(www.vknews.in) : ಪ್ರತಿಯೊಂದು ಗಂಡಿನ ಹಿಂದೆ ಹೆಣ್ಣಿನ ಸ್ಪೂರ್ತಿ ಇರುತ್ತದೆ ಎಂಬ ಮಾತಿಗೆ ವಿರುದ್ಧವಾಗಿ ಇಲ್ಲಿ ಹೆಣ್ಣಿಗೆ ಗಂಡಿನ ಸ್ಪೂರ್ತಿ ಇದೆ ಎನ್ನುವುದು ಆಶ್ಚರ್ಯಕರವಾದ ಬೆಳವಣಿಗೆಯನ್ನು ಗಮನಿಸಬಹುದು. ಇದೆನ್ ಈ ರೀತಿ ಹೇಳುವುದು ಎಂದು ಕುತೂಹಲ ಭರಿತವಾಗಿದ್ದೀರಾ..?
ಹೌದು ಮೈಸೂರಿನ ಆಲನಹಳ್ಳಿಯವರಾದ ಸಲ್ಮ ಅವರು, ಇದೇ ಊರಲ್ಲಿ ಹುಟ್ಟಿ ಬೆಳದವರಾಗಿದ್ದಾರೆ. ಸಲ್ಮ ಅವರ ತಂದೆ ಅನ್ವರ್ ಪಾಷ, ತಾಯಿ ನೋರ್ ಜಾನ್. ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡ ನತದೃಷ್ಟೆ ಸಲ್ಮ ಅವರು, ಕಲಾ ಕ್ಷೇತ್ರದಲ್ಲಿ ತಮ್ಮದೆಯಾದ ಜೀವನ ಶೈಲಿಯನ್ನು ಕಂಡುಕೊಂಡಿದ್ದಾರೆ. ಇತ್ತೀಚಗೆ ಬೀದಿ ನಾಟಕಗಳ ಮೂಲಕ ಜನಮಾಸದಲ್ಲಿ ಗುರುತಿಸಿಕೊಂಡು ಪ್ರತಿಭಾನ್ವಿತ ಕಲಾವಿದೆಯಾಗಿ ಮಾದರಿಯಾಗಿದ್ದಾರೆ. ತಮ್ಮ ದೈನಂದಿಕವಾಗಿ ಪ್ರತಿಯೊಂದು ಕಾಯಕದಲ್ಲಿ ಇವರ ಗಂಡನ ಸ್ಪೂರ್ತಿಯೇ ಇವರಿಗೆ ಕಾರಣಿಭೂತವಾಗಿ ವರದಾನವಾಗಿದೆ ಎಂದು ಹೇಳಬಹುದು.
ಸದಾ ದಿಟ್ಟತೆಯಲ್ಲಿಯೇ ಮುಂದುವರಿಯುವ ಸಲ್ಮ ಓರ್ವ ಆದರ್ಶ ಮಹಿಳೆಯಾಗಿ ಹೊರ ಹೊಮ್ಮಿರುವದು ನಿಜಕ್ಕೂ ಶ್ಲಾಘನೀಯ ವಿಷಯ. ಹೀಗಾಗಿ ಇವರ ಬಗ್ಗೆ ಬರೆಯಲು ತುಂಬಾ ಸಂತೋಷವಾಗುತ್ತದೆ. ಸಲ್ಮ ಎಂಬ ಹೆಸರಿನಲ್ಲಿಯೇ ತಿಳಿಯುತ್ತದೆ ಆಕೆ ಒಂದು ಮುಸ್ಲಿಂ ಜನಾಂಗದವರಾಗಿದ್ದರೂ ಕೂಡ ಕನ್ನಡವನ್ನು ನಿರಾಳವಾಗಿ ಮಾತನಾಡುವಾಗ ಎಲ್ಲರೂ ನಿಬ್ಬೆರಗಾಗುತ್ತಾರೆ. ಅದರಲ್ಲೂ ಪರುಷರನ್ನು ದೂರುವ ಇಂದಿನ ವ್ಯವಸ್ಥೆಯಲ್ಲಿ ಆಕೆಯ ಗಂಡನೇ ಸ್ಪೂರ್ಥಿಯಾಗಿದ್ದಾರೆ ಎಂದರೆ ನಾವೆಲ್ಲ ಆ ಖುಷಿಯನ್ನು ಹಂಚಿಕೊಳ್ಳಬೇಕು ತಾನೆ..?
ತಮ್ಮ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ನಿಂತು ಮಾರ್ಗದರ್ಶನ ನೀಡುವ ಅವರ ಸೇವೆಗೆ ಎಷ್ಟು ಹೇಳಿದರೂ ಸಾಲುವುದಿಲ್ಲ. ಬೀದಿ ನಾಟಕ ಮಾಡುವುದೆಂದರೆ ಸುಲಭದ ಮಾತಲ್ಲ. ಅದರಲ್ಲೂ ಹೆಣ್ಣಾಗಿ ಸಮಾಜದಲ್ಲಿ ಅಂಧಕಾರ, ಮೌಢ್ಯತೆಗಳನ್ನು ಜನರಿಗೆ ಮನವರಿಕೆ ಮಾಡುವ ಸದುದ್ದೇಶದಿಂದ ಈ ಸೇವಾ ಕಾಯಕಕ್ಕೆ ಧುಮುಖಿದರು. ಇಂದಿನ ಆಧುನಿಕತೆಯಲ್ಲಿ ಹೆಣ್ಣನ್ನು ಕೀಳಾಗಿ ಕಾಣುವವರೇ ಹೆಚ್ಚು, ಅಂತವರ ಮುಂದೆ ಸೆಡ್ಡು ಹೊಡದು ದಿಟ್ಟವಾಗಿ ನಡೆಸುವ ಅವರ ಬೀದಿ ನಾಟಕದ ಬಗ್ಗೆ ಜನಾಭಿಪ್ರಾಯ ಮತ್ತು ಅವರ ಬೆಂಬಲವನ್ನು ನಾವೆಲ್ಲ ಮೆಚ್ಚಲೆ ಬೇಕು.
ನಾನು ಸಲ್ಮ ಅವರನ್ನು ಮೊದಲು ಭೇಟಿ ಮಾಡಿದ್ದು, ಮೈಸೂರಿನ ರಂಗಾಯಣದ ನಾಟಕ ಪ್ರದರ್ಶನ ಮಾಡುವ ಸಂದರ್ಭದಲ್ಲಿ, ಇವರ ಕನ್ನಡದ ಮೇಲಿರುವ ಪ್ರೀತಿ, ಅಭಿಮಾನ, ಗೌರವವನ್ನು ಕಂಡು ನನಗೆಲ್ಲಾ ಹರ್ಷವಾಯಿತು. ಸ್ಪಷ್ಟ ಕನ್ನಡ ನುಡಿಗಳು ಸ್ಪರ್ಶಾಚಿತ್ರವಾಗಿ ಗೋಚರಿಸಿದ್ದು ವಿಭಿನ್ನ ಆಕರ್ಷಣೀಯ. ಇತರರೊಂದಿಗೂ ಅಗಾಧವಾದ ಪ್ರೀತಿಯಿಂದಲೇ ನಡೆದುಕೊಳ್ಳುವ ಇವರ ಸ್ವಭಾವ ಎಲ್ಲರಿಗೂ ಹಿತವೆನಿಸುವದೆಂದೇಳಲು ಅತಿಶಯೋಕ್ತಿವಲ್ಲ. ನಗುಮುಖದ ಹಿಂದೆ ಬಹಳಷ್ಷು ಕಷ್ಷಗಳು ಇರುತ್ತವೆ ಎಂಬುದು ಬದುಕಿನ ವಾಸ್ತವ ಗೌಣ.
ಸಲ್ಮ ಅವರು ಅನುಭವಿಸಿದ ಘಟನೆಗಳನ್ನು ಹೇಳಿದಾಗ ನಿಜಕ್ಕೂ ದುಖಃದ ಜೊತೆಗೆ ಇವರ ದಿಟ್ಟತನದ ಬಗ್ಗೆ ಕೆಲವೊಮ್ಮೆ ಹೆಮ್ಮೆಯಾಗುತ್ತದೆ. ತಂದೆ ಇಲ್ಲವೇಂಬ ಕೊರಗನ್ನು ತಾಯಿಯು ಎಂದೂ ಇವರ ಬಳಿ ಕೈ ಮಾಡಿ ತೋರಿಸಿದವರಲ್ಲ. ಆ ತಂದೆಯ ಸ್ಥಾನವನ್ನು ಸಲ್ಮರಲ್ಲಿ ತಾಯಿ ಸಂಗಮವಾಗಿ ಬೆಳಸಿದರು. ತಾಯಿಯ ಮಾರ್ಗದಲ್ಲಿಯೇ ಅಂದು ಇಂದು ಬೆಳೆಯುತ್ತಲೇ ಇದ್ದಾರೆ. ಇವರು ಉರ್ದು ಶಾಲೆಗೆ ಸೇರದೆ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು ಸೂಕ್ಷ್ಮ ಗ್ರಹಿಕೆಯಾದರೂ ಕೂಡ, ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ಬಿ.ಎ ಪದವಿಯನ್ನು ಪಡೆದಿದ್ದು, ಮಹರಾಣಿ ಕಾಲೇಜಿನಲ್ಲಿ, ಕನ್ನಡ ಮಾದ್ಯಮದಲ್ಲಿಯೇ ಇವರ ಓದಿ ಇಂತಹ ಜನಪ್ರಿಯ ಮನ್ನಣೆಯೊಂದಿಗೆ ಬೆಸೆದು ಇಂದಿಗೂ ತಮ್ಮ ಬದುಕಿನ ಅರ್ಥ ಸಾರದೊಂದಿಗೆ ಸಾಗುತ್ತಿದ್ದಾರೆ.
ಹವ್ಯಾಸಕ್ಕಾಗಿ ಬಾಲ್ಯದಿಂದಲೇ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಇವರು, ವಿಶಿಷ್ಟ ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದೆ 2003 ರಲ್ಲಿ ಪೂನ ಒಪ್ಪಂದ ನಾಟಕ ಮೂಲಕ ಎಲ್ಲರ ಮನಗೆದ್ದದ್ದು ಸಂತಸ. ಅಂಬೇಡ್ಕರ್ ಅವರ ಸಾಮಾಜಿಕ ಪರಿಕಲ್ಪನೆ ಮತ್ತು ಅವುಗಳ ಚಿಂತನೆಗಳ ಕುರಿತು, ಜನರಿಗೆ ಮನದಟ್ಟವಾಗುವ ರೀತಿ ಮತ್ತು ನೀತಿಗಳಲ್ಲಿ “ಜನಾಧಿಕಾರ” ಎಂಬ ಬೀದಿ ನಾಟಕವನ್ನು ಬಸವ ಲಿಂಗನವರ ಮೂಲಕ ರಚನೆ ಮಾಡಿ, ಆ ನಾಟಕದಲ್ಲಿ ಹೆಚ್ಚೆಚ್ಚು ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಲ್ಮ ಅವರ ಮೂಲ ಗುರುಗಳೇ ಇವರು ಎಂದು ಹೇಳಲಾಗುತ್ತಿದೆ.
ಜೀವನದಲ್ಲಿ ಅನೇಕ ಏಳು ಬೀಳನ್ನು ಅನುಭವಿಸಿ ಬಂದವರಾಗಿದ್ದ ಇವರು, ಗಾರೆ ಕೆಲಸ, ಕೂಲಿ ಕೆಲಸ, ಮನೆಕೆಲಸ, ಬಟ್ಟೆ ಅಂಗಡಿಯಲ್ಲಿ ಕೆಲಸ ಹೀಗೆ ಒಂದೇ ಎರಡೆ ಹಲವಾರು ಕೆಲಸವನ್ನು ಮಾಡಿ ತಮ್ಮ ತಾಯಿಯನ್ನು ಸಲುಹಿಸುತ್ತಲೇ ಬದುಕನ್ನು ಹಸನದತ್ತ ಸಾಗಿಸುತ್ತಾ ಬಂದಿದ್ದಾರೆ. ಮುಂದೆ 2011 ರಲ್ಲಿ ಮದುವೆಯಾದ ಇವರ ಗಂಡ ಜೀಸಾನ್ ಖಾನ್ ಅತ್ತೆ ತಾಜೂನೀಸ ಅವರ ಸಹಕಾರವೇ ಮುಂದೆ ಇಂತಹ ಬೀದಿ ನಾಟಕಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿ ಕಲಾವಿದೆಯಾಗಿದ್ದಾರೆ. ಎಲ್ಲರಂತೆ ಅತ್ತೆ ಮುಂದೆ ಸಹಕಾರ ನೀಡದೇ ಹೋಗಿದ್ದಲ್ಲಿ ಇಷ್ಟೊಂದು ಜನಪ್ರಿಯ ಕಲಾವದೆಯಾಗಿ ಸಾಧ್ಯವಾಗುತ್ತಿರಲಿಲ್ಲ ಎಂಬ ಮನದ ಮಾತು ಸಲ್ಮ ಅವರದ್ದಾಗಿದೆ.
ನವ ಮದುವೆಯಾಗಿ ಗಂಡನ ಮನೆಯಲ್ಲಿ ಭಯದ ವಾತಾವರದಲ್ಲಿದ್ದ ಇವರಿಗೆ ಅತ್ತೆಯು ತಾಯಿಯಾಗಿ ಸಲುಹಿದ್ದು ಮನದ ಆಂತರಿಕ ಸಂತೋಷದ ಭಾಸ್ಪತೆಗೆ ಕಾರಣ. ಅಕ್ಕ ಪಕ್ಕದವರು ನಿಮ್ಮ ಸೊಸೆ ಹೀಗೆ ಬೀದಿಯಲ್ಲಿ ನಾಟಕ ಮಾಡುತ್ತರಲ್ಲ..! ನೀವು ಹೇಳಬಾರದೆ..? ಯಾಕೆ ಹೋಗುತ್ತಿರಾ ಎಂದು..? ಹಲವಾರು ಪ್ರಶ್ನೆಗಳು ಸಹ ತೂರಿ ಬಂದವು. ಅದರಲ್ಲೂ ಅವರು ಎಲ್ಲಿಯೂ ಧರ್ಮದ ಪ್ರಕಾರ ಬುರುಕವನ್ನು ಧರಸಿವುದಿಲ್ಲವಲ್ವಾ ಎಂದೆಲ್ಲ ಯಕ್ಷ ಪ್ರಶ್ನೆಗಳು..?? ಅದರ ಬದಲು ಮನುಷ್ಯರನ್ನೂ ಮನುಷ್ಯರಂತೇ ಸಮಾನರಾಗಿ ಕಾಣಬೇಕೆಂದು ಸೀದಾ ಸಾದನೇ ಹೇಳುತ್ತಾರೆ. ಎಷ್ಟು ಬಾರಿ ನೆಂಟರು, ಅಕ್ಕ ಪಕ್ಕದವರು ಹೇಳವ ನಿಂದನೆಯನ್ನು ಸಹಿಸಿಕೊಂಡು ಪತಿ ಹಾಗೂ ಅತ್ತೆಯವರ ನೀಡುವ ಸಹಾಯದಿಂದಲೇ ಇಂದು 2000 ಹತ್ತಿರ ನಾಟಕ ಸಾಧನೆಯನ್ನು ಮಾಡಿದ್ದಾರೆ.
ನೀರು ಮತ್ತು ನೈರ್ಮಲ್ಯ, ಮನುಷ್ಯ ಜಾತಿ ತಾನೋಂದೆ ಒಲಂ, ಮನೆಗಳಲ್ಲಿ ಮಧು ಮಗಳು ಎಂಬ ಚಿನ್ನಮ್ಮನ ಪಾತ್ರದಲ್ಲಿ ತಮ್ಮದೆಯಾದ ಕಲಾ ಪಾತ್ರವಹಿಸಿ ಛಾಪನ್ನು ಮೂಡಿಸಿದ್ದಾರೆ. ಮೈಸೂರು ರಂಗಾಯಣದಲ್ಲಿ ಮೊದಲ ಬಾರಿಗೆ ಮಹಿಳೆಯ ಉತ್ತಮ ಪಾತ್ರ ಮಾಡಿದ್ದಾರೆ ಎಂದರೆ ಬಹುತೇಕ ಅದು ಸಲ್ಮಾಳಿಗೆ ಸಲ್ಲುತ್ತದೆ.
ನಂತರ ಸರ್ಕಾರದಿಂದ ನಡೆಸುವ ವಾರ್ತ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಕೆ, ಬಾಲಪರಾಧದ ಬಗ್ಗೆ ನಾಟಕ, ಕಾರ್ಮಿಕರ ಇಲಾಕೆ, ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸುವ ನಾಟಕ ಎನ್.ಜಿ ಓ, ಮುಖಾಂತರವೂ ಸಹ ಮಾಡಲಾಗುವ ನಾಟಕ, ಸರ್ಕಾರದ ಯೋಜನೆಗಳಾದ ಅನ್ನ ಭಾಗ್ಯ, ಮನಸ್ವನಿ, ಮೈತ್ರಿ, ಕ್ಷೀರ ಭಾಗ್ಯ, ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಬೀದಿ ನಾಟಕ ಹೀಗೆ ಕರ್ನಾಟಕದ ಎಲ್ಲ ಭಾಗಗಳಿಗೂ ಹೋಗಿ ನಾಟಕ ಮಾಡಿದ್ದಾರೆ. ಕೆಲವೊಮ್ಮೆ ಒಂದು ವಾರ, 15 ದಿನವಾದರೂ ಮನೆಗೆ ಹೋಗುವುದಿಲ್ಲ. ಆದರು ಪತಿ ಹಾಗೂ ಅತ್ತೆಯವರು ನೀಡುವ ಸಹಕಾರವನ್ನು ನೆನೆಸುತ್ತಾರೆ ಸಲ್ಮ.
ಪ್ರಾರಂಭದಲ್ಲಿ ತಿಂಗಳಿಗೆ 400 ರೂ. ಕೊಡುತ್ತಿದ್ದರು. ಈಗ ದಿನಕ್ಕೆ 4000 ಸಂಪಾದನೆ ಮಾಡುತ್ತಿದ್ದಾರೆ. ಅವರ ಕೈ ಕೆಳಗೆ 20 ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿ, ಬೀದಿ ನಾಟಕವನ್ನು ಮುಂದಿನ ಪೀಳಿಗಿಗೆ ಉಳಿಸುವ ಕ್ರಿಯೆ ಸದಾ ನಡೆಸುತ್ತಲೇ ಇದ್ದಾರೆ. ಅವರ ಸಂಬಂಧಿಗಳು ಬೀದಿ ನಾಟಕವೆಂದು ಜರಿಯುತ್ತಿದ್ದವರಾಗಿದ್ದರು, ಇವರು ಈಗ ತಮ್ಮ ಮಕ್ಕಳನ್ನು ನಿಮ್ಮ ಜೊತೆ ಕರೆದುಕೊಂಡಿ ಹೋಗಿ ಎನ್ನುತ್ತಾರಂತೆ..! ಇದಲ್ಲವೇ ಹೆಣ್ಣಿನ ಬದಲಾವಣೆಯಂದರೆ..? ಇಂದು ಸರ್ಕಾರವು ಇವರನ್ನು ಗುರುತಿಸಿ ಯಾವುದೇ ಸನ್ಮಾನವವನ್ನು ಮಾಡಿಲ್ಲ, ಯಾವುದೇ ಸಂಘ ಸಂಸ್ಥೆಗಳು ಸಹ ಇವರನನು ಕರೆಸಿ ಸನ್ಮಾನ ಮಾಡುವ ಕಾಯಕವು ಮಾಡಿಲ್ಲ. ಆದರೂ ಇವರು ಯಾವುದೇ ಸಹಾಯವನ್ನು ಅಪೇಕ್ಷಿಸದೆ ತಮ್ಮ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಕನ್ನಡದ ಬಗ್ಗೆ ಅಭಿಮಾನ ಹೊಂದಿದ್ದಾರೆ.
ಬಿಸಿಲು, ಮಳೆ, ಚಳಿಯನ್ನದೆ ಬೀದಿ ನಾಟಕ ಮಾಡುತ್ತಾ ಜನರಿಗೆ ಜಾಗೃತ ಕಾರ್ಯಕ್ರಮ ಮಾಡುವ ವೃತ್ತಿ ಸೇವೆಯಲ್ಲಿ ನಿರತವಾಗಿರುವದು ನಮಗೆಲ್ಲ ಮಾದರಿ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ಪತಿಯೇ ಪರಮೇಶ್ವರ ಅಥವಾ ಅಲ್ಲಾಹನೇ ನಮಗೆ ದಯಾ, ಕರುಣೆ ನೀಡಬಲ್ಲ ಎಂಬ ನಂಬಿಕೆಯಿಂದ ಇಂದಿಗೂ ಈ ಜನ ಸೇವಾ ಕಾಯಕವನ್ನು ಮುಂದುವರಿಸುತ್ತಾ ಸಾಗುತ್ತಿದ್ದಾರೆ. ಇಂತಹವರನ್ನು ಸರ್ಕಾರವಾಗಲಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಾಗಲಿ ಗುರುತಿಸಿ, ಗೌರವಿಸಲಿ ಎನ್ನುವುದು ನನ್ನ ಮನದಾಳದ ಇಂಗಿತವಾಗಿದೆ.
ಜ್ಯೋತಿ ಜಿ, ಮೈಸೂರು. (ಉಪನ್ಯಾಸಕರು, ಸಾಮಾಜಿಕ ಹೋರಾಟಗಾರರು)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.