(www.vknews.in) : ಹುಟ್ಟುಹಬ್ಬ ಆಚರಿಸಲು ಕರೆದುಕೊಂಡು ಹೋಗಲಿಲ್ಲ ಎಂಬ ಜಗಳಕ್ಕೆ ಪತಿಯನ್ನು ಒಂದೇ ಏಟಿಗೆ ಪತ್ನಿ ಕೊಂದಿದ್ದಾಳೆ. ಪುಣೆಯಲ್ಲಿ ಘಟನೆ ನಡೆದಿದೆ. ಮೃತರನ್ನು 36 ವರ್ಷದ ನಿಖಿಲ್ ಖನ್ನಾ ಎಂದು ಗುರುತಿಸಲಾಗಿದ್ದು, ಇವರು ಪುಣೆಯ ವನವಡಿ ಪ್ರದೇಶದ ರೆಸಿಡೆನ್ಶಿಯಲ್ ಸೊಸೈಟಿಯ ನಿವಾಸಿಯಾಗಿದ್ದಾರೆ. ನಿಖಿಲ್ ನಿರ್ಮಾಣ ಕ್ಷೇತ್ರದ ಉದ್ಯಮಿ. ಕೊಲೆಗೆ ಸಂಬಂಧಿಸಿದಂತೆ ಪತ್ನಿ ರೇಣುಕಾ (38) ಅವರನ್ನು ಬಂಧಿಸಲಾಗಿದೆ. ಅವರು ಪ್ರೀತಿಸಿ ಮದುವೆಯಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ತಮ್ಮ ಜನ್ಮದಿನವನ್ನು ಆಚರಿಸಲು ದುಬೈಗೆ ಕರೆದೊಯ್ಯದ ಕಾರಣ ಇಬ್ಬರೂ ಜಗಳವಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ವನವಡಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೇಣುಕಾ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂದು ದುಬಾರಿ ಉಡುಗೊರೆ ನೀಡಲು ನಿಖಿಲ್ ಸಿದ್ಧರಿರಲಿಲ್ಲ. ತಮ್ಮ ಸಂಬಂಧಿಕರ ಹುಟ್ಟುಹಬ್ಬವನ್ನು ಆಚರಿಸಲು ದೆಹಲಿಗೆ ಹೋಗಲು ಬಿಡಲಿಲ್ಲ ಎಂದು ರೇಣುಕಾ ಮತ್ತು ನಿಖಿಲ್ ಜಗಳವಾಡುತ್ತಿದ್ದರು.
ಜಗಳದ ವೇಳೆ ರೇಣುಕಾ ನಿಖಿಲ್ ಮುಖಕ್ಕೆ ಹೊಡೆದಿದ್ದಾಳೆ. ಹೊಡೆದ ರಭಸಕ್ಕೆ ನಿಖಿಲ್ನ ಮೂಗು ಮುರಿದಿದ್ದು, ಹಲ್ಲು ಕೂಡ ಮುರಿದಿದೆ. ತೀವ್ರ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾನೆ. ಪೊಲೀಸರು ರೇಣುಕಾ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ರೇಣುಕಾಳನ್ನು ಬಂಧಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.