(www.vknews.in) : ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಸುರತ್ಕಲ್ ಫಾಝಿಲ್ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ಪೈಕಿ ಓರ್ವ ವ್ಯಕ್ತಿಗೆ ತಕ್ಷಣ ಜಾಮೀನು ಲಭ್ಯವಾಗುವ ರೀತಿಯಲ್ಲಿ ಪ್ರಕರಣವನ್ನು ಸಡಿಲ ಗೊಳಿಸಿದ ಪರಿಣಾಮವಾಗಿ,ಆರೋಪಿಯು ಇಂದು ಮುಖ್ಯವಾಗಿ ಇತರರಿಗೆ ಹಣ ಕಾಸಿನ ಬೇಡಿಕೆಗೆ ಬೆದರಿಕೆ ಒಡ್ಡಿದ ಬಗ್ಗೆ ಉಳ್ಳಾಲ ಪೊಲೀಸು ಸ್ಟೇಶನ್ ನಲ್ಲಿ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಇದ್ದು,ಹತ್ಯಾ ಪ್ರಕರಣದಲ್ಲಿ ಪೊಲೀಸರ ಸಡಿಲಿಕೆ ನಿಲುವು ಮತ್ತು ಅಸಮರ್ಪಕ ತನಿಖೆಯೆ ಇಂತಹ ಬೆಳಣಿಗೆಗೆ ಕಾರಣವಾಗಿದೆ.
ಬಿಡುಗಡೆಗೊಂಡ ಆರೋಪಿತರ ಜಾಮೀನುಗಳನ್ನು ರದ್ದುಗೊಳಿಸಿ ತಕ್ಷಣ ಪ್ರಕರಣವನ್ನು ಉನ್ನತ ತನಿಖಾ ತಂಡಕ್ಕೇ ಪ್ರಕರಣವನ್ನು ಸಮರ್ಪಕಗೊಳಿಸಲು ಸರ್ಕಾರ ನಿರ್ದೇಶಿಸಬೇಕಿದೆ ಮತ್ತು ಹತ್ಯಾ ತಂಡಕ್ಕೆ ಹಣಕಾಸಿನ ಭರವಸೆ ನೀಡಿದ ಬಗ್ಗೆ ತನಿಖೆ ನಡೆಸಿ, ಹಣ ಕಾಸು ಒದಗಿಸುವ ಮೂಲವನ್ನು ಮತ್ತು ವ್ಯಕ್ತಿಗಳನ್ನು ಕೂಡಾ ಈ ಪ್ರಕರಣದಲ್ಲಿ ಬಂಧಿಸಬೇಕು.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.