(www.vknews.in) : ಜಗತ್ತಿನ ಜನ ಸಂಖ್ಯೆಯಲ್ಲಿ ಅತಿಸಣ್ಣ ಪಾಲಿನ ಯಹೂದಿಗಳು ಶತಮಾನಗಳ ಕಾಲ ಫ್ಯಾಲಸ್ತೀನ್ ನಿಂದ ಪಲಾಯನ ಗೈದು ವಿಶ್ವದ ವಿವಿದೆಡೆಗಳಲ್ಲಿ ಚದುರಿ ಬದುಕು ಸಾಗಿಸುತ್ತಿದ್ದರು. ಯುರೋಪಿನ ದೇಶಗಳಲ್ಲಿ ಪ್ರಭಲ ಸ್ವಾಧೀನ ಶಕ್ತಿಗಳಾದ್ದರು ಅವರು. ಯೂರೋಪಿನ ಪ್ರಬಲ ಶಕ್ತಿಗಳಾದ ಬ್ರಿಟನ್, ಫ್ರಾನ್ಸ್ ಮತ್ತು ಪೋರ್ಚುಗೀಸರು ಇಡೀ ವಿಶ್ವವನ್ನೇ ತಮ್ಮ ವಶಾಹತನ್ನಾಗಿಸಲು ಓಡಾಡುತ್ತಲಿದ್ದಾಗ ಅವರಿಗೆ ಬೆಂಬಲವಾಗಿ ಕುಬೇರರಾದ ಯಹೂದಿಗಳಿದ್ದರು. ಮದ್ದು ಗುಂಡು ತಯಾರಿಕೆ ಮತ್ತು ಯುದ್ದಾಯುಧಗಳ ನಿರ್ಮಾಣವು ಸಂಪೂರ್ಣವಾಗಿ ಯಹೂದಿಯರ ನಿಯಂತ್ರಣದಲ್ಲಿತ್ತು.
A.D 1744 ರಲ್ಲಿ ಜರ್ಮನಿಯ ಯಹೂದಿ ವಂಶಸ್ಥಾನದ ಮೇಯರ್ ಆಮ್ ಶೈಲ್ಡ್ ರೋಥ್ ಶೈಲ್ಡ್ (mayor amsheld roth schild) ಎಂಬವನು ಆದುನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಾನೆ. ಬಡ್ಡಿಯಾದಾರಿತ ಆದುನಿಕ ಬ್ಯಾಂಕಿಂಗ್ ಉದ್ಯಮದ ಮೂಲಕ ಹಣ ಚಾಚಿಕೊಂಡು ಕುಬೇರನಾದ ರೋಥ್ ಶೈಲ್ಡ್ ತನ್ನ ಐದು ಮಂದಿ ಮಕ್ಕಳನ್ನು ಜರ್ಮನಿ, ಇಟಲಿ, ಬ್ರಿಟನ್, ಫ್ರಾನ್ಸ್, ಅಸ್ಟ್ರಿಯ ದೇಶಗಳಿಗೆ ಬ್ಯಾಂಕುಗಳ ಸ್ಥಾಪನೆಗಾಗಿ ಕಳುಹಿಸುತ್ತಾನೆ. ಇಂದಿಗೂ ಜಗತ್ತಿನ ಆರ್ಥಿಕ ವ್ಯವಹಾರಗಳೆಲ್ಲದರ ಪ್ರಮುಖ ಚಾಲಕ ಶಕ್ತಿ ರೋಥ್ ಶೈಲ್ಡ್ ಕುಟುಂಬವೇ ಆಗಿದೆ. ವಿಶ್ವದ ಹೆಚ್ಚಿನೆಲ್ಲ ಬ್ಯಾಂಕುಗಳೂ ಈ ಕುಟುಂಬದ ನಿಯಂತ್ರಣದಲ್ಲೇ ಇದೆ. ಯಹೂದಿ ಧರ್ಮದವರಾದರೂ ಒಂದು ರೀತಿಯ ಅಧಾರ್ಮಿಕವಾದಿಗಳೂ, ನಿರೇಶ್ವರವಾದಿಗಳೂ ಆದ ಇವರಂತಹ ಕುಬೇರರ ಗುಂಪು ಬವೇರಿಯನ್ ವಿಶ್ವಾಸಿಗಳೆಂದು (Baverian Believers) ಕರೆಸಿ ಕೊಳ್ಳುತ್ತಿದ್ದರು.
ಕಾಲಾನಂತರದಲ್ಲಿ ಅವರು ಝಯನಿಸ್ಟ್ ಎಂಬ ಹೆಸರಿನ ಪಂಥವೊಂದನ್ನು ಕಟ್ಟಿದರು. A.D 1896 ರಲ್ಲಿ ಥಿಯಡೋರ್ ಹರ್ಡ್ಸೆಲ್ ಮತ್ತು ಚೈನ್ ವೈಸ್ಮೆನ್ ಎಂಬಿಬ್ಬರು ಸೇರಿ ಝಯನಿಸ್ಟ್ ಸಂಘಟನೆ ಸ್ಥಾಪಿಸಿದರು. ನಿಜವಾದ ಯಹೂದಿ ಧರ್ಮದ ಅನುಯಾಯಿಗಳಾಗಿರದ ಝಯನಿಸ್ಟರು ತಮ್ಮ ಆಶಯ ಪ್ರಚಾರಕ್ಕಾಗಿ ಯಹೂದಿ ಧರ್ಮವನ್ನು ಬಳಸಿಕೊಂಡರು. (ಉದಾಹರಣೆಗೆ ಐ.ಎಸ್ ಸಂಘಟನೆಯವರು ಇಸ್ಲಾಂ ಧರ್ಮವನ್ನೂ, ಕಲಿಸ್ತಾನ್ ವಾದಿಗಳು ಸಿಕ್ಕ್ ಧರ್ಮವನ್ನೂ, ಕ್ರಿಸ್ತಿಯನ್ ಝಿಯೂನಿಸ್ಟರು ಕ್ರೈಸ್ತ ಧರ್ಮವನ್ನೊ ಭಾರತದ ಸಂಘ ಪರಿವಾರದವರು ಹಿಂದೂ ಧರ್ಮವನ್ನೂ ಉಪಯೋಗಿಸಿಕೊಂಡಂತೆ.) ಥಿಯೊಡೊರ್ ಹರ್ಡ್ ಶೆಲ್ಡ್ ಮತ್ತು ಚೈನ್ ವೈಸ್ಮೆನ್ ಸೇರಿ Juwise state -(ಯಹೂದಿ ರಾಷ್ಟ್ರ) ಎಂಬ ಹೆಸರಿನ ಪುಸ್ತಕವೊಂದನ್ನು ಹೊರತಂದರು. ಆದರೂ ಯಹೂದಿಯರೆಡೆಯಲ್ಲಿ ಅದಕ್ಕೇನೂ ಮನ್ನಣೆ ಸಿಗಲಿಲ್ಲ. ಪಟ್ಟು ಬಿಡದ ಅವರು ಭಾರೀ ಹಣ ಸುರಿದು ಜಗತ್ತಿನಾತ್ಯಂತ ವಿರುವ ಯಹೂದಿಯರನ್ನು ಫ್ಯಾಲಸ್ತೀನಿಗೆ ಹೊಲಸೆ ಹೋಗುವಂತೆ ಪ್ರೋತ್ಸಾಹಿಸಿದರು. ಅಂದು ಫ್ಯಾಲಸ್ತೀನಿನ ನಿವಾಸಾಗಳು ಆಡು- ಕುರಿಗಳನ್ನೂ, ಒಂಟೆಗಳನ್ನೂ ಮೇಯಿಸುತ್ತ ಒಂದೆಡೆಯಿಂದ ಇನ್ನೊಂದೆಡೆಗೆ ಅಲೆಯುತ್ತ ಜೀವನ ಸಾಗಿಸುವ ಅಲೆಮಾರಿ (Numedes)ಜನಾಂಗವಾಗಿತ್ತು.
ಆ ಪ್ರದೇಶಕ್ಕೆ ಹಣದ ಚೀಲದೊಂದಿಗೆ ಬಂದ ಯಹೂದಿಯರು ಫ್ಯಾಲಸ್ತೀನಿನ ನಿವಾಸಿಗಳಿಗೆ ಹಣ ಚೆಲ್ಲಿ ಆ ಪ್ರದೇಶದಲ್ಲಿ ತಮ್ಮ ವಶಾಹತು (settlements) ಗಳನ್ನು ಸ್ಥಾಪಿಸಿಕೊಂಡರು. ಅಂದಿನ ದಿನಗಳಲ್ಲಿ ಉಸ್ಮಾನಿಯ ಖಿಲಾಫತ್ ದುರ್ಬಲವಾಗಿ ಆರ್ಥಿಕ ಮುಗ್ಗಟ್ಟಿಲ್ಲಿದ್ದು, ಯುರೋಪಿನ ರೋಗಿ ಎಂದು ಕರೆಸಿಕೊಂಡಿತ್ತು. ಉಸ್ಮಾನಿಯ ಖಲೀಫರ ಆರ್ಥಿಕ ದುಸ್ತಿತಿಯನ್ನರಿತ ಝಯೆನಿಸ್ಟರು 1897 ರಲ್ಲಿ ಉಸ್ಮಾನಿಯ ಖಲೀಫರನ್ನು ಭೇಟಿಯಾಗಿ ಫ್ಯಾಲಸ್ತೀನಿನ ಪ್ರದೇಶವನ್ನು ತಮ್ಮ ವಶಕ್ಕೆ ನೀಡುವುದಾದರೆ ಖಲೀಫರವರಿಗೆ 150 ಕೋಟಿ ಫೌಂಡ್ ಹಣವನ್ನು ನೀಡುವುದಾಗಿ ವಾಗ್ದಾನ ಮಾಡಿದರು. ಆದರೇ ಖಲೀಫ ಅಬ್ದುಲ್ ಹಮೀದ್ ರವರು ಫ್ಯಾಲಸ್ತೀನ್ ಪ್ರದೇಶವು ತನ್ನ ಖಾಸಗೀ ಸ್ವತ್ತಲ್ಲವೆಂದು ಹೇಳಿ ಆ ವಾಗ್ದಾನವನ್ನು ತಿರಸ್ಕರಿಸಿದರು.
— ಸಲಾಹುದ್ದೀನ್ ಅಯ್ಯೂಬಿ- ಕಡಬ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.