(wwww.vknews. in) ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡ್ನೂರು ಮರ್ಕಂಜ ಈ ಶಾಲೆಯ ಆವರಣದೊಳಗೆ ಮಕ್ಕಳ ಅಕ್ಷರ ದಾಸೋಹಕ್ಕೆ ಸಂಬಂದಿಸಿದ ತೊಗರಿ ಬೇಳೆಯನ್ನು ಬಿಸಾಡಿದ್ದು ಇದರ ಬಗ್ಗೆ ಸಾರ್ವಜನಿಕರು ದೂರನ್ನು ಕೊಟ್ಟರೂ ಯಾವುದೇ ಕ್ರಮ ಕೈ ಗೊಳ್ಳದೆ ಇರುವುದು ಸಾರ್ವಜನಿಕ ವಲಯದಲ್ಲಿ ಸಂಶಯವನ್ನು ಎಡೆ ಮಾಡಿಕೊಟ್ಟಿದೆ.
ಆಹಾರದ ಹಕ್ಕನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನಿನ ಅಡಿಯಲ್ಲಿ ರಕ್ಷಿಸಲಾಗಿದೆ . [5] [24] UN ನ ಮಾನವ ಹಕ್ಕುಗಳ ವ್ಯವಸ್ಥೆಯಲ್ಲಿ, ಇದು ಮೂಲಭೂತ ಮಾನವ ಹಕ್ಕು ಎಂದು ಸ್ಥಿರವಾಗಿ ಪ್ರಸ್ತುತಪಡಿಸಲಾಗಿರುವ ಕಾರಣ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಶಾಲೆಗಳಲ್ಲಿ ನೀಡಲಾಗುತ್ತದೆ
ಆದರೆ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಕೊಡುವ ಉದ್ದೇಶದಿಂದ ಸರಕಾರವು ಶಾಲೆಗೆ ಕಳುಹಿಸಿದ 50 ಕೆಜಿ ಗಿಂತಲೂ ಹೆಚ್ಚಿನ ತೊಗರಿಬೇಳೆಯು ಮಕ್ಕಳಿಗಾಗಿ ಉಪಯೋಗ ಮಾಡದೆ ತೆರೆದ ಸ್ಥಳದ ಪೊದೆಯಲ್ಲಿ ವಿಲೇವಾರಿ ಮಾಡಲು ಕಾರಣವೇನು?, ಇಷ್ಟು ತೊಗರಿಬೇಳೆ ಆ ಶಾಲೆಯಲ್ಲಿ ಉಳಿಕೆ ಆಗಲು ಕಾರಣವೇನು? ಮಕ್ಕಳಿಗೆ ಕೊಡದೆ ಉಳಿಸಿ ಕೊಳ್ಳುವಷ್ಟು ಹೆಚ್ಚಿಗೆ ತೊಗರಿಬೇಳೆ ಆ ಶಾಲೆಯಲ್ಲಿ ಇರುವ ಸಾಧ್ಯತೆಯ ಬಗ್ಗೆ ಕೂಡ ಪೋಷಕರು ಹಾಗೂ ಸಾರ್ವಜನಿಕರು ಸಂಶಯವನ್ನು ವ್ಯಕ್ತ ಪಡಿಸಿದ್ದು, ತನಿಖೆಗೆ ಬಂದ ಅಧಿಕಾರಿಯು ಮಕ್ಕಳ ಆಹಾರದ ಹಕ್ಕಿನ ಉಲ್ಲಂಘನೆ ಹಾಗೂ ಕರ್ತವ್ಯಲೋಪದ ಬಗ್ಗೆ ಕ್ರಮವನ್ನು ಕೈ ಗೊಳ್ಳದೆ ಕೇವಲ ಮುಚ್ಚಳಿಕೆ ಬರೆಸಿ ಕೊಂಡು ಹೋಗಿರುವುದು ಅವರೂ ಕೂಡ ಈ ಅಕ್ರಮದಲ್ಲಿ ಭಾಗಿ ಆಗಿದ್ದಾರೆಯೇ ಎನ್ನುವ ಸಂಶಯಕ್ಕೆ ಕಾರಣವಾಗಿದೆ.
ಆದರಿಂದ ಇಲಾಖೆಯು ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮವನ್ನು ಜರಗಿಸುವುದು ಹಾಗೂ ಈ ಅಕ್ರಮದಲ್ಲಿ ಶಾಮೀಲಾದವರು ಹಾಗೂ ಮಕ್ಕಳ ಪೌಷ್ಟಿಕ ಆಹಾರಕ್ಕೆ ಸಂಬಂದಿಸಿದ ತೊಗರಿ ಬೇಳೆಯನ್ನು ಬಿಸಾಡಿದವರ ವಿರುದ್ಧ ಇಲಾಖಾ ನಡವಳಿಯನ್ನು ಕೈ ಗೊಂಡು ಅವರ ಸೇವಾ ಪುಸ್ತಕದಲ್ಲಿ ದಾಖಲಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇಲ್ಲದೆ ಇದ್ದರೆ ಇದರ ಮಕ್ಕಳ ಹಕ್ಕುಗಳ ಅಯೋಗಕ್ಕೂ ದೂರು ಕೊಡುವ ಬಗ್ಗೆ ಚಿಂತನೆಯನ್ನು ನಡೆಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.