(www.vknews.in) ಕಾಟಿಪಳ್ಳ ಮುಸ್ಲಿಂ ಯೂತ್ ಎಸೋಸಿಯೇಷನ್ (ಕೆಎಂವೈಎ) ಈಷ್ಟರ್ನ್ ಝೋನ್ ವಾರ್ಷಿಕ ಮಹಾಸಭೆ 17, ಮಾರ್ಚ್ 2023 ಶುಕ್ರವಾರ ದಮ್ಮಾಂನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ನೌಶಾದ್ ರಶೀದ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಇಸ್ಮಾಯೀಲ್ ಕಾಟಿಪಳ್ಳ ರವರ ದುಆ ದ ಬಳಿಕ ಆಹಿದ್ ಇಬ್ನ್ ಶಕೀಲ್ ಸೂರ: ಇಖ್ಲಾಸ್ ಪಠಿಸಿದರು. ಸೈಫುಲ್ಲಾ ಮುಹ್ಯಿದ್ದೀನ್ ಸ್ವಾಗತಿಸಿದರು. ಇಸ್ಮಾಯೀಲ್ ಇಬ್ನ್ ಸ್ವಾಲಿಹ್ ಉಸ್ತಾದ್ ರವರು ರಮಳಾನ್ ಸಂದೇಶದೊಂದಿಗೆ ಆ ಮಾಸವನ್ನು ಯಾವ ರೀತಿ ಕಾರ್ಯಗತಗೊಳಿಸಬೇಕು ಎಂಬುದರ ಬಗ್ಗೆ ವಿವರವಾಗಿ ವಿವರಿಸಿದರು.
ತದನಂತರ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರು ವಾರ್ಷಿಕ ವರದಿ ವಾಚಿಸಿದರು ಹಾಗೂ ಕೋಶಾಧಿಕಾರಿ ಪಿ.ಎಂ. ತಾಜುದ್ದೀನ್ ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿದರು. ಮ್ಯಾನ್ ಆಫ್ ದಿ ಇಯರ್ ಅವಾರ್ಡ್ ನ್ನು ಸೈಫುಲ್ಲಾ ಮುಹ್ಯಿದ್ದೀನ್, ಮಾಸಿಕ ಸಭೆಗಳಲ್ಲಿ ಹೆಚ್ಚಿನ ಹಾಜರಾತಿ ಪಡೆದಿದ್ದಕ್ಕೆ ಪರ್ಫೆಕ್ಟ್ ಅಟೆಂಡನ್ಸ್ ಸರ್ಟಿಫಿಕೇಟ್ ನ್ನು ಶಕೀಲ್ ಆದಂ ಹಾಗೂ ಗೌರವಾರ್ಥವಾಗಿ ಕೆಎಂವೈಎ ಶ್ಲಾಘನೀಯ ಯೋಗ್ಯತಾ ಪತ್ರವನ್ನು ಮುಸ್ಥಫ ಇಬ್ರಾಹೀಂ ತನ್ನದಾಗಿರಿಸಿಕೊಂಡರು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ನೌಶಾದ್ ರಶೀದ್ ಮಾತನಾಡಿ ಕೆಎಂವೈಎ ಗಾಗಿ ದುಡಿದವರಿಗೆ ಕ್ರತಙ್ಞತೆ ಯನ್ನು ಅರ್ಪಿಸಿ ಮುಂದಕ್ಕೂ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ನಮ್ಮೊಂದಿಗಿರಲಿ ಎಂದು ಭಿನ್ನವಿಸಿದರು. 2023-24 ನೇ ಸಾಲಿಗೆ ನೂತನ ಸಮಿತಿಯನ್ನು ಸಂಘದ ಗೌರವಾಧ್ಯಕ್ಷ ಪಿ.ಎ. ಮುಹಮ್ಮದ್ ಬಶೀರ್ ರವರ ಉಸ್ತುವಾರಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಮುಸ್ಥಫ ಇಬ್ರಾಹೀಂ, ಗೌರವಾಧ್ಯಕ್ಷರಾಗಿ ನೌಶಾದ್ ರಶೀದ್, ಕೋಶಾಧಿಕಾರಿಯಾಗಿ ಪಿ.ಎಂ. ತಾಜುದ್ದೀನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಕಾಟಿಪಳ್ಳ ರವರನ್ನು ನೇಮಕಗೊಳಿಸಲಾಯಿತು. ಉಪಾಧ್ಯಕ್ಷರಾಗಿ ನಿಯಾಝ್ ಅಹ್ಮದ್ ಮತ್ತು ಪಿ.ಎ. ಶಬೀರ್, ಜೊತೆ ಕಾರ್ಯದರ್ಶಿಗಳಾಗಿ ಸೈಫುಲ್ಲಾ ಮುಹ್ಯಿದ್ದೀನ್ ಮತ್ತು ತ್ವಾಹಿರ್ ಅಲೀ, ಉಪ ಕೋಶಾಧಿಕಾರಿಯಾಗಿ ಆಸಿಫ್ ಆಯ್ಕೆಗೊಂಡರು. ಸಂಘಟನಾ ಕಾರ್ಯದರ್ಶಿಯಾಗಿ ಶಕೀಲ್ ಆದಂ, ಆಡಿಟರ್ ಆಗಿ ಅಬ್ದುಲ್ ಗಪ್ಪಾರ್, ಸಲಹಾ ಸಮಿತಿಗೆ ಪಿ.ಎ.ಮುಹಮ್ಮದ್ ಬಶೀರ್,ಪಿ.ಎಂ. ಆರಿಫ್,ನಝೀರ್ ಗುಲಾಂ, ಪಿ.ಎಚ್.ಇಖ್ಬಾಲ್, ಪಿ.ಎಂ.ಹನೀಫ್, ಪಿ.ಎ. ರಹ್ಮಾನ್ ಹಾಗೂ ಓರ್ಗನೈಝರ್ ಗಳಾಗಿ ಹಂಝ, ರಫೀಖ್, ಕಲಂದರ್, ಇಮ್ತಿಯಾಝ್, ಹಸನ್ ಸಈದ್ ಮತ್ತು 25 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮುಸ್ಥಫಾ ಇಬ್ರಾಹೀಂ ರವರು ಮಾತನಾಡುತ್ತಾ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ವಿದ್ದರೆ ಮಾತ್ರ ಅಭಿವ್ರಧ್ಧಿ ಸಾಧಿಸಲು ಸಾಧ್ಯ. ನಮ್ಮೊಂ. ದಿಗೆ ಕೈ ಜೋಡಿಸಿ ಯಶಸ್ವಿಗೊಳಿಸಿರಿ ಎಂದು ವಿನಂತಿಸಿದರುಹಸನ್ ಸಈದ್,ಹಂಝ, ಶಬೀರ್,ನಝೀರ್ ಮತ್ತು ಶಕೀಲ್ ರವರು ನೂತನ ಸಮಿತಿಗೆ ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ಧನ್ಯವಾದ ಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.