ಕೂಡ್ಲಿಗಿ (www.vknews.in) : ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಪೊಲೀಸರು ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೋ..!? ಇಲ್ಲವೋ..!? ಎಂಬ ಯಕ್ಷ ಪ್ರೆಶ್ನೆ ಪಟ್ಟಣದ ಪ್ರಜ್ಞಾವಂತ ನಾಗರೀಕರಲ್ಲಿ ಕಾಡುತ್ತಿದೆಯಂತೆ.
ಅದಕ್ಕೆ ಪುಷ್ಠಿ ನೀಡುವಂತಹ ಪ್ರಸಂಗಗಳು, ಪಟ್ಟಣದಲ್ಲಿ ನಿತ್ಯ ಜರುಗುತ್ತಿವೆಯಂತೆ. ಆ ಹಾಗಾಗಿ ಈ ಪ್ರೆಶ್ನೆ ತಮ್ಮಲ್ಲಿ ಮೂಡುತ್ತಿದೆ ಎನ್ನುತ್ತಾರೆ, ಪಜ್ಞಾವಂತರು, ಹೋರಾಟಗಾರರು ಹಾಗೂ ನಾಗರೀಕರು. ಠಾಣೆಯಲ್ಲಿ ಜರುಗಿದ ಪ್ರತಿ ಸಭೆಗಳಲ್ಲಿ, ಪ್ರಸ್ಥಾಪವಾಗುವ ಸಾರ್ವಜನಿಕರ ಸಮಸ್ಯೆಗಳು ಹಾಗೇ ಜೀವಂತ ಇವೆ. ಪೋಲೀಸ್ ಠಾಣೆಯ ಮುಂದೆಯೇ ಪ್ರತಿನಿತ್ಯ ವಾಹನ ಧಟ್ಟಣೆ ಸೃಷ್ಠಿಯಾಗುತ್ತಿದೆ, ಭಾರೀ ವಾಹನಗಳ ಸಂಚಾರ ನಿವಾರಿಸುವಲ್ಲಿ ಇಲಾಖೆ ವಿಫಲವಾಗಿದೆ ಎನ್ನುತ್ತಾರೆ ಕೆಲ ಸಂಘಟನೆಕಾರರು.
ಪ್ರತಿ ದಿನದ ಶಾಲಾವಧಿಗಳಲ್ಲಿ ಭಾರೀವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಬೇಕಿದೆ, ಪ್ರತಿ ವೃತ್ತಗಳಲ್ಲಿ ವಾಹನ ಧಟ್ಟಣೆ ನಿಯಂತ್ರಿಸಲು ಅಗತ್ಯ ಕ್ರಮ ಜರುಗಿಸಬೇಕಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಂಚರಿಸುವ ದಿನದ ಎರೆಡು ವೇಳೆ ತಲಾ ಒಂದು ತಾಸು, ಪ್ರಮುಖ ವೃತ್ತಗಳಲ್ಲಿ. ಪೊಲೀಸ್ ಪೇದೆ ನೇಮಿಸಬೇಕೆಂಬ ತಮ್ಮ ಹಕ್ಕೊತ್ತಾಯ ಕೆಲ ವರ್ಷಗಳಿಂದಲೂ ಹಾಗೇ ಇದೆ ಎಂದು ಹಿರಿಯ ನಾಗರೀಕರು ದೂರಿದ್ದಾರೆ. ಅಕ್ರಮ ಮದ್ಯ ಎಗ್ಗಿಲ್ಲದೇ ಸಾಗಾಟವಾಗುತ್ತಿದ್ದು, ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಜರುಗಿಸಬೇಕೆಂಬ ತಮ್ಮ ಒತ್ತಾಯಕ್ಕೆ, ಕವಡೇ ಕಾಸಿನ ಕಿಮ್ಮತ್ತಿಲ್ಲ ಎಂದು ಕೆಲ ಹೋರಾಟಗಾರರು ತೀವ್ರ ಬೇಸರ ವ್ಯೆಕ್ತಪಡಿಸಿದ್ದಾರೆ.
ಪಟ್ಟಣದ ಹೊರ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ, ಕೆಲ ಮನೆಗಳಿಗೆ ಹೊಂದಿಸಿರುವ ಕಿಟಕಿ, ವೆಂಟರ್ಲೇಟ್, ಬಾಗಿಲು ಪಟ್ಟಿ ಸೇರಿದಂತೆ ಕೆಲ ಮನೆಯ ಪರಿಕರಗಳನ್ನು. ಕಿಡಿಗೇಡಿಗಳು ಹಾಡು ಹಗಲೇ ಕದ್ದೊಯ್ಯೊದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ, ಸಂಬಂಧಿಸಿದಂತೆ ಕೆಲ ಮನೆಗಳ ಮಾಲೀಕರು ದೂರು ನೀಡಿದ್ದಾರೆ ಪ್ರಯೋಜನವಾಗಿಲ್ಲ. ಇಂತಹ ಹಗಲು ಕಳ್ಳತನ ಪ್ರಕರಣಗಳು ರಾತ್ರಿ ಕಳ್ಳತನ ಪ್ರಕರಣಗಳು ಹಲವು ಜರುಗಿದ್ದು, ಕೆಲವು ಕಳ್ಳತನ ಪ್ರಕರಣಗಳ ದೂರು ದಾಖಲಾಗಿವೆ. ಕೆಲವು ಕಳ್ಳತನ ಪ್ರಕರಣಗಳು ಮಾಲೀಕರ ಹಿಂಜರಿಕೆತನದಿಂದ ದೂರು ದಾಖಲಾಗಿಲ್ಲ. ಮನೆ ಹತ್ತಿರ ಕಟ್ಟಿದ್ದ ದನಗಳ ಕಳ್ಳತನ, ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣಗಳು ಜರುಗಿರುವುದಾಗಿ ಎಂದು ತಿಳಿದು ಬಂದಿದೆ.
ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ, ಅಥವಾ ಅಪರಾಧಿಗಳ ಪತ್ತೆ ಅಥವಾ ಅಪರಾಧಿಗಳ ಬಂಧನ ಕುರಿತು. ಸಂಬಂಧಿಸಿದ ದೂರುದಾರರಿಗೆ ಅಥವಾ ಸಾರ್ವಜನಿಕರಿಗೆ, ಠಾಣೆಯಿಂದ ಯಾವುದೇ ರೀತಿಯಲ್ಲಿ ಮಾಹಿತಿ ಅಥವಾ ಸ್ಪಂಧನೆ ದೊರಕುತ್ತಿಲ್ಲ ಎಂದು ಕೇಳಿ ಬಂದಿದೆ. ಶಾಲಾ ಕಾಲೇಜು ಗಳ ಹತ್ತಿರ, ಪ್ರಮುಖ ರಸ್ತೆಗಳ ತಿರುವುಗಳ ಹತ್ತಿರ, ಮತ್ತು ಇಳಿಜಾರಿನಂತಿರುವ ಗುಡೇ ಕೋಟೆ ರಸ್ತೆಯ ಎಸ್ ಬಿಐ ಬ್ಯಾಂಕ್ ಹತ್ತಿರ, ಶ್ರೀಬಸವೇಶ್ವರ ವೃತ್ತದ ಬಳಿ ಎರೆಡೂ ಬದಿಯ ರಸ್ತೆ ಗಳಲ್ಲಿ. ವಾಹನ ವೇಗ ಮಿತಿಗಾಗಿ ರಸ್ತೆ ದಿಬ್ಬಗಳನ್ನು ನಿರ್ಮಿಸಬೇಕೆಂಬ, ಸಾರ್ವಜನಿಕರ ಹತ್ತಾರು ತಿಂಗಳ ಹಕ್ಕೊತ್ತಾಯ ಹಾಗೇ ಇದೆ ಎಂದು ಕೆಲ ಹಿರಿಯ ನಾಗರೀಕರು ದೂರಿದ್ದಾರೆ.
ಅಪಘಾತ ವಲಯ ಎಂದು ಗುರುತಿಸಬಹುದಾದ ಸ್ಥಳಗಳಲ್ಲಿ, ವಾಹನಗಳ ದಟ್ಟನೆ ಹಾಗೂ ವೇಗ ನಿಯಂತ್ರಣಕ್ಕೆ. ಅಗತ್ಯ ಕ್ರಮಗಳನ್ನು ಪೊಲೀಸ್ ಇಲಾಖೆ ಈವರೆಗೂ ಕೈಗೊಂಡಿಲ್ಲ, ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಠಾಣೆಗಳಲ್ಲಿ ಜರುಗುವ ಹಬ್ಬ ಗಳ ಶಾಂತಿ ಸಭೆಗಳು, ಕುಂದು ಕೊರತೆ ಆಲಿಸುವ ಸಭೆಗಳು. ಹಾಗೂ ಮೇಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜರುಗುವ ಮಹತ್ವದ ಸಭೆಗಳ ಬಗ್ಗೆ, ಪಟ್ಟಣದ ಬಹುತೇಕ ಮುಖಂಡರಿಗೆ. ಮಾಧ್ಯಮದವರಿಗೆ, ಪಟ್ಟಣದ ಹಿರಿಯ ನಾಗರೀಕರಿಗೆ ಮತ್ತು ಕೆಲ ಸಂಘಟನೆಕಾರರಿಗೆ. ಬಹುತೇಕ ಸಭೆಗಳು ಜರುಗಿರುವ ಬಗ್ಗೆ, ಈ ವರೆಗೂ ಮಾಹಿತಿ ದೊರಕ್ಕುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.
ಪಟ್ಟಣದಲ್ಲಿ ಭಾರೀ ವಾಹನಗಳ ಸಂಚಾರದ ವಿರುದ್ಧ, ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಂಬಂಧಿಸಿದಂತೆ ಠಾಣೆಯಲ್ಲಿ ಜರುಗಿರುವ ಪ್ರತಿ ಸಭೆಗಳಲ್ಲಿ, ಈ ಕುರಿತು ದೂರಲಾಗುತ್ತಿದೆ ಯಾದರೂ ಪ್ರಯೋಜವಾಗಿಲ್ಲ ಎಂದು ಕೆಲ ಹೋರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಭಾರೀ ವಾಹನಗಳು ಪಟ್ಟಣದಲ್ಲಿ, ಕೆಲವೊಮ್ಮೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸಂಚರಿಸಿತ್ತಿವೆ. ಪೊಲೀಸ್ ಠಾಣೆಯ ಮುಂಬಾಗಿಲಲ್ಲೇ ಭಾರೀ ಸದ್ದಿನೊಂದಿಗೆ, ಅತೀ ವೇಗ ವಾಗಿ ಸಂಚರಿಸುತ್ತಿವೆ ಮತ್ತು ಅವುಗಳಿಂದಾಗಿ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ತೀವ್ರ ವಾಹನ ದಟ್ಟಣೆ ಆಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸುವ ಸಂದರ್ಭದಲ್ಲಿ ಕೂಡ , ರಸ್ತೆಯಲ್ಲಿ ಮಕ್ಕಳು ಸಂಚರಿಸುತ್ತಿದ್ದರೂ ಸಹ ವಾಹನಗಳ ವೇಗದ ಮಿತಿ ತಗ್ಗಿರುವುದಿಲ್ಲ.
ಇದನ್ನು ಕಂಡರೂ ಕಾಣದಂತಿರುವ ಕೂಡ್ಲಿಗಿ ಪೊಲೀಸರು, ತಪ್ಪಿತಸ್ಥರ ವಿರುದ್ಧ ಶಿಸ್ಥು ಕ್ರಮ ಜರುಗಿಸುತ್ತಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ದೂರಿದ್ದಾರೆ. ಬೈಕ್ ಸವಾರರು ಸಂಚರಿಸುವ ಸಂದರ್ಭದಲ್ಲಿ, ದಾಖಲಾತಿ ಪರಿಶೀಲನೆಗಾಗಿ ಬೈಕ್ ಗಳಿಗೆ ಕೈ ಅಡ್ಡಗಟ್ಟಿ ದಂಢ ವಿಧಿಸುವ ನಮ್ಮ ಪೊಲೀಸರು. ತಮ್ಮ ಕಣ್ಣು ಎದುರೇ ಭರ್ಝರಿ ಸದ್ದು ಮಾಡುವ ಭಾರೀ ವಾಹನಗಳ, ಸದ್ದು ಅಡಗಿಸುತ್ತಿಲ್ಲ ಏಕೆ.!?. ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ನಿತ್ಯ ನಿರ್ಮಾಣವಗುತ್ತಿರುವ ವಾಹನ ದಟ್ಟಣೆ ಸಮಸ್ಯೆ ನಿವಾರಿಸುತ್ತಿಲ್ಲ ಏಕೆ.!?.
ಮಕ್ಕಳ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಲೆ ಇಲ್ಲವೇ.!?
ಪ್ರಭಾವಿಗಳು ವಾಹನದ ಮುಖಾಂತರ ರಸ್ತೆಯಲ್ಲಿ ಹಾದು ಹೋಗುವ ಸಂದರ್ಭದಲ್ಲಿ, ತಾಸು ಗಟ್ಟಲೆ ಪೊಲೀಸ್ ಸಿಬ್ಬಂದಿ ನೇಮಿಸುವ ಅಧಿಕಾರಿಗಳು. ನಾಡಿನ ಭವಿಷ್ಯದ ಆಸ್ಥಿಯಾಗಿರುವ ಚಿಕ್ಕ ಮಕ್ಕಳು ಹಾಗೂ ವಿದ್ಯಾರ್ಥಿಗಳು ಪಾದಾಚಾರಿಗಳಾಗಿ, ರಸ್ತೆಯಲ್ಲಿ ಸಂಚರಿಸುವ ಸಮಯದಲ್ಲಿ ಸುರಕ್ಷತಾ ದೃಷ್ಠಿಯಿಂದ ಸಿಬ್ಬಂದಿ ನೇಮಿಸುತ್ತಿಲ್ಲ ಏಕೆ.!? ಎಂಬ ಪ್ರೆಶ್ನೆ ಪ್ರಜ್ಞಾವಂತ ನಾಗರೀಕರಲ್ಲಿ ಕಾಡುತ್ತಿದೆ. ವಿದ್ಯಾರ್ಥಿಗಳು ಸಂಚರಿಸುವ ಬೆಳಗಿನ ಸಮಯ ಮತ್ತು ಸಂಜೆಯ ಸಮಯದಲ್ಲಿ, ಪ್ರಮುಖ ವೃತ್ತಗಳಲ್ಲಿ ಜರುಗುವ, ವಾಹನ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸುತ್ತಿಲ್ಲ ಏಕೆ.!? ಓ..ಹೋ.. ಆ ಮಕ್ಕಳು, ವಿದ್ಯಾರ್ಥಿಗಳು ಪ್ರಭಾವಿ ವ್ಯಕ್ತಿಗಳ ಮಕ್ಕಳಲ್ಲವಲ್ಲ., ಯಾವ ಅಧಿಕಾರಿಗಳ ಮಕ್ಕಳಲ್ಲವಲ್ಲ.., ಬಂಡವಾಳ ಶಾಯಿಗಳ ಮಕ್ಕಳಲ್ಲವಲ್ಲ… ರಾಜಕಾರಣಿಗಳ ಮಕ್ಕಳಲ್ಲವಲ್ಲ. ಎಂಬ ಕಾರಣಕ್ಕೆ ಪೊಲೀಸರು ಈ ನಿರ್ಲಕ್ಷ್ಯ ತೋರುತ್ತಿದ್ದಾರೇನೋ.!? ಎಂಬ ಯಕ್ಷ ಪ್ರೆಶ್ನೆ ಪ್ರಜ್ಞಾವಂತರನ್ನ ಮತ್ತು ಪೋಷಕರನ್ನು ಕಾಡುತ್ತಿದೆ ಯಂತೆ.
ಈ ಎಲ್ಲ ಪ್ರೆಶ್ನೆಗಳಿಗೆ ಕೂಡ್ಲಿಗಿ ಪೊಲೀಸರು ಶೀಘ್ರವೇ ಅಗತ್ಯ ಕ್ರಮಗಳನ್ನು ಜರುಗಿಸುವ ಮೂಲಕ, ಸಾರ್ವಜನಿಕರ ಹಾಗೂ ಪ್ರಜ್ಞಾವಂತರ ಜನಪರ ಕಾಳಜಿಯ ಪ್ರೆಶ್ನೆಗಳಿಗೆ ಉತ್ತರ ಕೊಡಬೇಕಿದೆ. ನಿರ್ಲಕ್ಷ್ಯ ತೋರಿದ್ದಲ್ಲಿ ಕೂಡ್ಲಿಗಿ ಪೊಲೀಸರು ಇದ್ದಾರೋ..!?- ಇಲ್ಲವೋ…!?ಎಂಬ ಪ್ರಶ್ನೆ, ಸಾರ್ವಜನಿಕ ವಲಯದಲ್ಲಿ ಸಹಜವಾಗಿಯೇ ಹುಟ್ಟುತ್ತದೆ.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.