(www.vknews. in) ನೈರ್ಮಲ್ಯ ಸಮಿತಿಯವರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಾಕಿರುವುದು ಯಾಕೆ?
ಡೆಂಗ್ಯೂ ರೋಗಕ್ಕೆ ಪ್ರಖ್ಯಾತಿ ಇರುವಂತಹ ಉಪ್ಪಿನಂಗಡಿಯಲ್ಲಿ ಚರಂಡಿ ಅವ್ಯವಸ್ತೆಯು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು ಪಂಚಾಯತ್ ಆಡಳಿತ ತಮ್ಮ ಕರ್ತವ್ಯ ಮರೆತು ಇನ್ನೊಬ್ಬರ ಹೆಗಲಿಗೆ ವರ್ಗಾಯಿಸುವುದರಲ್ಲಿ ತಲ್ಲೀನ ವಾಗಿದೆ.
ಎರಡು ವರ್ಷದಿಂದ ಮಾದರಿ ಶಾಲೆಯ ಮಕ್ಕಳು ಹಾಗೂ ಅಂಗಣವಾಡಿಯ ಮಕ್ಕಳು ಈ ಕೊಳಚೆಯಿಂದ ತಮ್ಮನ್ನು ರಕ್ಷಿಸಲು ಹಲವು ಮನವಿಯನ್ನು ಪಂಚಾಯತ್ ಗೆ, ಜಿಲ್ಲಾ ಪಂಚಾಯತ್ ಗೆ ಕೊಟ್ಟರೂ ಯಾವುದೇ ಸಮಸ್ಯೆ ಪರಿಹಾರ ಆಗದ ಕಾರಣ ಮಕ್ಕಳ ಅಯೋಗಕ್ಕೂ ದೂರನ್ನು ಸಲ್ಲಿಸಲಾಗಿತ್ತು, ಆದರೆ ಆಯೋಗದಿಂದ ಬಂದಂತಹ ಆದೇಶಕ್ಕೆ ಹಾಗೂ ಜಿಲ್ಲಾ ಪಂಚಾಯತ್ ಆದೇಶಕ್ಕೂ ಕವಡೆ ಕಾಸಿನ ಬೆಲೆಯನ್ನು ಕೊಡದಿರುವ ಪಂಚಾಯತ್ ಆಡಳಿತವು ಎರಡು ವರ್ಷದಿಂದಲೂ ತೆರೆದ ಮಳೆನೀರಿನ ಚರಂಡಿಗೆ ಕೊಳಚೆ ನೀರನ್ನು ಬಿಡುವ ಬಗ್ಗೆ ಮೌನವಾಗಿರುವುದು ಜನ ಸಾಮಾನ್ಯರಲ್ಲಿ ಸಂಶಯವನ್ನು ಉಂಟು ಮಾಡುತ್ತಿದೆ.
ಎರಡು ದಿನ ಮೊದಲೇ ಮಕ್ಕಳು ಕೈ ತೊಳೆಯುವಾಗ ಬಂದಂತಹ ಊಟದ ಅಗಳು ಗಳನ್ನೇ ದೊಡ್ಡ ರಾದ್ಧಾಂತ ಮಾಡಿದವರು, ಹಾಗೂ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕಾದವವರು ,ಮಕ್ಕಳ ಹಕ್ಕುಗಳ ಆಯೋಗ ಹಾಗೂ ಜಿಲ್ಲಾ ಪಂಚಾಯತ್ ಆದೇಶಗಳನ್ನು ಗಾಳಿಗೆ ತೂರಿ ಪಕ್ಕದಲ್ಲಿಯೇ ಇರುವಂತಹ ಈ ಕೊಳಚೆ ನೀರಿನ ಸಂಗ್ರಹವನ್ನು ಕಣ್ಣಿಗೆ ಕಾಣದ ರೀತಿಯಲ್ಲಿ ವ್ಯವಹರಿಸಿರುವುದು ಜನ ಸಾಮಾನ್ಯರಿಗೆ ನ್ಯಾಯ ಮರೀಚಿಕೆ ಆಗುತ್ತಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.