(www.vknews. in) ; ಮಾನವೀಯತೆ ಮೆರೆದ ವೀಣಾ ರಾಮಚಂದ್ರ ಮತ್ತು ಸತೀಶ್ ಇವರಿಗೆ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರು ಶಿವಕುಮಾರ್ ಹೂಟಗಳ್ಳಿ ಮತ್ತು ಟ್ರಸ್ಟಿಗಳಾದ ಏಳನೇ ಹೊಸಕೋಟೆಯ ಸೌಮ್ಯಶ್ರೀ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ
ಏಳನೇ ಹೊಸಕೋಟೆ ಕೊಡಗಿನ ಕಂಬಿಬಾಣೆಯ ವೀಣಾ ರಾಮಚಂದ್ರ ಮತ್ತು ಸತೀಶ್ ಅವರು ಬಿದ್ದು ಸಿಕ್ಕಿದ ಹಣವನ್ನು ಸುಂಟ್ಟಿಕೊಪ್ಪ ಪೋಲಿಸ್ ಠಾಣಾಧಿಕಾರಿ ಎಂ.ಆರ್.ಶ್ರೀದರ್ ಅವರ ಮುಖಾಂತರ 16 ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ ಗದ್ದೆಹಳ್ಳ ನಿವಾಸಿ ಯಂಕನ ಕೌಶಿಕ್ ರವರಿಗೆ ಹಿಂದಿರುಗಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಯಾವುದೇ ಹಣದ ಮೇಲೆ ಆಸೆಗಳನ್ನು ಇಟ್ಟು ಕೊಳ್ಳದೆ ಹಣ ಕಳೆದು ಕೊಂಡವರಿಗೆ ಪೋಲಿಸ್ ಠಾಣಾಧಿಕಾರಿ ಮುಖಾಂತರ ಹಿಂದಿರುಗಿಸಿ ಮಾನವೀಯತೆ ಮೆರೆದ ವೀಣಾ ರಾಮಚಂದ್ರ ಮತ್ತು ಸತೀಶ್ ಅವರನ್ನು ಬೇಟಿ ಮಾಡಿ ಸನ್ಮಾನಿಸಲಾಗುವುದು ಎಂದು ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರು ಶಿವಕುಮಾರ್ ಹೂಟಗಳ್ಳಿ ಮತ್ತು ಟ್ರಸ್ಟಿಗಳಾದ ಸೌಮ್ಯಶ್ರೀ ಅವರು ವಿಶ್ವ ಕನ್ನಡಿಗ ನ್ಯೂಸ್ ಗೆ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.