(www.vknews. in) ; ರೋಟರಿ ಜಿಲ್ಲೆ 3181 ರ ಸಾರ್ವಜನಿಕ ಚಿತ್ರಣ ಉಪಕ್ರಮ, ಮತದಾನ ಸಾಕ್ಷರತೆ ಮತ್ತು ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವ ರ್ಯಾಲಿಯನ್ನು ರೊ ಡಿಜಿಇ ವಿಕ್ರಮ್ ದತ್ತಾ ಉದ್ಘಾಟಿಸಿದರು.ಮತದಾನ ಜಾಗೃತಿ ಕರಪತ್ರಗಳನ್ನು ಪಿಡಿಜಿ ರೊ ರಂಗನಾಥ ಭಟ್ ಬಿಡುಗಡೆಗೊಳಿಸಿದರು, ಸುರಕ್ಷಿತ ಚಾಲನಾ ಅಭ್ಯಾಸಗಳ ಕರಪತ್ರಗಳನ್ನು ರೊ ಐಪಿಡಿಜಿ ಪ್ರಕಾಶ್ ಕಾರಂತ್ ಬಿಡುಗಡೆ ಮಾಡಿದರು.
ರಸ್ತೆ ಸುರಕ್ಷತೆಯ ಸ್ಟಿಕ್ಕರ್ಗಳನ್ನು ಸಹ ತರಬೇತುದಾರ ರೊ ಶೇಖರ್ ಶೆಟ್ಟಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪುತ್ತೂರು ತಾ. ಪಂ.ಇಒ ಹನುಮ ರೆಡ್ದಿ ಬೀದಿನಾಟಕ ಉದ್ಘಾಟಿಸಿದರು. ರೊ ಮೌನೇಶ್ ವಿಶ್ವಕರ್ಮ ತಂಡದ ಬೀದಿ ನಾಟಕದ ನೇತ್ರತ್ವ ವಹಿಸಿದರು.
ಕಾರ್ಯಕ್ರಮಕ್ಕೆ ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ AG’S, ZL’S, ಅಧ್ಯಕ್ಷರುಗಳು ಕಾರ್ಯದರ್ಶಿಗಳು ಮತ್ತು ಇನ್ನರ್ವೀಲ್, ರೋಟ್ರಾಕ್ಟ್, ಇಂಟರಾಕ್ಟ್, ಡಿಸ್ಟಿಕ್ ಪಬ್ಲಿಕ್ ಇವೆ೦ಟ್ ಚೈರ್ಮೇನ್ ರೊ ವಿಶ್ವಾಸ್ ಶೆಣೈ, ವಿವೇಕಾನಂದ ತಾಂತ್ರಿಕ ವಿದ್ಯಾಲಯದ ಪ್ರಾ೦ಶುಪಾಲರಾದ ಮಹೇಶ್ ಪ್ರಸನ್ನ, ತಾ. ಪಂ.ಪುತ್ತೂರು ಮಾಹಿತಿ ಶಿಕ್ಷಣ ಸ೦ವಹನ ಸ೦ಯೋಜಕ ಭರತ್ ರಾಜ್ ಕೆ,ವಿವೇಕಾನಂದ ತಾಂತ್ರಿಕ ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ತಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.