ಉಪ್ಪಿನಂಗಡಿ (www.vknews. in) : ಸಮಸ್ತ ಕೇರಳ ಸುನ್ನೀ ಜಂ-ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರೂ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಮೊಹಲ್ಲಾದ ಗೌರವಾನ್ವಿತ ಖಾಝಿಗಳು ನಮ್ಮೆಲ್ಲರ ಆಧ್ಯಾತ್ಮಿಕ ನೇತಾರರಾಗಿದ್ದ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರು ಇಂದು ಮುಂಜಾನೆ ವಫಾತಾಗಿರುತ್ತಾರೆ. ಅವರ ಅಗಲುವಿಕೆಯೂ ರಾಜ್ಯದ ಸುನ್ನೀ ಸಮೂಹಕ್ಕೆ ತುಂಬಲಾರದ ನಷ್ಟವಾಗಿದ್ದು. ಅಲ್ಲಾಹು ಸಯ್ಯಿದರ ಸ್ಥಾನವನ್ನು ಉನ್ನತಿಗೇರಿಸಲಿ ಜಿಲ್ಲೆಯ ಎಲ್ಲಾ ಮದರಸಗಳಲ್ಲಿ ತಹ್ಲೀಲ್,ಕುರ್ಆನ್ ಪಾರಾಯಣ ಪ್ರಾರ್ಥನೆ ನಡೆಸುವಂತೆ ಕೋರಲಾಗಿದೆ.
ಎಂದು SJM ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಬೇಂಗಿಲ, ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಸಖಾಫಿ ಕಬಕ ಹಾಗೂ ಕೋಶಾಧಿಕಾರಿ ಸಿರಾಜುದ್ದೀನ್ ಸಖಾಫಿ ಮಠ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಸಯ್ಯಿದರ ಅಗಲುವಿಕೆ ಗೆ SJM ದ.ಕ ಈಸ್ಟ್ ಜಿಲ್ಲಾ ಸಮಿತಿ ತೀವ್ರ ಸಂತಾಪ ಸೂಚಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.