ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್) : ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಂತ ಜೋಸೆಪರ ಫೆರೋನಾ ಚರ್ಚ್ ಬಳಿ ಬುಧವಾರ ಅಪರಾಹ್ನ ನಡೆದಿದೆ.
ಬೆಳ್ತಂಗಡಿ ತಾಲೂಕು, ಕುವೆಟ್ಟು ಗ್ರಾಮದ ಪಡ್ಯಾರು ಮಜಲು ನಿವಾಸಿ ಸರ್ವೆಯ್ ಸಹಾಯಕ ವೃತ್ತಿಯ ಪ್ರಸಾದ್ ಶೆಟ್ಟಿ (27) ಮೃತಪಟ್ಟವರು. ಸಹಸವಾರನನ್ನು ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಜ್ಯೋತಿ ಆಸ್ಪತ್ರೆ ಸಮೀಪದ ನಿವಾಸಿ, ಸರ್ವೇಯರ್ ವೃತ್ತಿಯ ವಿಶ್ವನಾಥ ರಾವ್ (42) ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದ ಸಂದರ್ಭ ಪ್ರಸಾದ್ ಶೆಟ್ಟಿ ಹಾಗೂ ವಿಶ್ವನಾಥ ರಾವ್ ಅವರಿಬ್ಬರೂ ಮೋಟಾರು ಸೈಕಲ್ ಸಹಿತ ರಸ್ತೆಗೆ ಬಿದ್ದಿದ್ದು, ಲಾರಿಯ ಹಿಂದಿನ ಚಕ್ರ ಪ್ರಸಾದ್ ಅವರ ಬಲಕಾಲಿನ ತೊಡೆಯ ಬಳಿ ಹಾದು ಹೋದ ಪರಿಣಾಮ ಪ್ರಸಾದ್ ಅವರ ಬಲಕೈ ಮಣಿಗಂಟಿಗೆ ರಕ್ತ ಗಾಯ, ಹೊಟ್ಟೆಯ ಕೆಳಗಡೆ ತೊಡೆಯ ಬಳಿ ಗುದ್ದಿದ ತೀವ್ರ ಸ್ವರೂಪದ ಗಾಯ ಹಾಗೂ ಸಹ ಸವಾರ ವಿಶ್ವನಾಥ್ ರಾವ್ ಅವರ ಬಲಕೈ ಮೊಣಗಂಟಿನ ಬಳಿ ರಕ್ತಗಾಯಗಳಾಗಿರುತ್ತದೆ.
ತಕ್ಷಣ ಇಬ್ಬರನ್ನು ಕೂಡಾ ಚಿಕಿತ್ಸೆಗಾಗಿ ಉಜಿರೆ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ಪೈಕಿ ಪ್ರಸಾದ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.