮಾಡಿದೆ. ಇದು ಉದಯೋನ್ಮುಖ ಟೆಕ್ ಕ್ಲಸ್ಟರ್ ಗಳನ್ನು ಬೆಳೆಸುವ ನಮ್ಮ ದೃಷ್ಟಿಗೆ ಅನುಗುಣವಾಗಿದೆ.
ಹುಬ್ಬಳ್ಳಿಯಲ್ಲಿ ನಮ್ಮ ಉದ್ಯಮದ ನಾಯಕ ಸಂಸ್ಥೆಯಾಗಿ ಅನ್ನು ಹೊಂದಲು ಮತ್ತು ಡಿಜಿಟಲ್ ಆರ್ಥಿಕತೆಯನ್ನು ಚಾಲನೆ ಮಾಡಲು ನಮಗೆ ಸಂತಸವಾಗುತ್ತದೆ. ಅದೇ ರೀತಿ ಕೆಡಿಇಎಂ ಉದ್ಯಮದ ಬೆಳವಣಿಗೆಯ ವೇಗವರ್ಧಕ ಶಕ್ತಿಯಾಗಿ ನಮ್ಮೊಂದಿಗೆ ಸದಾ ಇರಲಿದೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.