ದುಬೈ (www.vknews.in) : SKSSF ದುಬೈ ಕರ್ನಾಟಕ ಸ್ಟೇಟ್ ಇದರ ಕೌನ್ಸಿಲರ್ ಮೀಟ್ ಮತ್ತು ನೂತನ ಸಮಿತಿ ರಚನೆ ಕಾರ್ಯವು ದಿನಾಂಕ 05/02/2023 ನೇ ರವಿವಾರದಂದು ದುಬೈ ಕೆ ಎಂ ಸಿ ಸಿ ಹಾಲ್ ನಲ್ಲಿ ಸಯ್ಯದ್ ಅಸ್ಕರ್ ಅಲಿ ತಂಗಳ್ ರವರ ಅದ್ಯಕ್ಷತೆಯಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಸಯ್ಯದ್ ಫಕ್ರುದ್ದೀನ್ ತಂಗಳ್ ( ಕೋಶಾಧಿಕಾರಿ SKSSF ಕೇಂದ್ರ ಸಮಿತಿ) ಸಯ್ಯದ್ ಶುಹೈಬ್ ತಂಗಳ್ ( ಅದ್ಯಕ್ಷರು SKSSF ಯು ಎ ಇ ರಾಷ್ಟ್ರೀಯ ಸಮಿತಿ) ಜನಾಬ್ ಮನ್ಸೂರ್ ಮೂಪನ್ ( ಪ್ರಧಾನ ಕಾರ್ಯದರ್ಶಿ SKSSF ಯು ಎ ಇ ರಾಷ್ಟ್ರೀಯ ಸಮಿತಿ) ಉಸ್ತಾದ್ ಅಲಿ ಫೈಝಿ ( ಅದ್ಯಕ್ಷರು SKSSF ದುಬೈ ಕೇರಳ ಸ್ಟೇಟ್ ) ಜನಾಬ್ ಸಈದ್ ಕಣ್ಣೂರ್ ( ಪ್ರಧಾನ ಕಾರ್ಯದರ್ಶಿ SKSSF ದುಬೈ ಕೇರಳ ಸ್ಟೇಟ್) ಜನಾಬ್ ಕಬೀರ್ ಅಸಾದಿ ( ಕೋಶಾಧಿಕಾರಿ SKSSF ದುಬೈ ಕೇರಳ ಸ್ಟೇಟ್) ಜನಾಬ್ ಮಹಮ್ಮದ್ ಫಾಝಿಲ್ ( ಜೊತೆ ಕಾರ್ಯದರ್ಶಿ SKSSF ಯುಎಇ ರಾಷ್ಟ್ರೀಯ ಸಮಿತಿ ) ನೂರೇ ಅಜ್ಮೀರ್ ಯ ಖ್ಯಾತಿಯ ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್, ಉಸ್ತಾದ್ ಬೀರಾನ್ ಬಾಖವಿ, ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ, ಸೈಕಲ್ ಮೂಲಕ ಭಾರತದಿಂದ ಇಸ್ಲಾಮಿಕ್ ರಾಷ್ಟಗಳಿಗೆ ಪ್ರವಾಸ ಹೊರಟ ಹಾಫಿಲ್ ಅಹ್ಮದ್ ಸಾಬಿತ್ ವಿಟ್ಲ, ಜನಾಬ್ ಯೂಸುಫ್ ಈಶ್ವರಮಂಗಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭ ಉಸ್ತಾದ್ ಬದ್ರುಲ್ ಮುನೀರ್ ಫೈಝಿ ಅಲ್ ಮಅಬರಿಯವರ ಕಿರಾಅತ್ ನೊಂದಿಗೆ ಆರಂಭಗೊಂಡಿತು. ದುಆ ಕಾರ್ಯವನ್ನು ಸಯ್ಯದ್ ಶುಹೈಬ್ ತಂಗಳ್ ರವರು ನಿರ್ವಹಿಸಿದರು. ಸ್ವಾಗತ ಭಾಷಣವನ್ನು ಸರ್ಗಲಯ ಚೇರ್ಮೇನ್ ಜನಾಬ್ ಬದ್ರುದ್ದೀನ್ ಹೆಂತಾರ್ ಮಾಡಿದರು. ಹೃಸ್ವ ಸಂದರ್ಶನಾರ್ಥ ಯು ಎ ಇ ಗೆ ಆಗಮಿಸಿದ್ದ ಉಸ್ತಾದ್ ವಲಿಯುದ್ದೀನ್ ಫೈಝಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಉಸ್ತಾದ್ ರವರು SKSSF ನ ಕಾರ್ಯವೈಖರಿಯನ್ನು ಶ್ಲಾಘಿಸಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಇದರ ಆದಿ ಕಾಲದ ವಿದ್ವಾಂಸರ ಮತ್ತು ಬಳಿಕದ ಮುಶಾವರ ವಿದ್ವಾಂಸರ ಹಲವು ಕರಾಮತ್ತುಗಳನ್ನು ವಿವರಿಸಿ ಇಂತಹ ಸಂಘಟನೆಯ ನೆರಳಲ್ಲಿ ಬದುಕಲು ಅನುಗ್ರಹಿಸಿದ ಅಲ್ಲಾಹನಿಗೆ ಕೃತಜ್ಞತೆ ಅರ್ಪಿಸಿ SKSSF ನ ಎಲ್ಲಾ ಕಾರ್ಯಕರ್ತರಿಗೆ ಶುಭ ಹಾರೈಸಿ ಮಾತಿಗೆ ಪೂರ್ಣವಿರಾವನ್ನಿತ್ತು ಅಲ್ಲಿಂದ ವಿಮಾನ ನಿಲ್ದಾಣದ ಕಡೆಗೆ ತೆರಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಫಕ್ರುದ್ದೀನ್ ತಂಗಳ್ ರವರು ನೆರವೇರಿಸಿದರು. ಈ ಸಂದರ್ಭ ಸಮಸ್ತ ನಡೆದು ಬಂದ ಹಾದಿಯನ್ನು ವಿವರಿಸಿದರು. ಕಾರ್ಯಕರ್ತರ ಜವಾಬ್ಧಾರಿ ಮತ್ತು ಗುರಿಯನ್ನು ಎಳೆ ಎಳೆಯಾಗಿ ವಿವರಿಸಿದರು. ಕರ್ನಾಟಕ SKSSF ನಡೆಸಿಕೊಂಡು ಬರುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಸದಸ್ಯ ಬಲವನ್ನು ವೃದ್ಧಿಸಿ ಜಿಲ್ಲಾ ಸಮಿತಿಗಳ ರಚನೆಗೆ ಪ್ರಯತ್ನಿಸಲು ಕರೆ ನೀಡಿದರು. ಈ ಸಂದರ್ಭ ಇತ್ತೀಚೆಗೆ ನಮ್ಮನ್ನಗಲಿದ ನೌಷಾದ್ ಹಾಜಿಯವರ ಗುಣಗಾನ ಮಾಡಿದರು. ಒಬ್ಬ ಸಾಮಾನ್ಯ ವ್ಯಕ್ತಿ ಮರಣ ಹೊಂದಿದಾಗ ಒಬ್ಬ ವಿದ್ವಾಂಸರಿಗಿರುವಷ್ಟು ಪ್ರಶಸ್ತಿ ಲಭಿಸಲು ಸಮಸ್ತದ ಅಶೀರ್ವಾದವಾಗಿದ್ದು ಎಲ್ಲರೂ ಇಂತಹ ಮನ:ಸ್ಥಿತಿಯನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಕರೆ ನೀಡಿ ನೂತನ ಸಮಿತಿಗೆ ಶುಭ ಹಾರೈಸಿ ಮಾತಿಗೆ ಪೂರ್ಣವಿರಾಮವನ್ನಿತ್ತರು.
ಬಳಿಕ ಸನ್ಮಾನ ಸಮಾರಂಭವನ್ನು ವಿಖಾಯ ಚೇರ್ಮೇನ್ ಜನಾಬ್ ನವಾಝ್ ಬಿ ಸಿ ರೋಡ್ ರವರು ನಡೆಸಿಕೊಟ್ಟರು. ಈ ಸಂದರ್ಭ SKSSF ಇದರ ಪ್ರಧಾನ ಕಾರ್ಯದಶಿಯಾಗಿದ್ದ ಮತ್ತು ದುಬೈಯಲ್ಲಿ SKSSF ನ ಪ್ರಚಾರದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯಾಚರಿಸಿದ ರಜಾ ನಿಮಿತ್ತ ಊರಲ್ಲಿರುವ ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗರವರನ್ನು ಮತ್ತು ನಮ್ಮನ್ನಗಲಿದ SKSSF ಇದರ ಕಾರ್ಯಾದ್ಯಕ್ಷರಾಗಿದ್ದ ಮರ್ಹೂಮ್ ರಫೀಕ್ ಆತೂರ್ ರವರನ್ನು ನೆನಪಿಸಿ ಅವರ ಸೇವೆಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಯ್ಯದ್ ಫಕ್ರುದ್ದೀನ್ ತಂಗಳ್ ಮತ್ತು ಸಯ್ಯದ್ ಶುಹೈಬ್ ತಂಗಳ್ ರವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಹಾಫಿಲ್ ಅಹ್ಮದ್ ಸಾಬಿತ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ಕೊರೋನಾ ಸಂದರ್ಭದಲ್ಲಿ ಆಹಾರ ಸಾಮಗ್ರಿ ಸರಬರಾಜು ಮಾಡಲು ಸಹಕರಿಸಿದ, ಚಾರ್ಟೆಡ್ ವಿಮಾನ ಮೂಲಕ ಸಂತಸ್ತರನ್ನು ಊರಿಗೆ ಕಳುಹಿಸಲು ಸಹಕರಿಸಿದ ಮತ್ತು ಕಲ್ಬಾ ಪ್ರಳಯ ಸಂದರ್ಭ ಶುಚಿಗೊಳಿಸಲು ಸಹಕರಿಸಿದ SKSSF ಕಾರ್ಯಕರ್ತರಾದ ಜನಾಬ್ ಶರೀಫ್ ಕಾವು, ಜನಾಬ್ ಅಬ್ದುಲ್ ರಝಾಕ್ ಸೋಂಪಾಡಿ, ಜನಾಬ್ ಸಿರಾಜ್ ಬಿ ಸಿ ರೋಡ್, ಜನಾಬ್ ಅಝೀಝ್ ಸೋಂಪಾಡಿ, ಜನಾಬ್ ನಿಝಾಂ ತೋಡಾರ್ ಮೊದಲಾದವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಬಳಿಕ ಹಾಫಿಲ್ ಅಹ್ಮದ್ ಸಾಬಿತ್ ರವರು ತಾನು ಕರ್ನಟಕದ ವಿಟ್ಲದವನಾಗಿದ್ದು ಹೆಚ್ಚಿನ ವಿದ್ಯಾಭ್ಯಾಸಕಾಗಿ ಸೈಕಲ್ ಮೂಲಕ ಈಜಿಫ್ಟ್ ಗೆ ಹೊರಟ ಸ್ವಾರಸ್ಯಕರ ವಿಷಯವನ್ನು ತಿಳಿಸಿದರು. ಕೇರಳದ ಪ್ರಸಿದ್ಧ ದರ್ಗಾಗಳಿಂದ ಹೊರಟು ದುಬೈ ಮೂಲಕ ಸೌದಿ ಅರೇಬಿಯಾದ ಮಕ್ಕಾ ಮದೀನ, ಇರಾಕ್ ಪ್ಯಾಲೆಸ್ತೀನ್, ಇಸ್ರೇಲ್ ಮೂಲಕ ಈಜಿಫ್ಟ್ ನಲ್ಲಿ ಅಲ್ ಅಝ್ ಹರಿ ಬಿರುದು ಪಡೆದು ಹಿಂತಿರುಗುವ ಅಭಿಲಾಷೆಯನ್ನು ವಿವರಿಸಿದರು.
ವಾರ್ಷಿಕ ವರದಿಯನ್ನು ಜನಾಬ್ ಜಾಬಿರ್ ಬಪ್ಪಳಿಗೆಯವರು ವಾಚಿಸಿದರು.ವಾರ್ಷಿಕ ಕಾರ್ಯಚಟುವಟಿಕೆಗಳ ಲೆಕ್ಕ ಪತ್ರವನ್ನು ಜನಾಬ್ ಸಿರಾಜ್ ಬಿ ಸಿ ರೋಡ್ ರವರು ಮಂಡಿಸಿದರು. ಬಳಿಕ ವೀಕ್ಷಕರಾಗಿ ಆಗಮಿಸಿದ್ದ ಜನಾಬ್ ಮಹಮ್ಮದ್ ಫಾಝಿಲ್ ರವರು SKSSF ಕರ್ನಾಟಕದ ಕಾರ್ಯಚಟುವಟಿಕೆ ಮತ್ತು ಕೊರೋನಾ ಸಂದರ್ಭ ಮಾಡಿದ ಜನಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. SKSSF ಕೇರಳ ಸ್ಟೇಟ್ ಸುಮಾರು 5000 ದಷ್ಟು ಸದಸ್ಯ ಬಲ ಹೊಂದಿದ್ದು ಕರ್ನಾಟಕ ಕೂಡಾ ಅದೇ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಆಶಿಸಿದರು. ಈ ಸಂದರ್ಭ ಕಾರ್ಯಕರ್ತರ ಜವಾಬ್ಧಾರಿಯನ್ನು ವಿವರಿಸಿದರು.
ಬಳಿಕ ಹಾಲಿ ಸಮಿತಿಯನ್ನು ಅದ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಗಳ್ ರವರು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚನೆಗೆ ಅನುವು ಮಾಡಿಕೊಟ್ಟರು. ಕಳೆದ ಹಲವಾರು ವರ್ಷಗಳಿಂದ SKSSF ಇದರ ಒಬ್ಬ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲು ಅನುಗ್ರಹಿಸಿದ ಅಲ್ಲಾಹನಿಗೆ ಕೃತಜ್ಞತೆ ಅರ್ಪಿಸಿದರು. ವಿಖಾಯ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿ ಕೊರೋನಾ ಸಂದರ್ಭ ಎದುರಾದ ಸಂಕಷ್ಟಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿರುವುದು ಎಲ್ಲರ ಸಹಕಾರ ಮತ್ತು ವಿಖಾಯದ ದೃಡ ಸಂಕಲ್ಪವಾಗಿದ್ದು ಇನ್ನು ಮುಂದೆಯೂ ಪರೋಪಕಾರ ಮನೋಭಾವ ಬೆಳೆಸಿಕೊಳ್ಳಲು ಎಲ್ಲರೂ ಸಿದ್ಧರಿರಬೇಕೆಂದು ವಿನಂತಿಸಿ ಮಾತಿಗೆ ಪೂರ್ಣವಿರಾಮವನ್ನಿತ್ತರು.
ನೂತನ ಸಮಿತಿ ರಚನೆಯ ಜವಾಬ್ಧಾರಿಯನ್ನು ಸಯ್ಯದ್ ಶುಹೈಬ್ ತಂಗಳ್ ರವರಿಗೆ ವಹಿಸಲಾಯಿತು.ಈ ಸಂದರ್ಭ ಲೋಕ ಪ್ರಸಿದ್ಧ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಎಂಬ ಸಂಘಟನೆಯ ಬಗ್ಗೆ ವಿವರಿಸಿ ಅದರ ಕೆಳಗೆ ಕಾರ್ಯಾಚರಿಸುತ್ತಿರುವ ವಿವಿಧ ಶಾಖೆಗಳನ್ನು ಪರಿಚಯಿಸಿದರು, ಟ್ರೆಂಡ್, ಇಬಾದ್, ಸಹಚಾರಿ, ಸರ್ಗಲಯ, ವಿಖಾಯ, ಮೀಮ್, ಮೀಡಿಯಾ ವಿಂಗ್, ಸೈಬರ್ ವಿಂಗ್, ಇಸ, ರಿಲೀಫ್ ವಿಂಗ್, ಕ್ಯಾಂಪಸ್ ವಿಂಗ್, ಇಸ್ತಿಕಾಮ, ತ್ವಲಬಾ ವಿಂಗ್ ,ಸ್ಪೀಕರ್ಸ್ ವಿಂಗ್, ರೈಟರ್ಸ್ ವಿಂಗ್, ಓರ್ಗನೇಟ್, ಮನೀಶ, SKICR, ನ್ಯೂಸ್ ಪೇಪರ್ ಹಾಗೂ ಭವಿಷ್ಯದ ಯೋಜನೆಯ ಬಗ್ಗೆ ವಿವರ ನೀಡಿದರು.
2022-24 ರ ಸಾಲಿಗೆ ಆಸಕ್ತ ನೇತಾರರಿದ್ದರೆ ಅವರನ್ನು ಆಹ್ವಾನಿಸಿದರು . ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದುದರಿಂದ ಈ ಕೆಳಗಿನ ಪ್ರಮುಖರನ್ನು ಸಯ್ಯದ್ ಶುಹೈಬ್ ತಂಗಳ್ ರವರು ಆರಿಸಿದರು.
ಅದ್ಯಕ್ಷರು – ಸಯ್ಯದ್ ಅಸ್ಕರ್ ಅಲಿ ತಂಗಳ್ ಪ್ರಧಾನ ಕಾರ್ಯದರ್ಶಿ – ಜನಾಬ್ ಬದ್ರುದ್ದೀನ್ ಹೆಂತಾರ್ ಕೋಶಾಧಿಕಾರಿ – ಜನಾಬ್ ಹೈದರ್ ಅಲಿ ಈಶ್ವರಮಂಗಲ ವರ್ಕಿಂಗ್ ಪ್ರೆಸಿಡೆಂಟ್ – ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ ವರ್ಕಿಂಗ್ ಸೆಕ್ರೇಟರಿ – ಜನಾಬ್ ಮಹಮ್ಮದ್ ಶರೀಫ್ ಕೊಡ್ನೀರ್ ಉಪಾದ್ಯಕ್ಷರುಗಳು – ಜನಾಬ್ ಅಬ್ದುಲ್ ಸಲಾಮ್ ಬಪ್ಪಳಿಗೆ, ಜನಾಬ್ ಅಶ್ರಫ್ ಶಾ ಮಾಂತೂರ್, ಜನಾಬ್ ಶಂಸುದ್ದೀನ್ ಸೂರಲ್ಪಾಡಿ, ಜನಾಬ್ ಶರೀಫ್ ಕಾವು, ಜನಾಬ್ ಯೂಸುಫ್ ಈಶ್ವರಮಂಗಲ, ಜನಾಬ್ ಅಬ್ದುಲ್ ರಝಾಕ್ ಸೋಂಪಾಡಿ ಜೊತೆ ಕಾರ್ಯದರ್ಶಿಗಳು – ಜನಾಬ್ ಅಝ್ಹರ್ ಹಂಡೇಲ್, ಜನಾಬ್ ನವಾಝ್ ಕಟ್ಟತ್ತಾರ್ ವಿಖಾಯ ಚೇರ್ಮೇನ್ – ಜನಾಬ್ ನವಾಝ್ ಬಿ ಸಿ ರೋಡ್ , ಜನರಲ್ ಕನ್ವೀನರ್ – ಜನಾಬ್ ನಿಝಾಮ್ ತೋಡಾರ್ ಕನ್ವೀನರ್ – ಜನಾಬ್ ಸಿರಾಜ್ ಬಿ ಸಿ ರೋಡ್
ಟ್ರೆಂಡ್ ಚೇರ್ಮೇನ್ – ಜನಾಬ್ ಅಬ್ದುಲ್ ಅಝೀಝ್ ಸೋಂಪಾಡಿ, ಕನ್ವೀನರ್ – ಜನಾಬ್ ನಾಸಿರ್ ಬಪ್ಪಳಿಗೆ ಇಬಾದ್ ಚೇರ್ಮೇನ್ – ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ್, ಕನ್ವೀನರ್ – ಉಸ್ತಾದ್ ಅಲಿ ಹಸನ್ ಫೈಝಿ ಕುಕ್ಕಾಜೆ ಸಹಚಾರಿ ಚೇರ್ಮೇನ್ – ಜನಾಬ್ ಜಾಬಿರ್ ಬಪ್ಪಳಿಗೆ, ಕನ್ವೀನರ್ – ಜನಾಬ್ ಇಸ್ ಹಾಕ್ ಕುಡ್ತಮುಗೇರ್ ಸರ್ಗಲಯ ಚೇರ್ಮೇನ್ – ಜನಾಬ್ ನೂರ್ ಮಹಮ್ಮದ್ ನೀರ್ಕಜೆ, ಕನ್ವೀನರ್ – ಉಸ್ತಾದ್ ಬದ್ರುಲ್ ಮುನೀರ್ ಫೈಝಿ ಸುರಿಬೈಲ್ ಮೀಡಿಯ ವಿಂಗ್ ಚೇರ್ಮೇನ್ – ಜನಾಬ್ ಜಾಬಿರ್ ಬೆಟ್ಟಂಪಾಡಿ, ಕನ್ವೀನರ್ – ಜನಾಬ್ ಫರ್ವೇಝ್ ಹಳೆಯಂಗಡಿ
ಕನ್ವೀನರ್ ಗಳು – ಉಸ್ತಾದ್ ಅಬ್ದುಲ್ಲಾ ನಯೀಮಿ ಈಶ್ವರಮಂಗಲ, ಉಸ್ತಾದ್ ಹುಸೈನ್ ಫೈಝಿ ಕೊಡಗು, ಹಮೀದ್ ಮುಸ್ಲಿಯಾರ್ ನಿರ್ಕಜೆ,ಜನಾಬ್ ಉಸ್ಮಾನ್ ಮರೀಲ್, ಜನಾಬ್ ಅಬ್ಬಾಸ್ ಕೇಕುಡೆ, ಜನಾಬ್ ಅನ್ವರ್ ಮನಾಲ, ಜನಾಬ್ ರಫೀಕ್ ಸುರತ್ಕಲ್, ಜನಾಬ್ ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಜನಾಬ್ ಅಶ್ರಫ್ ಬಾಂಬಿಲ, ಜನಾಬ್ ಜೌಹರ್ ಉರುಮನೆ
ಕಾರ್ಯನಿರ್ವಾಹಕ ಸದಸ್ಯರು – ಜನಾಬ್ ಶಾಹುಲ್ ಹಮೀದ್ ಬಿ ಸಿ ರೋಡ್, ಜನಾಬ್ ಅಬೂಬಕ್ಕರ್ ಸಿದ್ದೀಕ್ ಮೂಡಬಿದ್ರಿ, ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ, ಜನಾಬ್ ಮಹಮ್ಮದ್ ರೆಡ್ ಟ್ಯಾಗ್, ಜನಾಬ್ ಜಲೀಲ್ ಶಾನ್, ಜನಾಬ್ ಶಾರೂಕ್ ಬಿ ಸಿ ರೋಡ್, ಜನಾಬ್ ಶಫೀಕ್ ಗಡಿಯಾರ್, ಜನಾಬ್ ಇಸ್ಮಾಯಿಲ್ ತಿಂಗಳಾಡಿ, ಜನಾಬ್ ಉಮರ್ ಈಶ್ವರಮಂಗಲ, ಜನಾಬ್ ಹುಸೈನ್ ರೆಂಜಲಾಡಿ, ಜನಾಬ್ ಹಾರಿಸ್ ಪಾಪೆತಡ್ಕ, ಜನಾಬ್ ಇಂತಿಯಾಝ್ ಕಡಬ, ಜನಾಬ್ ತಾಹಿರ್ ಹೆಂತಾರ್, ಜನಾಬ್ ಇಬ್ರಾಹಿಂ ಆತೂರ್, ಜನಾಬ್ ಹುಸೈನ್ ದುಗ್ಗಲಡ್ಕ, ಜನಾಬ್ ಅಬ್ದುಲ್ ಅಝೀಝ್ ಸುಳ್ಯ, ಜನಾಬ್ ಅಬ್ದುಲ್ ಸಲೀಮ್ ಕಕ್ಕಿಂಜೆ, ಜನಾಬ್ ನಿಯಾಝ್ ಕರಾಯ, ಜನಾಬ್ ನೌಫಲ್ ಮೊಡಂತ್ಯಾರ್, ಜನಾಬ್ ಅಬ್ದುಲ್ ಲತೀಫ್ ಕಂಡಂಗ, ಜನಾಬ್ ನಿಝಾಂ ಎಡಪ್ಪಾಲಂ, ಜನಾಬ್ ರಾಹಿಲ್ ಬಶೀರ್ ಕೊಡಗು, ಜನಾಬ್ ಜುನೈದ್ ಕುಶಾಲನಗರ, ಜನಾಬ್ ಜುನೈದ್ ಕೊಡಗು, ಜನಾಬ್ ಹೈದರ್ ಅಲಿ ಮರ್ವೇಲ್, ಜನಾಬ್ ಝುಬೈರ್ ಪಟ್ಲ, ಜನಾಬ್ ಸವಾದ್ ಈಶ್ವರಮಂಗಲ ಮೊದಲಾದವರನ್ನು ಆರಿಸಲಾಯಿತು.
ಬಳಿಕ ನೂತನ ಸಮಿತಿಗೆ ಶುಭ ಹಾರೈಸಿ ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ್ ರವರು ಮಾತನಾಡಿದರು. ಧಾರ್ಮಿಕ ಪ್ರಜ್ಞೆ ಮತ್ತು ಪರೋಪಕಾರ ಮನೋಭಾವ ಮನುಷ್ಯನನ್ನು ಸಮುದಾಯದಲ್ಲಿ ಉತ್ತಮರ ಸಾಲಲ್ಲಿ ಸೇರಿಸುತ್ತದೆ. ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅಲ್ಲಾಹನ ಹಾದಿಯಲ್ಲಿ ಮುನ್ನುಗ್ಗುತ್ತಿರುವ SKSSF ಇದರ ಕರ್ಮನಿರತ ಕಾರ್ಯಕರ್ತರು ಯಾವುದೇ ಚಿಂತೆ ಪಡುವ ಅಗತ್ಯ ಬರುವುದಿಲ್ಲ. ಅಲ್ಲಾಹನ ಸಂಪೂರ್ಣ ಸಹಾಯ ನಿಮ್ಮ ಮೇಲಿದೆ ಎಂದು ಪ್ರಾರ್ಥಿಸಿ ಮಾತಿಗೆ ಪೂರ್ಣವಿರಾಮವನ್ನಿತ್ತರು.
ಬಳಿಕ ಉಸ್ತಾದ್ ಅಬ್ದುಲ್ಲಾ ನಯೀಮಿ ಈಶ್ವರಮಂಗಲ ರವರು ಕಾರ್ಯಕರ್ತನ ಜವಾಬ್ಧಾರಿಯನ್ನು ವಿವರಿಸಿ ಮಾದರಿ ಸಂಘಟನೆಯಾಗಿ ಮಾರ್ಪಡಿಸಲು ಎಲ್ಲರೂ ಪ್ರಯತ್ನಿಸಬೇಕೆಂದು ಕರೆಯಿತ್ತು ಮಾತಿಗೆ ಪೂರ್ಣವಿರಾಮವನ್ನಿತ್ತರು.
SKSSF ನ ಕೆಳಗೆ ಕಾರ್ಯಾಚರಿಸುತ್ತಿರುವ ವಿವಿಧ ವಿಭಾಗಗಳ ಜವಾಬ್ಧಾರಿ ಮತ್ತು ಕಾರ್ಯಕ್ಷೇತ್ರಗಳ ಬಗ್ಗೆ ಜನಾಬ್ ಮನ್ಸೂರ್ ಮೂಪನ್ ರವರು ವಿವರ ನೀಡಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಉಸ್ತಾದ್ ಅಲಿ ಹಸನ್ ಫೈಝಿ ಯವರು ನಿರೂಪಿಸಿದರು. ಜನಾಬ್ ಅಝ್ಹರ್ ಹಂಡೇಲ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ವಿರಾಮ ಹಾಕಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.