(www.vknews.in) : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿ.ಜೆ.ಪಿ.ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರ ನೆನಪಾಗುತ್ತಿದೆ, ಅವರ ಹುಟ್ಟು ಹಬ್ಬದ ನೆಪವನ್ನಿಟ್ಟುಕೊಂಡು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸುವ ಮೂಲಕ ರಾಜ್ಯದಲ್ಲಿ ಬಿ.ಜೆ.ಪಿ.ಯ ಮತ ಬ್ಯಾಂಕ್ ಒಡೆಯದಂತೆ ನೋಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬಿ.ಜೆ.ಪಿ.ಗೆ ಯಡಿಯೂರಪ್ಪರನ್ನು ಬಿಟ್ಟರೆ ಪರ್ಯಾಯ ನಾಯಕರಿಲ್ಲವೆಂದು ಈ ಮೂಲಕ ಜಗಜ್ಜಾಹಿರಾಗಿದೆ ಎಂದು ಕೆ.ಪಿ.ಸಿ.ಸಿ.ವಕ್ತಾರ ಶೌವಾದ್ ಗೂನಡ್ಕ ಹೇಳಿದ್ದಾರೆ.
ದಿಢೀರ್ ಆಗಿ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪರನ್ನು ಕೆಳಗಿಳಿಸುವ ಮೂಲಕ ರಾಷ್ಟ್ರೀಯ ಬಿ.ಜೆ.ಪಿ.ನಾಯಕರು ಅವಮಾನಿಸಿದ್ದರು, ಇದೀಗ ಅವರನ್ನು ಹಾಡಿ ಹೊಗಳುತ್ತಿದ್ದಾರೆ, ಚುನಾವಣೆ ಮುಗಿಯುವವರೆಗೂ ಯಡಿಯೂರಪ್ಪರನ್ನು ಬಳಸಿಕೊಂಡು ನಂತರ ಮೂಲೆಗುಂಪು ಮಾಡುತ್ತಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿ.ಜೆ.ಪಿ.ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ನೇತೃತ್ವವನ್ನು ವಹಿಸಲು ಅಸಮರ್ಥರು ಎಂಬುವುದನ್ನು ಬಿ.ಜೆ.ಪಿ.ಹೈಕಮಾಂಡ್ ಒಪ್ಪಿಕೊಂಡಿದೆ.
ಈ ಕಾರಣಕ್ಕಾಗಿ ಬಿ.ಎಸ್.ಯಡಿಯೂರಪ್ಪರವರನ್ನು ಮತ್ತೆ ಮುನ್ನೆಲೆಗೆ ತರಲಾಗುತ್ತಿದೆ. ಬಿ.ಜೆ.ಪಿ.ಯ ಇಂತಹ ಯಾವುದೇ ಸರ್ಕಸ್ ಗಳು ನಡೆಯುವುದಿಲ್ಲ, ರಾಜ್ಯದಲ್ಲಿರುವುದು 60 ಶೇಕಡಾ ಬಿ.ಜೆ.ಪಿ.ಹಾಗೂ 40 ಶೇಕಡಾ ಕಮಿಶನ್ ಸರ್ಕಾರ, ಮುಂದಿನ ಬಾರಿ ಇವರಿಗೆ ಅಧಿಕಾರ ಸಿಕ್ಕಲ್ಲಿ ಕಮಿಶನ್ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು, ಇಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆಯಬೇಕೆಂದು ಶೌವಾದ್ ಗೂನಡ್ಕರವರು ಮನವಿ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.