ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಬೆಳ್ತಂಗಡಿ ಹಳ್ಳಿಮನೆ ಹೈದರ್ ಅಲಿ ಅವರ ಸಂಗ್ರಹದಲ್ಲಿ ಹಳೆಯ ಮಾದರಿಯ ಕ್ಯಾಮೆರಾಗಳು, ಸೀಮೆಎಣ್ಣೆ ದೀಪಗಳು, ರೇಡಿಯೋ, ಟೇಪ್ ರೆಕಾರ್ಡರ್, ಗ್ರಾಮಫೋನ್ ರೆಕಾರ್ಡರ್, ತೂಕದ ಸಾಧನಗಳು, ಹಳೆಯ ಭಾರತೀಯ ನಾಣ್ಯಗಳು ಮತ್ತು ನೋಟುಗಳು, ಗಡಿಯಾರಗಳು ಮತ್ತು ಅನೇಕ ಹಳೆಯ ವಸ್ತುಗಳು ಇವೆ.
ಕಾಯಿನ್ ಬೂತ್ ಫೋನ್ ಗಳು ಹೈದರಾಲಿ ಸಂಗ್ರಹದಲ್ಲಿ ಒಂದು ಕುತೂಹಲಕಾರಿ ವಸ್ತುವಾಗಿದೆ. ಇವರ ಬಳಿ ಹೊಸ ಪೀಳಿಗೆಗೆ ಪರಕೀಯವಾಗಿರುವ ಅನೇಕ ಹಳೆಯ ಸಾಧನಗಳಿವೆ. ಅವರು ನರ್ಸರಿಯಿಂದ ಬರುವ ಆದಾಯದ 20 ಪ್ರತಿಶತವನ್ನು ಪ್ರಾಚೀನ ವಸ್ತುಗಳನ್ನು ಖರೀದಿಸಲು ಬಳಸುತ್ತಾರೆ. ಇದು ಶಿಕ್ಷಕಿ ಲಕ್ಷ್ಮಿ ಅವರ ಸ್ಫೂರ್ತಿಯಿಂದ ಬಾಲ್ಯದಲ್ಲೇ ಪ್ರಾರಂಭವಾಯಿತು. ನಂತರ ಇದು ಹವ್ಯಾಸವಾಯಿತು ಎಂದು ಹೈದರಾಲಿ ಹೇಳುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.