ಹನೂರು (www.vknews.in) : ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಕ್ಷಾಂತರ ಭಕ್ತಾದಿಗಳ ಬಹು ನಿರೀಕ್ಷಿತ ಬೆಳ್ಳಿ ರಥೋತ್ಸವದ ಸೇವೆ ಸೋಮವಾರದಿಂದ ಆರಂಭವಾಗಿದ್ದು ಭಕ್ತರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಕಣ್ತುಂಬಿಕೊಂಡಿದ್ದಾರೆ.
ಶ್ರೀ ಮಹದೇಶ್ವರ ಸ್ವಾಮಿಯ ಬೆಳ್ಳಿ ರಥೋತ್ಸವವಕ್ಕೆ ಇಂದು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳವರ ನೇತೃತ್ವದಲ್ಲಿ ಬೆಳ್ಳಿ ರಥೋತ್ಸವಕ್ಕೆ ಧಾರ್ಮಿಕ ವಿಧಿವಿಧಾನಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಭಕ್ತರ ಪೂಜೆ ಸೇವೆಗೆ ಅವಕಾಶ ಕಲ್ಪಿಸಲಾಯಿತು.
ಮಹದೇಶ್ವರ ಬೆಟ್ಟ ಮಾದಪ್ಪನ ಸನ್ನಿಧಿಯಲ್ಲಿ ಭಕ್ತರು ಕಾಣಿಕೆಯಾಗಿ ನೀಡಿರುವ 450 ಕೆಜಿ ಶುದ್ಧ ಬೆಳ್ಳಿಯಿಂದ ವಿಗ್ರಹಗಳು ರಥವನ್ನು ನಿರ್ಮಾಣ ಮಾಡಲಾಗಿದ್ದು. ಮಹದೇಶ್ವರ ಬೆಟ್ಟ ಪ್ರಾಧಿಕಾರ ಆಡಳಿತ ಮಂಡಳಿ ವತಿಯಿಂದ ರಥೋತ್ಸವ ಸೇವಾ ಕೈಂಕರ್ಯಗಳು ನಡೆಯಲಿದೆ.
ರಥದ ವಿಶೇಷತೆಗಳು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನ ಬೆಳ್ಳಿ ರಥವನ್ನು ನಿರ್ಮಾಣವನ್ನು ಮಾಡಲು ಕಳೆದ ಐದು ವರ್ಷಗಳ ಹಿಂದೆ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಮೊದಲಿಗೆ ತೆಗೆದ ಮರದ ರಥವನ್ನು 2020 ರಲ್ಲಿ ಸಿದ್ಧಪಡಿಸಲಾಯಿತು. ಬಳಿಕ ಅಂದಾಜು ಸುಮಾರು ಮೂರು ಕೋಟಿ ರೂ ವೆಚ್ಚದಲ್ಲಿ 450 ಕೆಜಿ ಬೆಳ್ಳಿ ಬಳಕೆ ಮಾಡಿ ಈ ರಥವನ್ನು ಸಿದ್ಧಪಡಿಸಲಾಗಿದೆ. ಈ ರಥವು 17 ಅಡಿ ಎತ್ತರವಿದ್ದು ಕಳೆದ ಮೂರು ವರ್ಷಗಳ ಕರಕುಶಲ ಕರ್ಮಿಗಳ ಅವಿತರ ಶ್ರಮದಿಂದ ಭಾನುವಾರ ಲೋಕಾರ್ಪಣೆ ಗೊಳಿಸಲಾಗಿದೆ.
ಈ ರಥಕ್ಕೆ ಅಗತ್ಯವಾಗಿದ್ದ ಬೆಳ್ಳಿಯನ್ನು ಭಕ್ತಾದಿಗಳಿಂದಲೇ ಮಾಡಿದ್ದು ಬೆಂಗಳೂರು ಮೂಲಕ ಲಕ್ಷ್ಮಿಪತಿ ಎಂಬ ಭಕ್ತಾದಿಗಳು 25 ಕೆಜಿ ಬೆಳೆಯನ್ನು ಡಿಸೆಂಬರ್ 2 ರಂದು ಶ್ರೀ ಕ್ಷೇತ್ರಕ್ಕೆ ಸಲ್ಲಿಸಿದರು. ಇನ್ನು ಈ ರಥಕ್ಕೆ ಮಂಜೂರಿ ಹಣವಾಗಿ 24 ಲಕ್ಷ ರು ವೆಚ್ಚ ತಗಲಿದ್ದು ಈ ಮಂಜೂರಿ ಹಣವನ್ನು ನೆರೆಯ ತಮಿಳುನಾಡು ರಾಜ್ಯದ ಮೋಹನ್ ರಾವ್ ಶೇಕಡ 50ರಷ್ಟು ಮತ್ತು ಬೆಂಗಳೂರಿನ ರಾಜಾಜಿನಗರದ ಹುಲಿಕುಂಟೆ ಶಿವಣ್ಣ ಮತ್ತು ಸಿದ್ದಮ್ಮ ದಂಪತಿ ಸುಪುತ್ರ ರಾದಾಯ ಸೋಮಶೇಖರ್ ಮತ್ತು ಸುಜಾತ ಸೋಮಶೇಖರ್ ಕುಟುಂಬಸ್ಥರು ಭರಿಸಿದ್ದಾರೆ.
ಪ್ರತಿದಿನ ಬೆಳಗ್ಗೆ 8 ಗಂಟೆಗೆ ಬೆಳ್ಳಿ ರಥೋತ್ಸವ ಸಮಯವನ್ನು ನಿಗದಿ ಮಾಡಲಾಗಿದ್ದು ಪ್ರಕೃತ ಭಕ್ತಾದಿಗಳು 2,001 ರೂ ಗಳನ್ನು ಪಾವತಿಸಬೇಕು ಎಂದು ಕಾರ್ಯದರ್ಶಿ ಕ್ಯಾತಾಯಿನಿದೇವಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ರಮೇಶ್, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿದೇವಿ ಹಾಗೂ ಹಿಂದಿನ ಕಾರ್ಯದರ್ಶಿಗಳಾಗಿದ್ದಂತಹ ಶ್ರೀ ಜಯವಿಭಸ್ವಾಮಿಯವರ ಇನ್ನೂ ಅನೇಕರ ಸಮ್ಮುಖದಲ್ಲಿ ಬೆಳ್ಳಿರಥಕ್ಕೆ ಚಾಲನೆ ನೀಡಲಾಯಿತು.
ವರದಿ :ವಿಜಯ್ ಕುಮಾರ್. ಕಾಂಚಳ್ಳಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.