ಕಾಸರಗೋಡು (www.vknews.in) : ಜ್ವರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ. ಕಾಸರಗೋಡು ಚೆಮ್ಮನಾಡಿನ ಅಳಕೆಂ ಪಾಟಿಕಲ್ನ ಶ್ರೀಜಿತ್ ಅವರ ಪತ್ನಿ ಅಶ್ವತಿ (28) ಮೃತರು. ಅಶ್ವತಿ ಟಿಟಿಸಿ ವಿದ್ಯಾರ್ಥಿನಿ. ಗುರುವಾರ ಬೆಳಗ್ಗೆ ಸಾವು ದೃಢಪಟ್ಟಿದೆ.
ಸೋಮವಾರದಿಂದ ಅಶ್ವತಿ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಅದೇ ದಿನ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಜ್ವರ ಹೆಚ್ಚಾಗಿದ್ದು, ತಜ್ಞ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾಸರಗೋಡಿನ ವಿವಿಧೆಡೆ ಜ್ವರದ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ಸದ್ಯ ಒಂಬತ್ತು ಶಂಕಿತ ಡೆಂಗೆ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 619 ಮಂದಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಒಬ್ಬರಿಗೆ ರೇಬೀಸ್ ಇರುವುದು ಪತ್ತೆಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.