ಮಂಗಳೂರು (www.vknews.in) : ನಗರದ ಬೆಂದೂರ್ ವೆಲ್ ಸಮೀಪದ ಹೊಟೇಲ್ ರೂಂನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ಬೆಂಕಿಯಿಂದ ಸುಟ್ಟು ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಮೃತರನ್ನು ಯಶ್ ರಾಜ್ ಸುವರ್ಣ (43) ಎಂದು ಗುರುತಿಸಲಾಗಿದೆ.
ಯಶ್ ರಾಜ್ ನ.15ರಿಂದ ಈ ಹೊಟೇಲ್ ರೂಂನಲ್ಲಿ ವಾಸವಿದ್ದರು. ನಿನ್ನೆ ಊಟವಾದ ಬಳಿಕ ತಡರಾತ್ರಿ 12 ಗಂಟೆಯ ಸುಮಾರಿಗೆ ಅವರಿದ್ದ ರೂಂನ ಬಾಗಿಲೆಡೆಯಿಂದ ಹೊಗೆ ಹೊರ ಬರುತ್ತಿರುವುದನ್ನು ಲಾಡ್ಜ್ ಸಿಬ್ಬಂದಿ ಗಮನಿಸಿದ್ದಾರೆ. ಮಾಹಿತಿ ಅರಿತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಒಳಗಿನಿಂದ ಲಾಕ್ ಮಾಡಲಾಗಿದ್ದ ಬಾಗಿಲನ್ನು ತೆರೆದಿದ್ದಾರೆ. ಈ ವೇಳೆ ಯಶ್ ರಾಜ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ರೂಂನಲ್ಲಿ ಯಶ್ ರಾಜ್ ಒಬ್ಬಂಟಿಯಾಗಿದ್ದರು. ಮೃತ ಯಶ್ ರಾಜ್ ತಾಯಿ ಹಾಗೂ ಪತ್ನಿಯನ್ನು ಹೊಂದಿದ್ದು, ಬಿಕರ್ನಕಟ್ಟೆಯ ನಾರ್ತನ್ ಅಪಾರ್ಟ್ಮೆಂಟ್ ನ ನಿವಾಸಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.