ಕಲಬುರಗಿ (ವಿಶ್ವ ಕನ್ನಡಿಗ ನ್ಯೂಸ್) : ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಮಹಾನಂದ (22) ಕೊಲೆಯಾದ ಮಹಿಳೆ. ಒಂದು ವರ್ಷದ ಹಿಂದೆ ರಾಜು ಅಟ್ಟದಮನಿ ಜೊತೆ ಜೇವರ್ಗಿ ತಾಲೂಕಿನ ಹಂದನೂರ ಗ್ರಾಮದ ನಿವಾಸಿಯಾಗಿದ್ದ ಮಹಾನಂದಗೆ ಮದುವೆಯಾಗಿತ್ತು.
ರಾಜು ಮತ್ತು ಆತನ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಮಹಿಳೆಯ ಪೋಷಕರು, ಮದುವೆಯ ಬಳಿಕ ಮಹಾನಂದಗೆ ಸರಿಯಾಗಿ ಊಟ ಕೊಡದೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಮದುವೆ ವಾರ್ಷಿಕೊತ್ಸವಕ್ಕೆ ಬಂಗಾರ ನೀಡುವಂತೆ ರಾಜು ಬೇಡಿಕೆ ಇಟ್ಟಿದ್ದ. ಬಂಗಾರ ಕೊಡಲು ಆಗದೆ ಇರುವ ಹಿನ್ನಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.