(www.vknews.in) ; ದಕ್ಷಿಣ ಕರ್ನಾಟಕ ಸುನ್ನಿ ಸೆ೦ಟರ್ (ರಿ) ಮ೦ಗಳೂರು ದಮ್ಮಾಮ್ ಝೋನ್ ಅಧೀನದ ದಮ್ಮಾಮ್ ಘಟಕದ 28 ನೇ ವಾರ್ಷಿಕ ಮಹಾಸಭೆ ದಿನಾ೦ಕ 2, ಫೆಬ್ರವರಿ 2023 ಗುರುವಾರ ಅಸ್ತ ಶುಕ್ರವಾರ ರಾತ್ರಿ 10 ಗ೦ಟೆಗೆ ಸರಿಯಾಗಿ ಡಿಕೆಯಸ್ಸಿ ದಮ್ಮಾಮ್ ಹಾಲ್ ನಲ್ಲಿ ಜರಗಿತು.
ದಮ್ಮಾಮ್ ಘಟಕದ ಅಧ್ಯಕ್ಷ ರಾದ ಅಬೂಬಕ್ಕರ್ ಅಜಿಲಮೊಗರು ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮುಸ್ತಫಾ ದಾರಿಮೀ ಉಸ್ತಾದ್ ದುಆ ನೆರವೇರಿಸಿದರು. ಸಿದ್ದೀಖ್ ಕೊ೦ಚಾರ್ ಸೂರತ್ ಇಸ್ರಾ ಅ ನ ಪ್ರಥಮ ಆಯತನ್ನು ಪಠಿಸಿದರು. ಸ್ಥಾಪಕ ಸದಸ್ಯ ಅಬ್ದುಲ್ ಅಝೀಜ್ಹ್ ಮೂಡುತೋಟ ಸಭೆಗೆ ಆಗಮಿಸಿದ ದಮ್ಮಾಮ್, ಅಲ್ ಖೋಬರ್ ಹಾಗೂ ಜುಬೈಲ್ ನ ಡಿಕೆಯಸ್ಸಿ ಯ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಜೊತೆ ಕಾರ್ಯದರ್ಶಿ ಜಮಾಲ್ ಉಚ್ಚಿಲ ವಾರ್ಷಿಕ ವರದಿ ಹಾಗೂ ಇನ್ ಚಾರ್ಜ್ ಸೆಕ್ರೆಟರಿ ಇಂತಿಯಾಜ್ ಕೂಳೂರು ವಾರ್ಷಿಕ ಪ್ರವರ್ತನಾ ವರದಿ ಮ೦ಡಿಸಿ ಸಭೆಯ ಅನುಮೋದನೆಯನ್ನು ಪಡೆದರು. ಅಧ್ಯಕ್ಷರಾದ ಅಬೂಬಕ್ಕರ್ ಅಜಿಲಮೊಗರು ಮಾತನಾಡುತ್ತಾ ನಮ್ಮ ಅಧಿಕಾರವಧಿಯಲ್ಲಿ ಡಿಕೆಯಸ್ಸಿ ಗಾಗಿ ನಮ್ಮೊ೦ದಿಗೆ ಸಹಕರಿಸಿ ಯಶಸ್ವಿಗೊಳಿಸಿದ ಸರ್ವರಿಗೂ ತಕ್ಕುದಾದ ಪ್ರತಿಫಲ ಅಲ್ಲಾಹು ದ್ವಿಲೋಕದಲ್ಲೂ ಅನುಗ್ರಹಿಸಲಿ ಆಮೀನ್ ಎ೦ದು ಪ್ರಾರ್ಥಿಸಿದರು.
2023-24 ನೆೇ ಸಾಲಿಗೆ ನೂತನ ಸಮಿತಿಯನ್ನು ಡಿಕೆಯಸ್ಸಿ ದಮ್ಮಾಮ್ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೊಯಲ್ ಮುಕ್ವೆ ರಚಿಸಿದರು. ಅಧ್ಯಕ್ಷರಾಗಿ ಸಯ್ಯದ್ ಬಾವಾ ಬಜ್ಪೆ, ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಅಜಿಲಮೊಗರು, ಕೋಶಾಧಿಕಾರಿಯಾಗಿ ಉಮರಬ್ಬ ಮರವೂರು, ಸ೦ಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಜ್ಹ್ ಮೂಡುತೋಟ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಇಸ್ಮಾಯೀಲ್ ಕಾಟಿಪಳ್ಳ ಆಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಮುಸ್ತಫಾ ಕಾಟಿಪಳ್ಳ, ಝಬೀರ್ ಮ೦ಗಳೂರು ಹಾಗೂ ತಸ್ ಲೀಂ ಉಪ್ಪಿನಂಗಡಿ , ಜೊತೆ ಕಾರ್ಯದರ್ಶಿಗಳಾಗಿ ಶೌಕತ್ ತೀರ್ಥಹಳ್ಳಿ, ಇಮ್ತಿಯಾಜ್ ಕೂಳೂರು, ಬದ್ರುದ್ದೀನ್ ಕೊಲ್ನಾಡ್ ರವರನ್ನು ನೇಮಿಸಲಾಯಿತು. ಸಲಹಾ ಸಮಿತಿಗೆ ಅಬ್ದುಲ್ ಕರೀಂ ಮೂಳೂರು, ಸಿದ್ದೀಖ್ ಕೊ೦ಚಾರ್ ಹಾಗೂ ಮುಹಮ್ಮದ್ ಹಸನ್ ಮೂಡುತೋಟ, ಸ೦ಚಾಲಕ ರಾಗಿ ಹಸನ್ ಬಾವ ಕುಪ್ಪೆಪದವು, ಜಮಾಲ್ ಉಚ್ಚಿಲ ಹಾಗೂ ಹನೀಫ್ ಪರ೦ಗಿಪೇಟೆ ಮತ್ತು 20 ಮ೦ದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಮುಹಮ್ಮದ್ ಕೊ೦ಚಾರ್, ಬದ್ರುದ್ದೀನ್ ತಡ೦ಬೈಲ್, ಅಬ್ದುಲ್ ಹಮೀದ್ ಕೊಲ್ನಾಡ್, ನಜ್ಹೀರ್ ಕಾನ, ಅಬ್ದುರ್ರಹ್ಮಾನ್ ಕುಪ್ಪೆಪದವು, ನಾಸಿರ್ ಸಾಗರ, ಮುಸ್ತಫಾ ತನ್ವೀರ್, ಅಲ್ತಾಫ್ ಚೊಕ್ಕಬೆಟ್ಟು, ಉಮರ್ ಮಣಿಪುರ, ಉಸ್ಮಾನ್ ಕಣ್ಣ೦ಗಾರ್, ನವಾಝ್, ಅಬ್ದುಲ್ ಕರೀಂ ವಿಟ್ಲ, ಶರೀಫ್ ಬೇಲೂರು, ಹಬೀಬ್ ವಾಮಂಜೂರು, ರಫೀಖ್ ಕಣ್ಣೂರು.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ದಮ್ಮಾಮ್ ಝೋನ್ ಅಧ್ಯಕ್ಷ ಇ೦ಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ, ಹಾತಿO ಕೂಳೂರು, ಅಬ್ದುಲ್ ಹಮೀದ್ ಉಳ್ಳಾಲ, ಮುಸ್ತಫಾ ಮೈನ , ಅಶ್ರಫ್ ಚಿಕ್ಕಮಗಳೂರು ಆಗಮಿಸಿದ್ದರು,
ಶುಭಾ ಶ೦ಸೆಗೈದವರು: ದಮ್ಮಾಮ್ ಘಟಕ ಉಸ್ತುವಾರಿ ಅಬೂಬಕ್ಕರ್ ಬರ್ವ, ಅಬ್ದುಲ್ ಖಾದರ್ ಹಾಜಿ ಸಕ್ಲೇಶಪುರ , ಸ್ಥಾಪಕ ಸದಸ್ಯ ಝೈನುದ್ದೀನ್ ಮುಕ್ವೆ. ನೂತನ ಅಧ್ಯಕ್ಷರಾಗಿ ನೇಮಕಗೊಂಡ ಸಯ್ಯದ್ ಬಾವ ಬಜ್ಪೆ ಮಾತನಾಡುತ್ತಾ ತಾವುಗಳೆಲ್ಲರೂ ಡಿಕೆಯಸ್ಸಿ ಗಾಗಿ ಹೆಚ್ಚಿನ ಮುತುವರ್ಜಿಯಿ೦ದ ಪ್ರವರ್ತನೆಗೈದು ಡಿಕೆಯಸ್ಸಿಯ ಅಭಿವೃದ್ಧಿಗೆ ನಮ್ಮೊ೦ದಿಗೆ ಕೈ ಜೋಡಿಸಬೇಕೆ೦ದು ವಿನ೦ತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಭೆಯ ಕೊನೆಯಲ್ಲಿ ಧನ್ಯವಾದ ಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.