(www.vknews.in) : ತಲಪಾಡಿ ವಲಯ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಸಭೆ ಇಂದು ಸಂಜೆ ವಲಯ ಸಮಿತಿ ಅಧ್ಯಕ್ಷರಾದ ಟಿ. ಎ. ಟಿ ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕ್ಷೇತ್ರದ ಶಾಸಕರಾದ ಯು. ಟಿ ಖಾದರ್, ಉಳ್ಳಾಲ ಬ್ಲಾಕ್ ಸಮಿತಿ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ವಲಯ ಉಸ್ತುವಾರಿ ರವಿರಾಜ್ ಶೆಟ್ಟಿ ಭಾಗವಹಿಸಿದ್ದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತರಲು ಉದ್ದೇಶಿಸಿರುವ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಪ್ರತೀ ತಿಂಗಳು ವ್ಯಕ್ತಿಗೆ ಉಚಿತ 10 ಕೆಜಿ ಅಕ್ಕಿ, ಪ್ರತೀ ಕುಟುಂಬದ ಯಜಮಾನಿಗೆ ಮಾಸಿಕ 2000 ರೂಗಳ ಗ್ಯಾರಂಟಿ ಯೋಜನೆಯ ಕಾರ್ಡ್ ಅನ್ನು ಪ್ರತೀ ಮನೆಗೆ ವಿತರಿಸುವ ಕಾರ್ಯಕ್ರಮದ ಬಗ್ಗೆ ನಿರ್ಧರಿಸಲಾಯಿತು.
ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕೆಸಿ ರೋಡ್ ಹಾಗೂ ಕೆಸಿ ನಗರದ ಯುವ ಮುಖಂಡ ಝಿಯಾದ್ ರವರನ್ನು ಶಾಲು ಹೊದಿಸಿ ವಲಯ ಸಮಿತಿ ಅಧ್ಯಕ್ಷರಾದ ಟಿ. ಎ.ಟಿ ಅಬ್ದುಲ್ ಖಾದರ್ ಗೌರವಿಸಿದರು.
ಮುಂಬರುವ ಮಾರ್ಚ್ 19 ನೇ ತಾರೀಖಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು ಈ ಯಾತ್ರೆಯಲ್ಲಿ ವಿವಿಧ ರಾಜ್ಯ ನಾಯಕರು ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ಅಶ್ರಫ್ ಕೆಸಿ ರೋಡ್, ಝಿಯಾದ್ ಕೆಸಿ ನಗರ ಸೇರಿದಂತೆ ಕ್ಷೇತ್ರದ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ವಲಯ ಸಮಿತಿ ಕಾರ್ಯದರ್ಶಿ ಶಬೀರ್ ಅಲಿ, ಬಿ.ಎಸ್.ಇಸ್ಮಾಯಿಲ್, ಮೊಯ್ದಿನ್ ಬಾವಾ ಕೋಮರಂಗಳ, ಸಲಾಂ ಕೆಸಿ ರೋಡ್, ಸಿದ್ದಿಕ್ ತಲಪಾಡಿ, ಸುರೇಖಾ, ಇಬ್ರಾಹಿಂ ಟಿಎಂ, ಯಾಕೂಬ್ ಪಿಲಿಕೂರು, ಇಬ್ರಾಹಿಂ ಕೆಸಿ ರೋಡ್, ವೈಭವ್ ಶೆಟ್ಟಿ, ವಿನ್ನು ಶೆಟ್ಟಿ, ಗೋಪಾಲ್ ತಲಪಾಡಿ, ಹಸೈನಾರ್, ಸೋಶಿಯಲ್ ಫಾರೂಕ್, ಅಬ್ದುಲ್ ಖಾದರ್ ಮಖ್ಯಾರ್, ಅಬ್ಬಾಸ್ ಪೂಮಣ್ಣು ಮತ್ತಿತರರು ಪಾಲ್ಗೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.