(www.vknews.in) ; ಕೊಡಗು ಮುಸ್ಲಿಂ ಕಪ್ 2023 ರಲ್ಲಿ ಪ್ರಪ್ರಥಮ ವಾಗಿ ಆಯೋಜಿಸಿದ 40 ತಂಡಗಳನ್ನೊಳಗೊಂಡ ಶಟಲ್ ಟೂರ್ನಮೆಂಟ್ ಕ್ರೀಡಾಕೂಟವು ನೆಲ್ಲಿ ಹುದಿಕೇರಿ ಒಳಾಂಗಣ ಕ್ರೀಡಾಂಗಣ ದಲ್ಲಿ ಜರುಗಿತು.
ಫ್ರೀಡಂ ಬಾಯ್ಸ್ ಹುಂಡಿ ಕ್ರಿಕೆಟ್ ಮುಸ್ಲಿಂ ಕಪ್ ನಲ್ಲಿ ಅತೀ ಹೆಚ್ಚು ಬಾರಿ ಚಾಂಪಿಯನ್ ಆದ ತಂಡದ ಅಪ್ರತಿಮ ಕೊಡಗು ಕಂಡಂತಹ ಶ್ರೇಷ್ಠ ಅನುಭವಿ ಆಟಗಾರ ರಿಯಾಝ್ ಯಹ್ಯಾ ಮಾರ್ಗದರ್ಶನ ದೊಂದಿಗೆ ನಡೆದ ಶಟಲ್ ಟೂರ್ನಮೆಂಟ್ ನಲ್ಲಿ ಕೊಡಗಿನ ಘಟಾನು ಘಟಿ ತಂಡಗಳನ್ನು ನೋಡಲು ಸಾಧ್ಯವಾಗಿದ್ದು ನೆಲ್ಲಿ ಹುದಿಕೇರಿ ಶಟಲ್ ಒಳಾಂಗಣ ಕ್ರಿಡಾಂಗಣದಲ್ಲಿ.
ವಿಶೇಷವಾಗಿ ಸಿದ್ದಾಪುರ ವಿರಾಜಪೇಟೆ, ಎಡಪಾಲ ದಿಂದ ಅತೀ ಹೆಚ್ಚಿನ ಕ್ರೀಡಾಪಟುಗಳು ಆಗಮಿಸಿದ್ದು ಮುಂದಿನ ಕ್ರೀಡಾಕೂಟದಲ್ಲಿ ಮತ್ತಷ್ಟು ತಂಡಗಳು ಭಾಗವಹಿಸುವ ನಿರೀಕ್ಷೆಯಲ್ಲಿ. ವಿಶೇಷವಾಗಿ ಕೊಡಗಿನ ಮೂಲೆ ಮೂಲೆಯಿಂದ ಆಗಮಿಸಿದ ಕ್ರೀಡಾಪಟುಗಳು,ಕ್ರೀಡಾಕೂಟ ಏಕ ದಿನಕ್ಕೆ ಸೀಮಿತವಾಗಿದ್ದು ಗಣ್ಯವ್ಯಕ್ತಿಗಳ ಉದ್ಘಾಟನೆಯೊಂದಿಗೆ ಶಿಸ್ತು ಬದ್ದ ವಾದ ಕ್ರೀಡಾಕೂಟವಾಗಿ ಜರುಗಿತ್ತು.
ಫೈನಲ್ ಪಂದ್ಯ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು.ಫೈನಲ್ ಪಂದ್ಯದಲ್ಲಿ ಆಯೋಜಕರ ತಂಡವಾದ ಫ್ರೀಡಂ ಬಾಯ್ಸ್ ಹುಂಡಿ ತಂಡದ ಅಣ್ಣ ತಮ್ಮಂದಿಯರಾದ ರಿಯಾಝ್ (ಯಹ್ಯಾ )ಮತ್ತು ಮುಸ್ತು ರವರ ಆಕರ್ಷಕ ಆಟದ ಮೊದಲ ಸುತ್ತಿನ ಮುಂದೆ ಮಂಕಾದ ಕುಶಾಲನಗರದ ರಫಿ ತಂಡ ಎರಡನೇ ಸುತ್ತಿನಲ್ಲಿ ಪರಾಕ್ರಮ ದೊಂದಿಗೆ ಬಲಿಷ್ಠ ಹುಂಡಿ ತಂಡವನ್ನು ಮಣಿಸುವುದರೊಂದಿಗೆ ಸಮ ಬಲದ ಹೋರಾಟದೊಂದಿಗೆ ಮೂರನೆ ಸುತ್ತಿಗೆ…
ಮೂರನೇ ಸುತ್ತು ಪ್ರಥಮ ಮತ್ತು ದ್ವಿತಿಯಾರ್ದದಲ್ಲಿ ಸಮಬಲದ ಹೋರಾಟ ದೊಂದಿಗೆ ಕೊನೆಯ ಕ್ಷಣದ ದವರೆಗೂ ಸಾಗಿದರೂ, ಗೆಲುವಿನ ಹಂತದಲ್ಲಿ ಎಡವಿದ ಹುಂಡಿ ಸೋತರೂ ಪ್ರೇಕ್ಷಕರ ಮನ ಮುಟ್ಟುವ ಶೈಲಿಯ ಆಟದೊಂದಿಗೆ ಕ್ರೀಡಾ ಪ್ರೇಮಿಗಳ ಮನಸ್ಸು ಗೆಲ್ಲುವಷ್ಟು ಯಶಸ್ಸನ್ನು ಕಂಡರು. ಫೈನಲ್ ತಲುಪಿದ ತಂಡಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದುಬಹುಮಾನವನ್ನು ವಿತರಿಸಿಲಾಯಿತು. ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಜಿಲ್ಲಾಪಂಚಾಯತ್ ಮೆಂಬರ್ ಲತೀಫ್ ಸುಂಟಿಕೊಪ್ಪ, ರಾಝಿಕ್ ವಿರಾಜಪೇಟೆ, ಸಿಯಾದ್ ಸಿದ್ದಾಪುರ,ಹಾರಿಸ್ ಸಿದ್ದಾಪುರ, ರಶೀದ್ ಕುಪ್ಪೋಡಂಡ ಎಡಪಾಲ,ಕೊಲುಮಂಡ ರಫೀಕ್(ಅದ್ಯಕ್ಷರು ಅಲ್ಪ ಸಂಖ್ಯಾತ ವಿರಾಜಪೇಟೆ ಘಟಕ),ಮುಜೀಬ್ ಉಸ್ತಾದ್ ಹೊಟೆಲ್ ಮೂರ್ನಾಡು,ಹನೀಫ್ ಬಿಳುಗುಂದ ಪಂಚಾಯತ್ ಸದಸ್ಯರು ಹಾಗೆಯೇ ಆಯೋಜಕರು. ಮೊಹ್ದೀನ್, ನಝೀರ್, ನಿಯಾಝ್ ಮತ್ತು ರಿಯಾಝ್ ಆಗಮಿಸಿದ ಎಲ್ಲಾ ತಂಡಗಳಿಗು ಪ್ರಶಸ್ತಿಗಳನ್ನು ವಿತರಿಸಲಾಯಿತು.
ಬಹಳ ಶಿಸ್ತಿನಿಂದ ಕೂಡಿದ ಈ ಕ್ರೀಡಾಕೂಟ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಆಗಮಿಸಿದ ಕ್ರೀಡಾಪಟುಗಳಿಗೂ,ಪ್ರೇಕ್ಷಕರಿಗೂ ಬೆಳಗಿನ ಚಹಾ ಮಧ್ಯಾಹ್ನದ ಊಟದ ವ್ಯವಸ್ಥೆ ಸಾಯಂಕಾಲ ಚಹಾ ವ್ಯವಸ್ಥೆ ಹಾಗು ರಾತ್ರಿ ಊಟ ವ್ಯವಸ್ಥೆ ಯೊಂದಿಗೆ ಅತ್ಯುತ್ತಮ ರೀತಿಯ ಕ್ರೀಡಾಕೂಟವನ್ನು ಆಯೋಜಿಸಿದ ಫ್ರೀಡಮ್ ಬಾಯ್ಸ್ ಹುಂಡಿ ತಂಡ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.