ಬೆಳಗಾವಿ (www.vknews.in) : ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ ಮಹಾತಪಸ್ವಿ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಏಪ್ರಿಲ್ನಲ್ಲಿ 11 ರಿಂದ ಒಂದು ತಿಂಗಳ ಕಾಲ ವೈದಿಕ ಶಿಕ್ಷಣದ ವೀರಶೈವ ಧರ್ಮ ಸಂಸ್ಕೃತಿಯ ಸಂಸ್ಕಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವೀರಶೈವ ಜಂಗಮ ವಿದ್ಯಾರ್ಥಿಗಳು ಶಾಲೆಯ ಬೇಸಿಗೆ ರಜಾ ಕಾಲದ ಈ ಶಿಬಿರದಲ್ಲಿ ಪಾಲ್ಗೊಂಡು ವೀರಶೈವ-ಲಿಂಗಾಯತ ಧರ್ಮ ಪರಂಪರೆಗೆ ಅನುಗುಣವಾದ ನಿಯಮಗಳನ್ನ, ಇಷ್ಟಲಿಂಗ ಪೂಜಾ ವಿಧಾನದ ವೈದಿಕ ಮಂತ್ರ ಪಠಣ ಹಾಗೂ ಶ್ರೀರುದ್ರ ಪಾರಾಯಣದ ವಿಧಾನವನ್ನು ಶಾಸ್ತ್ರೀಯವಾಗಿ ಅರಿತುಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳ ಜೊತೆಗೆ ಮಕ್ಕಳ ಪಾಲಕರು ಇಲ್ಲವೇ ಪೋಷಕರಿಗೂ ಸಹ ಈ ಶಿಬಿರದಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಸನಿವಾಸ ಶಿಬಿರವಾಗಿದ್ದು, ಮೂವತ್ತು ದಿನಗಳ ಅವಧಿಯಲ್ಲಿ ವಸತಿ ಮತ್ತು ಪ್ರಸಾದ(ಊಟ)ವನ್ನು ಉಚಿತವಾಗಿ ಒದಗಿಸಲಾಗುವುದು.
ಈ ಶಿಬಿರ ಕುರಿತು ಹೆಚ್ಚಿನ ಮಾಹಿತಿಗಾಗಿ ಶಿಬಿರದ ವ್ಯವಸ್ಥಾಪಕ ವ್ಹಿ.ವ್ಹಿ. ಪದಕಿಮಠ(ಮೊ:9845480675 ), ಜಗದನಗೌಡ ಗಂದಿಗವಾಡ (ಮೊ: 9686208575) ಅಥವಾ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದ ಆಡಳಿತಾಧಿಕಾರಿ ಎಂ.ಆರ್. ಹಿರೇಮಠ (ಮೊ:9663511022) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.