ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಕಾರೊಂದು ಟ್ರೈಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕೇರಳದ ಚಾಲಕ ಮೃತಪಟ್ಟಿರುವ ಘಟನೆ ರಿಯಾದ್ ನಲ್ಲಿ ನಡೆದಿದೆ. ಮೃತರನ್ನು ಅಲುವಾ ದೇಶಂ ನಿವಾಸಿ ಶಂಸುದ್ದೀನ್ ತುಂಬಲಕತ್ (52) ಎಂದು ಗುರುತಿಸಲಾಗಿದೆ. ಅವರು ಅಲ್-ಹುಮಿಯಾತ್ ನಲ್ಲಿ ಉಂಟಾದ ಅಪಘಾತದಲ್ಲಿ ನಿಧನರಾದರು. ಶಂಶುದ್ದೀನ್ ತನ್ನ ವಾಹನದೊಂದಿಗೆ ಹಾಯಿಲ್ ಗೆ ಹೋಗುತಿದ್ದರು. ಅವರು ಚಾಲನೆ ಮಾಡುತ್ತಿದ್ದ ಕಾರು ಅಲ್ ಹುಮಿಯಾತ್ ನಲ್ಲಿ ಟ್ರೈಲರ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಅವರು ಎರಡು ದಶಕಗಳಿಂದ ಅಲ್ ಖಾರ್ಜ್ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಮೃತದೇಹವನ್ನು ಈಗ ಅಲ್ ಖಸಾರಾ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.