ಮಂಗಳೂರು (www.vknews.in) : ತುಳುನಾಡಿನ ದೈವಾರಾಧನೆ ಸಂರಕ್ಷಣೆ ಯುವ ವೇದಿಕೆ(ರಿ) ಇದರ ನೇತ್ರತ್ವದಲ್ಲಿ ತುಳುನಾಡಿನ ದೈವ ಭಾಷೆ ಹಾಗೂ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು ಕುಹಕವಾಡಿದ ಬಿಜೆಪಿಯ ಸಚಿವರಾದ ಮಾಧುಸ್ವಾಮಿ ಹಾಗೂ ನಾಗಬನಗಳಿಗೆ ಮಾಂಸಾಹಾರ ತಿಂದು ಬನಗಳ ಪಾವಿತ್ರ್ಯತೆಗೆ ಧಕ್ಕೆ ತಂದಿರುವುದೂ ಮಾತ್ರವಲ್ಲ ಗುಳಿಗೆ ಪಂಜುರ್ಲಿ ನಮ್ಮ ಪಕ್ಷದ ಪರ ಎಂದು ಸಿ.ಟಿ.ರವಿಯವರ ಹೇಳಿಕೆಯ ವಿರುಧ್ದವೂ ಶನಿವಾರ ಸಾಯಂಕಾಲ 4 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯ ನೇತ್ರತ್ವವನ್ನು ತುಳುನಾಡ ದೈವಾರಾಧನೆ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದು, ಮಂಗಳೂರು ದಕ್ಷಿಣ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಡಾ.ಸುಮತಿ ಎಸ್ ಹೆಗ್ಡೆ ಸಾಥ್ ನೀಡಿದರು. ಈ ಸಂಧರ್ಭ ಮಂಗಳೂರು ದಕ್ಷಿಣ ಕ್ಷೇತ್ರ ಜೆಡಿಎಸ್ ಪ್ರ. ಕಾರ್ಯದರ್ಶಿ ಅಲ್ತಾಫ್ ತುಂಬೆ, ಜಾವೇದ್ ಪಾಂಡೇಶ್ವರ , ಕವಿತಾ, ಮನೋಜ್ ಕುಮಾರ್ ,ಸುನಿತಾ ಹಾಗೂ ಹಲವರು ಭಾಗವಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.