ಚೆನ್ನೈ (ವಿಶ್ವ ಕನ್ನಡಿಗ ನ್ಯೂಸ್) : ಯುವತಿಯರೊಂದಿಗೆ ಸರಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ತಮಿಳುನಾಡಿನ ಯುವ ಪಾದ್ರಿಯೊಬ್ಬರನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕನ್ಯಾಕುಮಾರಿ ಬಳಿಯ ತಾಕಳಾ ಚರ್ಚ್ನ 29 ವರ್ಷದ ಯುವ ಪಾದ್ರಿ ಬೆನ್ಡಿಕ್ಟ್ ಆಂಟೊ ಬಂಧಿತ ಎಂದು ಗುರುತಿಸಲಾಗಿದೆ.
ಬೆನ್ಡಿಕ್ಟ್ ಆಂಟೊ ಲ್ಯಾಪ್ಟಾಪ್ನಿಂದ ಆಸ್ಟಿನ್ ಎನ್ನುವ ಸ್ನೇಹಿತನೊಬ್ಬ ಅವರ ಖಾಸಗಿ ವಿಡಿಯೊ ಮತ್ತು ಫೋಟೊಗಳನ್ನು ಕದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಸಂತ್ರಸ್ತ ಯುವತಿ ಇಬ್ಬರ ವಿರುದ್ಧ ನಾಗರ್ಕೋಯಿಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ಬೆಳಕಿಗೆ ಬಂದ ಮೇಲೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಬೆನ್ಡಿಕ್ಟ್ ಆಂಟೊನನ್ನು ಕನ್ಯಾಕುಮಾರಿ ಪೊಲೀಸರು ಬಂಧಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.