ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ವಿಮಾನ ಪ್ರಯಾಣಿಕರ ಹಕ್ಕನ್ನು ಸಂರಕ್ಷಿಸುವ ಹೊಸ ಕಾನೂನು ಜಾರಿಗೆ ಬಂದಿದ್ದು, ಈ ನಿಯಮಗಳು ವಿದೇಶಿ ವಿಮಾನ ಕಂಪೆನಿಗಳಿಗೂ ಅನ್ವಯವಾಗಲಿದೆ. ವಿಮಾನ ಸೇವೆಯಲ್ಲಿ ವಿಳಂಬ, ನಿಗದಿತ ವಿಮಾನಗಳ ರದ್ದತಿ, ಪ್ರಯಾಣಿಕರ ಲಗೇಜ್ ಮಿಸ್ಸಿಂಗ್, ಲಗೇಜ್ ವಿಲೆವಾರಿ ವಿಳಂಬ ಮೊದಲಾದ ಸಂದರ್ಭಗಳಲ್ಲಿ ವಿಮಾನ ಕಂಪನಿಗಳು ಸದ್ರಿ ಪ್ರಯಾಣಿಕರಿಗೆ ಪರಿಹಾರವನ್ನು ನೀಡಬೇಕಾಗುತ್ತದೆ. ನಿಗದಿತ ವಿಮಾನವು ತನ್ನ ಪ್ರಯಾಣವನ್ನು ರದ್ದುಪಡಿಸಿದರೆ, ವಿಮಾನ ಕಂಪನಿಯು ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರತೀ ಪ್ರಯಾಣಿಕನಿಗೂ ಟಿಕೆಟ್ ದರದ 125% ರಿಂದ 200% ವರೆಗೆ ಪರಿಹಾರವನ್ನು ಪ್ರಯಾಣಿಕರಿಗೆ ನೀಡಬೇಕಾಗುತ್ತದೆ. ಒಂದು ವೇಳೆ ಪ್ರಯಾಣ ಸಮಯದಲ್ಲಿ ಯಾವುದೇ ಪ್ರಯಾಣಿಕನ ಲಗೇಜ್ ಕಳೆದು ಹೋದರೆ ಆ ಪ್ರಯಾಣಿಕನಿಗೆ ವಿಮಾನ ಕಂಪನಿಯು 6568 ರಿಯಾಲ್ ನಷ್ಟು ಪರಿಹಾರವನ್ನು ನೀಡಬೇಕಾಗುತ್ತದೆ. ಅದೇ ರೀತಿ ಲಗೇಜ್ ವಿಲೆವಾರಿ ವಿಳಂಬವಾದಲ್ಲೂ ಕೂಡ ವಿಮಾನ ಕಂಪನಿಗಳು ಪ್ರಯಾಣಿಕರಿಗೆ ಪಕಿಹಾರವನ್ನು ನೀಡಬೇಕಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.