(www.vknews.in) ; ಇನ್ನೂ ಕೆಲವೇ ದಿನಗಳಲ್ಲಿ ಚುಣಾವಣೆ ಹತ್ತಿರ ಬರುತ್ತಿದೆ…. ನಮಗೆ ನಮ್ಮ ರಾಜ್ಯ ಹಾಗೂ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕಾದ ಜವಾಬ್ದಾರಿಯಿದೆ. ಅದಕ್ಕಾಗಿ ಆಡಳಿತದಲ್ಲಿ ಸುಭದ್ರ ಸರಕಾರವೊಂದು ಬೇಕು. ಇದಕ್ಕೆ ಚುನಾವಣಾ ಸಂದರ್ಭದಲ್ಲಿ ನಮ್ಮದೊಂದು ಮುದ್ರೆ ಬಹಳ ಅತ್ಯಮೂಲ್ಯ. ಮಾಹಿತಿಯೊಂದರ ಪ್ರಕಾರ ಜಾತ್ಯತೀತ ಮನಸುಗಳು ಮತದಾನದಿಂದ ದೂರ ಉಳಿಯುವಂತಾಗಬಾರದು. ಅಂಥವರ ಕಡಿಮೆ ಮತದಾನದಿಂದಾಗಿ ದೇಶದ ಆಡಳಿತವು ಅನರ್ಹರ ಪಾಲಾಗುವ ಸಾಧ್ಯತೆ ಹೆಚ್ಚು. ನಮಗೆ ಸಿಗಬೇಕಾದಷ್ಟು ರಾಜಕೀಯ ಪ್ರಾತಿನಿಧ್ಯ ಗಳಿಸಲು ಮತದಾನ ಪ್ರಮಾಣ ಉತ್ತಮಪಡಿಸಬೇಕು.
ಆದುದರಿಂದ ಈ ಎಲ್ಲವನ್ನೂ ಅರಿತು…ನಾವು ಸ್ವಲ್ಪ ವ್ಯವಸ್ಥೆ ಗೆ ಸರಿಪಡಿಸಲು ಕೈ ಜೋಡಿಸುವ ಸಲುವಾಗಿ ಮುಂದಿನ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರತೀ ಮೊಹಲ್ಲದಲ್ಲಿಯೂ 100% ಮತದಾನವಾಗಬೇಕು ಎಂಬ ದೊಡ್ಡದಾದ ಅಭಿಯಾನವನ್ನೇ ಶುರುಮಾಡಿ ಕಾರ್ಯಪ್ರವರ್ತರಾಗುವಂತೆ ಎಲ್ಲಾ ಸಂಘ ಸಂಸ್ಥೆಗಳು ತಮ್ಮ ಕೆಳ ಘಟಕಗಳಲ್ಲಿ ಪ್ರೊಗ್ರಾಮ್ ಹಾಕುವ ಮೂಲಕ ಕಾರ್ಯಚರಿಸಲು ವಿನಂತಿಸುತ್ತಿದ್ದೇನೆ.
✍️ ಅಶ್ರಫ್ ಕಿನಾರ ಮಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.