ಕಾಪು (ವಿಶ್ವ ಕನ್ನಡಿಗ ನ್ಯೂಸ್) : ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವಳು ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಿನ್ನೆ ಸಾಯಂಕಾಲ ನಡೆದಿದೆ. ಮಂಗಳೂರಿನ ರೋಶ್ನಿ ಡಿಸೋಜ ಮೃತಪಟ್ಟ ಯುವತಿ.
ತನಗೆ ಮದುವೆ ನಿಶ್ಚಯವಾಗಿದ್ದ ಜೋಯಲ್ ಎಂಬಾತನ ಜೊತೆ ರೋಶ್ನಿ, ಮಂಗಳೂರಿನಿಂದ ಉಡುಪಿಯ ಕಲ್ಮಾಡಿ ಚರ್ಚ್ ಗೆ ಭೇಟಿ ನೀಡಿ ಹಿಂದಕ್ಕೆ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ. ಬ್ಯಾರಿಕೆಡ್ ಗೆ ಡಿಕ್ಕಿ ಹೊಡೆದ ಬೈಕ್ ಉರುಳಿ ಬಿದ್ದಿತ್ತು. ಇದರಿಂದ ಬೈಕ್ ನಿಂದ ಎಸೆಯಲ್ಪಟ್ಟ ರೋಶ್ನಿಯ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಬೈಕ್ ಸವಾರ ಜೋಯಲ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.