(www.vknews.in) : ಸುಪ್ರಸಿದ್ಧ ಕನ್ನಡ ಹಾಗು ತುಳು ಚಲನಚಿತ್ರ ನಟ ಶ್ರೀ ಅರವಿಂದ ಬೋಲಾರ್ ಅವರನ್ನು ಕತಾರಿನ ಭಾರತೀಯ ದೂತಾವಸದಡಿಯಲ್ಲಿ ಸೇವೆಯಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಸನ್ಮಾನಿಸಲಾಯಿತು.
ಶ್ರೀ ಬೋಲಾರ್ ಅವರ ಕತಾರಿನಲ್ಲಿ ಅವರು ನಟಿಸಿರುವ “ಸರ್ಕಸ್” ಚಲನಚಿತ್ರದ ಬಿಡುಗಡೆಗೆ ಆಗಮಿಸಿದ್ದರು. ಶ್ರೀಯುತರು “ತುಳುನಾಡ ಮಾಣಿಕ್ಯ” ವೆಂದೆ ಚಿರಪರಿಚಿತರು. ಇವರು ೧೦೦ಕ್ಕೂ ಹೆಚ್ಚು ನಾಟಕಗಳು ಹಾಗು ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವರು.
ಐ.ಸಿ.ಸಿ ಅಧ್ಯಕ್ಷರಾದ ಶ್ರೀ ಏ.ಪಿ. ಮಣಿಕಂಠನ್ ಹಾಗು ಉಪಾಧ್ಯಕ್ಷರಾದ ಕನ್ನಡಿಗ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಹಾಗು ಭಾರತದ ಸಮುದಾ್ಯಾದ ಪ್ರತಿನಿಧಿಗಳಾದ ಶ್ರೀ ರವಿ ಶೆಟ್ಟಿ, ಕರ್ನಾಟಕ ಸಂಘ ಕತಾರಿನ ಮಾಜಿ ಉಪಾಧ್ಯಕ್ಷರು ಮತ್ತು ಶ್ರೀ ಅಲೆಕ್ಸ್ ದೈಗಿ ಉಪಸ್ತಿತರಿದ್ದರು.
ಕನ್ನಡ ಚಲನಚಿತ್ರ ನಟ ಹಾಗು ಕನ್ನಡದ ‘ಬಿಗ್ ಬಾಸ್’ ವಿಜೇತ, ಶ್ರೀ ರೂಪೇಶ್ ಶೆಟ್ಟಿ ಅವರನ್ನು ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಐ.ಸಿ.ಸಿ ಉಪಾಧ್ಯಕ್ಷರಾದ ಕನ್ನಡಿಗ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರ ಸುಹಸ್ತದಿಂದ ಸನ್ಮಾನಿಸಲಾಯಿತು. ಐ.ಸಿ.ಸಿ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮೋಹನ್ ಕುಮಾರ್ ಅವರು ಶ್ರೀ ರೂಪೇಶ್ ಶೆಟ್ಟಿ ಅವರ ಭೇಟಿಗೆ ಅಭಿನಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.