(www.vknews.in) : ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಕೊಡುವುದು ಎಂದು 2023ರ ಬಜೆಟ್ ನಲ್ಲಿ ಮಂಡಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಯಾಕೆ ಈ ಉಚಿತ ಬಸ್ ಪಾಸ್ ಕೊಡಬಾರದು? ಅವರು ಕೂಡ ಈ ದೇಶದ ಪ್ರಜೆಗಳು ಅಲ್ಲಾವೇ…..? ಅವರಿಗೆ ಕೂಡ ಈ ದೇಶದ ಹಕ್ಕು ಇದೆ ಅಲ್ವಾ…….. ಮತ್ತೆ ಯಾಕೆ ರಾಜ್ಯ ಸರಕಾರ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡುತ್ತಿದೆ…..!!!!
ಒಂದು ಕಾಲದಲ್ಲಿ ವಿದ್ಯಾರ್ಥಿಗಳು ಕಲರ್ ಡ್ರೆಸ್ ಹಾಕುತ್ತಿದ್ದರು. ಬಡವರು ಮತ್ತು ಶ್ರೀಮಂತರಲ್ಲಿ ತಾರತಮ್ಯ ಆಗಬಾರದು ಎಂಬ ದೃಷ್ಟಿಕೋನದಿಂದ ಸಮವಸ್ತ್ರವನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಲಾಯಿತು. ವಿದ್ಯಾರ್ಥಿನಿ ಗಳಲ್ಲಿ ಮಾತ್ರ ಬಡವರು ಇರುವುದಲ್ಲ ವಿದ್ಯಾರ್ಥಿಗಳಲ್ಲಿ(ಬಾಲಕರು) ಕೂಡ ಬಡವರು ಇದ್ದಾರೆ. ಅವರಿಗೆ ಉಚಿತ ಬಸ್ ಪಾಸ್ ಯಾಕೆ ಕೊಡಬಾರದು? ಸಂವಿಧಾನ ಹೇಳುತ್ತೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು…. ಆದರೆ ಸರಕಾರವೇ ಈ ರೀತಿ ತಾರತಮ್ಯವನ್ನು ಮಾಡಿದರೆ ಪ್ರಜೆಗಳು ಕೂಡ ಹೀಗೆ ಮಾಡುವುದರಲ್ಲಿ ತಪ್ಪೇನಿದೇ ಎಂಬ ಪ್ರಶ್ನೆ ಸಮಾಜದ ಜನತೆಗೆ ಕಾಡುವುದು ಸಹಜ.
ಹೆಣ್ಣು ಮಕ್ಕಳಿಗೆ ಸವಲತ್ತು ಕೊಟ್ಟದ್ದೇ ಹೆಚ್ಚಾಗಿದೆ ಇನ್ನು ಕೂಡ ಸವಲತ್ತು ಕೊಟ್ಟರೆ ಹುಡುಗರ ಗತಿ ಏನು? ಹೆಣ್ಣು ಮಕ್ಕಳಿಗೆ ಸವಲತ್ತು ಕೊಡಿ….ಬೇಡ ಅಂತ ಹೇಳಲ್ಲ ನಾವು … ಆದರೆ ವಿದ್ಯಾರ್ಥಿಗಳ ಮೇಲೆ ಸ್ವಲ್ಪ ಕರುಣೆ ತೋರಿಸಿ.. ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಬಜೆಟ್ ಮಂಡನೆ ಮಾಡುವಾಗ ದೇಶದ ಎಲ್ಲ ಪ್ರಜೆಗಳನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಬೇಕಾಗಿ ವಿನಂತಿ. ಉಚಿತ ಬಸ್ ಪಾಸ್ ಕೊಡುವುದಾದರೆ ಎಲ್ಲರಿಗೂ ಕೊಡಬೇಕು.
ರಾಕೇಶ್ ಕುಮಾರ್ ರೈ ಬಿ ಎ ವಿದ್ಯಾರ್ಥಿ, ಶ್ರೀ ರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.