(www.vknews.in) ; ಮೊದಲನೆಯ ದಿನ 149ನೇ ಅಧಿವೇಶನದಂದು ವಿಧಾನ ಪರಿಷತ್ ಸದಸ್ಯ ಶ್ರೀ ಡಿ.ಎಸ್.ಅರುಣ್ ಅವರು ಸದನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯನ್ನು ಮಾನ್ಯ ಇಂಧನ ಸಚಿವರಿಗೆ ಪ್ರಶ್ನಿಸುವ ಮೂಲಕ ವಿಷಯ ಪ್ರಸ್ತಾಪಿಸಿದರು.
ಕರ್ನಾಟಕ ರಾಜ್ಯ ಸರ್ಕಾರ ಬಡವರಿಗೆ ಹೊರೆ ಆಗಬಾರದೆಂದು ಹಲವು ಯೋಜನೆಗಳು ಜಾರಿಗೆ ತರುತ್ತಿದೆ, ಅದರಲ್ಲಿ ಸರ್ಕಾರದ ಭಾಗ್ಯ ಜ್ಯೋತಿ ಹಾಗೂ ಕುಟಿರ ಜ್ಯೋತಿ,ಅಮೃತ ಜ್ಯೋತಿ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತಿದೆ, ಬಡವರಿಗೆ ನಮ್ಮ ಸರ್ಕಾರ ಭಾಗ್ಯಜ್ಯೋತಿ ಯೋಜನೆ ಅಡಿ 40 ಯೂನಿಟ್ ಫ್ರೀ ವಿದ್ಯುತ್ ನೀಡುತ್ತಿದ್ದು ಈಗ ಅದು 70 ಯೂನಿಟ್ ಗಿಂತ ಜಾಸ್ತಿ ನೀಡಲು ನಿರ್ಧರಿಸಿದೆ, ಇದು ನಮ್ಮ ಘನ ಸರ್ಕಾರದ ಹಲವಾರು ಜನಪರ ಯೋಜನೆಗಳಲ್ಲೊಂದು, ಆದರೆ ಕೆಲವು ಕೆಇಬಿ ಅಧಿಕಾರಿಗಳು ಮಾಹಿತಿ ಕೊರತೆ ಅಥವಾ ಅಂದ ದರ್ಬಾರಿನಿಂದ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಬಡವರ್ಗದ ಜನರು ವಾಸಿಸುತ್ತಿರುವ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿರುವ ಘಟನೆ ನನ್ನ ಕ್ಷೇತ್ರವಾಗಿರುವ ದಾವಣಗೆರೆ ಜಿಲ್ಲೆಯ ಹರಿಹರ ಚನ್ನಗಿರಿ ತಾಲೂಕುಗಳಲ್ಲಿ ಕಂಡುಬಂದಿದೆ ಹಾಗೂ ಇದೇ ರೀತಿ ಬೇರೆ ಭಾಗದಲ್ಲಿಯೂ ಆಗಿರಬಹುದು, ಅನುಷ್ಠಾನದ ಹಂತದಲ್ಲಿ ಅಧಿಕಾರಿಗಳಿಂದ ಆಗುತ್ತಿರುವ ಎಡವಟ್ಟನ್ನು ಮಾನ್ಯ ಇಂಧನ ಸಚಿವರಾದ ಸುನಿಲ್ ಕುಮಾರ್ ರವರ ಗಮನಕ್ಕೆ ತಂದಾಗ ಅವರು ಅಧಿಕಾರಿಗಳ ನಡೆ ಬೇಸರ ತಂದಿದ್ದು ಅಧಿಕಾರಿಗಳ ನಡೆ ಅಥವಾ ಮಾಹಿತಿ ಕೊರತೆಯಿಂದಾಗಿರುವ ತಪ್ಪನ್ನು ಸರಿ ಮಾಡುವುದಾಗಿ ತಿಳಿಸಿದರು.
ಮುಖ್ಯವಾಗಿ ಈಗಾಗಲೇ ಎಲ್ಲಾ ಎಸ್ಕಾಂಗಳಿಂದ ಇರುವ ಸಾಲದ ಮೊತ್ತ 72,114 ಕೋಟಿ ರೂಪಾಯಿ,ಭಾರತ ಹಾಗೂ ಕರ್ನಾಟಕ ಸದೃಢವಾಗಿರಲು ಎಷ್ಟು ಹಂತದವರಿಗೂ ಉಚಿತ ಭಾಗ್ಯ ನೀಡಬೇಕು ಅಷ್ಟು ನೀಡಿದರೆ ಒಳಿತು,ಆದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆ ಹತ್ತಿರವಾದಂತೆ ಎಲ್ಲಾ ಕಡೆಯೂ, ಪ್ರಜ್ಞ ಪೂರ್ವಕವಾಗಿ ಆಲೋಚನೆ ಮಾಡದಿರುವಂತಹ ರಾಜಕೀಯ ಪಕ್ಷಗಳಿಂದ ಉಚಿತದ ಭರಾಟೆ ಜಾಸ್ತಿ ಆಗುತ್ತಿರುವುದು ಕಂಡು ಬಂದಿದೆ,ಇದೇ ರೀತಿ ಉಚಿತದ ಮೊರೆ ಹೋದ ಬೇರೆ ದೇಶಗಳ ಪರಿಸ್ಥಿತಿ ಏನಾಗಿದೆ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ, ಇದರ ಕುರಿತು ಮಾನ್ಯ ಇಂಧನ ಮಂತ್ರಿ ಸುನಿಲ್ ಕುಮಾರ್ ರವರಿಗೆ ಪ್ರಶ್ನಿಸಿದಾಗ ಮಂತ್ರಿಯಾಗಿ ಅಧಿಕಾರವಹಿಸಿಕೊಂಡಾಗ ತಮಗಾದ ಸ್ವಂತ ಅನುಭವ, ಹುಬ್ಬಳ್ಳಿಯ ಹೆಸ್ಕಾಂ ಹಾಗೂ ವಿವಿಧ ಹೆಸ್ಕಾಂಗಳು ಬಾರಿ ನಷ್ಟದಲ್ಲಿದ್ದು ಮುಂದುವರೆಯಲು ಸಹ ಕಷ್ಟವಿದ್ದನ್ನು ಉಲ್ಲೇಖಿಸಿದರು, ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೆರವಿನಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದ ಹೆಸ್ಕಾಂಗಳನ್ನು ಎತ್ತಿ ಹಿಡಿಯಲಾಗಿತ್ತು,
ಪ್ರಜ್ಞ ಪೂರ್ವಕವಾಗಿ ಆಲೋಚನೆ ಮಾಡದಿರುವಂತಹ ಕೆಲವು ರಾಜಕೀಯ ಪಕ್ಷಗಳ, ಭಾರಿ ಮೊತ್ತದ ಉಚಿತ ವಿದ್ಯುತ್ ನೀಡುವ ಭರವಸೆ ಮೊರೆ ಹೋದರೆ ವಿವಿಧ ಹೆಸ್ಕಾಂ ಸಂಸ್ಥೆಗಳಿಗೆ ಬಾರಿ ಆರ್ಥಿಕ ನಷ್ಟ ಉಂಟಾಗುವುದು ಎಂದು ತಿಳಿಸಿದರಲ್ಲದೆ ಈ ಬಗೆಗೆ ಚಿಂತನೆಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.