(www.vknews.in) ; KCF ಡೇ ಪ್ರಯುಕ್ತ ಶುಕ್ರವಾರ (17.02.2023) ನಡೆದ “ಕುಟುಂಬ ಸ್ನೇಹ ಸಮ್ಮಿಲನ” ಕಾರ್ಯಕ್ರಮವು ಎಲ್ಲರ ನಿರೀಕ್ಷೆಗೂ ಮೀರಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. KCF ಅಂದರೆ ಧಾರ್ಮಿಕ ಪ್ರಭಾಷಣ ವೇದಿಕೆ,ಆತ್ಮೀಯ ಮಜ್ಲಿಸ್,ವಾರದ ಸ್ವಲಾತ್ ಮಜ್ಲಿಸ್ ಅಸ್ಸುಫ್ಫ ಧರ್ಸ್ ಅದೇ ರೀತಿ ಸೌಹಾರ್ದ ಇಫ್ತಾರ್ ಕೂಟ ಅಂತ ಭಾವಿಸಿದ ಕರ್ನಾಟಕದ ಅನಿವಾಸಿಗಳಿಗೆ ಈ ಸ್ನೇಹ ಕೂಟವು ಅವರ ಮನಸ್ಸಿನ ಭಾವನೆಗಳನ್ನೇ ಬದಲಾಯಿಸಿ ಬಿಟ್ಟವು.
ಸುನ್ನತ್ ಜಮಾಅತಿನ ತತ್ವ ಆದರ್ಶದಲ್ಲಿ ಬೆಳದು ಬಂದ KCF ಎಂಬ ಸಂಘಟನೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು KCF ಸದಸ್ಯರಿಗೂ ಸದಸ್ಯರಾಗಲು ಬಯಸಿದ ಕರ್ನಾಟಕದ ಅನಿವಾಸಿ ಸಹೋದರರ ಮನಸ್ಸಿನಲ್ಲಿ ಒಂದು ಒಳ್ಳೆಯ ಬದಲಾವಣೆಯನ್ನು ತಂದುಕೊಟ್ಟಿದೆ. ಉಲಮಾಗಳ ಮಾರ್ಗದರ್ಶನದಂತೆ ನಡೆಯುವ KCF ಸಂಘಟನೆಯು ಯುವ ಜನತೆಯನ್ನು KCF ಕಡೆ ಆಕರ್ಷಿಸಲು ಈ ಕುಟುಂಬ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಂಡು KCF ನಿಂದ ದೂರ ಸರಿಯುತ್ತಿದ್ದ ಯುವಕರನ್ನು ಆಕರ್ಷಿಸಿ KCF ಬಗ್ಗೆ ಚಿಂತಿಸಲು ಪ್ರೇರಣೆ ನೀಡಿತು.
ಇಸ್ಲಾಮ್ ಧರ್ಮದ ನಿಯಮದ ಪ್ರಕಾರ ವಸ್ತ್ರ ಧರಿಸಿ ಕಬಡ್ಡಿ, ಹಗ್ಗಜಗ್ಗಾಟ ಹಾಗೂ ಅನೇಕ ರೀತಿಯ ತಮಾಷೆಯ ಆಟದ ಸ್ಪರ್ಧೆಗಳನ್ನು ನಡೆಸಿ ಎಲ್ಲರ ಮನ ಗೆದ್ದಿರುವ ಕುಟುಂಬ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಬಹರೈನ್ ಮಣ್ಣಿನಲ್ಲಿ ಇತಿಹಾಸವನ್ನೇ ಸ್ಪಷ್ಟಿಸಿತು. ಸುಮಾರು 100 ಅನಿವಾಸಿ ಕುಟುಂಬಗಳು ಸೇರಿದಂತೆ 500 ಕ್ಕಿಂತಲೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು. ವಾಹನ ನಿಲುಗಡೆಯ ಸ್ಥಳವನ್ನು ನೋಡಿದಾಗಲೇ ಊರಿನಲ್ಲಿ ನಡೆಯುವ ಮದುವೆ ಸಮಾರಂಭದ ನೆನಪನ್ನು ಮೂಡಿಸುತ್ತಿತ್ತು.ಕಾರ್ಯಕ್ರಮಕ್ಕೆ ಆಗಮಿಸಿದ ಸದಸ್ಯರನ್ನು ತಮ್ಮ ಸ್ವಂತ ಮನೆಯ ಸಮಾರಂಭದಂತೆ ಸ್ವಾಗತಿಸಿದ ರೀತಿಯು ಎಲ್ಲರ ಮೆಚ್ಚುಗೆ ಪಾತ್ರವಾಯಿತು.
ಕಡಲನ್ನು ದಾಟಿ ತನ್ನ ಕುಟುಂಬಕ್ಕಾಗಿ ದುಡಿದು ಸಮಾಜ ಹಾಗು ರಾಷ್ಟ್ರದ ಅಭಿವೃದ್ಧಿಯ ಭಾಗವಾಗಿ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಸಹಿಸುತ್ತ ಜೀವಿಸುತ್ತಿರುವ ಅನಿವಾಸಿ ಸ್ನೇಹಜೀವಿಗೆ ಎಲ್ಲವನ್ನೂ ಮರೆತು ತನ್ನ ಕುಟುಂಬದೊಂದಿಗೆ ಜೀವಿಸುತ್ತಿದ್ದ ಆ ಸಿಹಿ ಅನುಭವ ಈ ಕಾರ್ಯಕ್ರಮವು ಒದಗಿಸಿಕೊಟ್ಟಿದೆ. ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿ ರಾತ್ರಿ 11ಗಂಟೆಯ ತನಕ ನಡೆದ ಈ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಯಾವುದೇ ಸಮಯದಲ್ಲೂ ಬೋರ್ ಅನಿಸದೆ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಫುಡ್ ಕೋರ್ಟ್ ಅದೊಂದು ಹೊಸ ಅನುಭವ ಬೆಳಿಗ್ಗೆ 5 ಆಡನ್ನು ಅದೇ ಸ್ಥಳದಲ್ಲಿ ಕೊಯ್ದು ಅಲ್ಲಿಯೇ ಊಟವನ್ನು ತಯಾರಿಸಿದ ರೀತಿಯು ಮನೆಯಲ್ಲಿ ನಡೆಯುವ ಸಭೆ ಸಮಾರಂಭದ ನೆನಪನ್ನು ಮರುಕಳಿಸಿತು. ಬೆಳಿಗ್ಗೆ ಇಡ್ಲಿ ಸಾಂಬಾರ್, ಚಟ್ನಿ ಮತ್ತು ಚಾ ದಿಂದ ಆರಂಭವಾಗಿ ಮಧ್ಯಾಹ್ನ ಸಮೀರ್ ಪಡುಬಿದ್ರಿ ತಯಾರಿಸಿದ ಮಟನ್ ಮಂದಿ ಮತ್ತು ಚಿಕನ್ ಮಂದಿಯ ರುಚಿಯನ್ನು ಎಲ್ಲರು ಸವಿದರು. ಸಂಜೆ ಟೀ ಸಂಬೂಸ ಮತ್ತು ನೆಗೆಟ್ಸ್ ನಂತರ ಲೈವ್ ಆಮ್ಲೆಟ್ ಮಾತ್ರ ಸೂಪರ್ ಆಗಿತ್ತು. ರಾತ್ರಿ ಮಟನ್ ಕರಿ ಚಪಾತಿ ಮತ್ತು ಕುಬ್ಬೂಸ್ ಸ್ವಾದವನ್ನು ಎಲ್ಲರೂ ಸವಿದರು.
ಬೆಳಿಗ್ಗೆ ಮೌಲಿದ್ ಮಜ್ಲಿಸ್ ಮತ್ತು ದುವಾ 30 ನಿಮಿಷಗಳಲ್ಲಿ ಉಲಮಾಗಳ ನೇತ್ರತ್ವದಲ್ಲಿ ನಡೆಯಿತು. ಶುಕ್ರವಾರದ ಜುಮಾ ನಮಾಝಿಗಾಗಿ 11 ಗಂಟೆಯಿಂದ 12 .30 ಗಂಟೆಯ ತನಕ ವಿರಾಮ ಹಾಕಲಾಯಿತು,ಜುಮಾ ನಮಾಝಿನ ನಂತರ 30 ನಿಮಿಷಗಳು KCF ಬಗ್ಗೆ ಚುಟುಕಾಗಿ ವಿವರಿಸಲಾಯಿತು.ಮಗರಿಬ್ ನಮಾಝಿನ ನಂತರ ಯಾಸೀನ್ ಸೂರತ್ ಪಠಿಸಿ ಮರಣ ಹೊಂದಿದ KCF ಕಾರ್ಯಕರ್ತರ ಕುಟುಂಬಸ್ಥರಿಗಾಗಿ ದುವಾ ಮಾಡಲಾಯಿತು. 8 ಗಂಟೆಯಿಂದ ಭಾಷಣ ಮತ್ತು ಹಾಡು ಸ್ಪರ್ದೆಗಳನ್ನು ನಡೆಸಿ ದಫ್ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಾರ್ಯಕರ್ತರಿಗೂ ಗಿಫ್ಟ್ ಗಳ ಸುರಿಮಳೆಯನ್ನೇ ಹರಿಸಲಾಯಿತು. ಸ್ಪರ್ದೆಯಲ್ಲಿ ವಿಜೇತರಾದವರಿಗೂ ಹಲವಾರು ಬಹುಮಾನಗಳು ಲಭಿಸಿದವು. ಒಂದೊಂದು ಗಂಟೆಯಲ್ಲಿ WinSpin ಮುಖಾಂತರ ಒಳ್ಳೆಯ ಬಹುಮಾನಗಳನ್ನು ಕಾರ್ಯಕ್ರಮದ ಕೊನೆಗೆ ಎರಡು ಮೊಬೈಲ್ ಗಳನ್ನು ವಿತರಿಸಲಾಯಿತು. ಸ್ಪಾಟ್ ಪ್ರಶ್ನೆಗಳನ್ನು ಕೇಳಿ ಉತ್ತರಿಸಿದವರಿಗೆ ಸ್ಪಾಟಲ್ಲೇ ಬಹುಮಾನಗಳನ್ನು ಕೊಡಲಾಯಿತು ಒಟ್ಟಿನಲ್ಲಿ ಆಗಮಿಸಿದ ಎಲ್ಲರಿಗೂ ಬಹುಮಾನಗಳು ಲಭಿಸಿದವು.
ಈ ಕಾರ್ಯಕ್ರಮದ ಚೆಯರ್ಮ್ಯಾನ್ ಖಲಂದರ್ ಉಸ್ತಾದ್ ಕಕ್ಯಪದವು ಮತ್ತು ಇದರ ಯಶಸ್ವಿಗಾಗಿ ಅಹೋರಾತ್ರಿ ಉಸ್ತಾದರ ಹಿಂದೆ ನಿಂತು ದುಡಿದ ನಮ್ಮ ಕಣ್ಣಿಗೆ ಕಾಣದ ಕೈಗಳು ಹಣ ಸಹಾಯ ಮಾಡಿದ ಹಲವಾರು ದಾನಿಗಳು ಕಾರ್ಯಕರ್ತರು ಇದ್ದಾರೆ. ಅವರ ದುಡಿಮೆ ಯಾರ ಕಣ್ಣಿಗೂ ಕಾಣಿಸದ ರೀತಿಯಲ್ಲಿ ಅಗಿತ್ತು KCF ಸಂಘಟನೆಯ ಯಶಸ್ವಿ ಅಂದರೆ ಇಂತಹ ನಿಸ್ವಾರ್ಥ ಮನಸ್ಸಿನ ಕಾರ್ಯಕರ್ತರಾಗಿದ್ದಾರೆ ಅವರಿಗೂ ಅಲ್ಲಾಹು ತಕ್ಕದಾದ ಪ್ರತಿಫಲ ನೀಡಲಿ ಆಮೀನ್.
ಜಮಾಲುದ್ದೀನ್ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಬಹರೈನ್ KCF ತುಂಬ ಎತ್ತರಕ್ಕೆ ಬೆಳದು ನಿಂತಿದೆ ಅವರ ಸಂಘಟನಾ ಚತುರತೆಯು KCF ನಿಂದ ದೂರ ನಿಂತ ಯುವಕರನ್ನು ಆಕರ್ಷಿಸಿದೆ. ಅವರ ಸೇವೆಯು ಇನ್ನಷ್ಷು ಬಹರೈನ್ KCF ಗೆ ಲಭಿಸಲಿ.ಬಹರೈನ್ KCF ಕಾರ್ಯಕರ್ತರಿಗಾಗಿ ಹಮ್ಮಿಕೊಂಡ ಕುಟುಂಬ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅನಿವಾಸಿ ಕನ್ನಡಿಗರ ಮನಸ್ಸನ್ನು KCF ಕಡೆ ಆಕರ್ಷಿಸಿದೆ.
KCF ಅನಿವಾಸಿ ಕನ್ನಡಿಗರಿಗಾಗಿ ಜಾತಿಮತ ಭೇದ ನೋಡದೆ ಹಲವಾರು ಸಹಾಯವನ್ನು ಮಾಡಿದೆ ಅದರೊಂದಿಗೆ ಸದಸ್ಯರಿಗಾಗಿ ಹಲವಾರು ತರದ ಸಾಂತ್ವನ ನೀಡುವುದರೊಂದಿಗೆ ಇನ್ನೊಂದು ಮೈಲಿಗಲ್ಲಾಗಿದೆ ಕಾರ್ಯಕರ್ತರಿಗಾಗಿ ಎರಡು ಮನೆಗಳ ನಿರ್ಮಾಣ. KCF ಬಹರೈನ್ ಎರಡು ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುವುದು. ಇದರಲ್ಲಿ ಒಂದು ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.