(ವಿಶ್ವ ಕನ್ನಡಿಗ ನ್ಯೂಸ್) : ಬೆಳ್ತಂಗಡಿ ತಾಲೂಕಿನ ಶಿರ್ಲಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂತಡ್ಕದ ಜನತೆಗೆ ನಾಲ್ಕೈದು ದಿವಸಗಳಿಂದ ಸರಿಯಾದ ರೀತಿಯಲ್ಲಿ ನೀರಿಲ್ಲದ ಕಾರಣ ಆಕ್ರೋಶಗೊಂಡ ಸ್ಥಳೀಯರು ಪಂಚಾಯತ್ ತೆರಳಿ ಪ್ರತಿಭಟನೆ ನಡೆಸಿದರು. ಪಂಚಾಯತ್ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ನಮಗೆ ಸರಿಯಾದ ರೀತಿಯಲ್ಲಿ ನೀರು ಇಲ್ಲ ಎಂದು ಅಕ್ರೋಶ ಹೊರ ಹಾಕಿದರು.
ನಮಗೆ ಸರಿಯಾದ ರೀತಿಯಲ್ಲಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಗ್ರಾಮ ಪಂಚಾಯತ್ ಪಿಡಿಯೋಗೆ ಸ್ಥಳೀಯರಿಂದ ಮನವಿ ಸಲ್ಲಿಸಲಾಯಿತು. ಸ್ಥಳೀಯರಾದ ಆನಂದ ಪೂಜಾರಿ, ತಿಮ್ಮಪ್ಪ ಶೆಟ್ಟಿ, ಸಿದ್ದೀಕ್ ಬಂತಡ್ಕ, ಹರೀಶ, ಸುರೇಶ, ಲಕ್ಷ್ಮಿ, ಅಶ್ರಫ್, ಮೊಹಮ್ಮದ್, ಕೊರಗಪ್ಪ ಮೊದಲಾದರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.