(www.vknews.in) ; ಎಚ್.ಐ.ಎಫ್ ಇಂಡಿಯಾದ ‘ ‘ಪ್ರಾಜೆಕ್ಟ್ ಭೂಂದ್’ ಯೊಜನೆ ಯಡಿಯಲ್ಲಿ ನಗರದ ನೀನು ವ್ಯಾಪಾರ ಸ್ಥಳವಾದ ದಕ್ಕೆಯಲ್ಲಿ ಸಾರ್ವಜನಿಕರಿಗೆ ಕುಡಿಯಲು ಶುದ್ಧ ಬಿಸಿ ಮತ್ತು ತಂಪು ನೀರು ಹೊಂದಿರುವಂತಹ ವಾಟರ್ ಡಿಸ್ಪೆನ್ಸರನ್ನು ಧಕ್ಕೆ ಮೀನು ಮಾರಾಟ ಒಕ್ಕೂಟದ ಸಹಕಾರದಿಂದ ಅಳವಡಿಸಲಾಯಿತು. ಎಹ್ಸಾನ್ ಮಸೀದಿಯ ಇಮಾಮ್ ಮೌಲಾನ ಅಲ್ತಾಫ್ ರವರು ದುಆ ನೆರವೇರಿಸುವ ಮೂಲಕ ವಾಟರ್ ಡಿಸ್ಪೆನ್ಸರ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಭಾಷಾ ಹಸನಬ್ಬ, ಗುಜರಾತ್ ಮೂಲದ ಉದ್ಯಮಿ ಮೆಹಬೂಬ್, ಎಚ್.ಐ.ಎಫ್ ಇಂಡಿಯಾ ಅಧ್ಯಕ್ಷ ನಝೀಮ್ ಏ.ಕೆ ಉಪಸ್ಥಿತರಿದ್ದರು. ಮೀನುಗಾರಿಕೆ ಉಪ ನಿರ್ದೇಶಕ ಹರೀಶ್ ಕುಮಾರ್ ಡಿ.ಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮರ್ಹೂಮ್ ಎಸ್, ಎಂ ಬಶೀರ್ ರವರ ಸೇವೆ ಮತ್ತು ಅವರ ಸಮುದಾಯ ಮೇಲಿರುವ ಕಾಳಜಿಯನ್ನು ನೆನಪಿಸಲಾಯಿತು.
ಎಚ್.ಐ.ಎಫ್ ಇಂಡಿಯಾದ ‘ ‘ಪ್ರಾಜೆಕ್ಟ್ ಭೂಂದ್’ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ಬೋರ್ ವೆಲ್, ನೀರಿನ ಪೈಪ್ ಲೈನ್, ಮುಂತಾದ ನಿರಿನb ವ್ಯವಸ್ಥೆಯನ್ನು ಮಾಡಿಕೊಡುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಂತೆ ಧಕ್ಕೆಯಲ್ಲಿ ಸ್ಥಾಪಿಸಿದ ನೀರಿನ ಘಟಕ ಸಂಸ್ಥೆಯ 5ನೇದ್ದಾಗಿದೆ ಎಂದು ರಿಜ್ವಾನ್ ಪಾಂಡೇಶ್ವರ್ ನುಡಿದು, ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.