ಉಳ್ಳಾಲ (www.vknews.in) | ಭಾರತೀಯ ಗ್ರ್ಯಾಂಡ್ ಮುಫ್ತಿ ಸುಲ್ತಾನ್ ಉಲಮಾ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಉಳ್ಳಾಲದ ಖಾಝಿಯಾಗಿ ನೇಮಿಸಲಾಯಿತು. ಉಳ್ಳಾಲ ದರ್ಗಾ ಆವರಣದಲ್ಲಿರುವ ಮದನಿ ಹಾಲ್ ನಲ್ಲಿ ರವಿವಾರ ಮಧ್ಯಾಹ್ನ ನಡೆದ ಸಾಮಾನ್ಯ ಸಭೆಯಲ್ಲಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಖಾಝಿಯಾಗಿ ನೇಮಕ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು.
ಉಳ್ಳಾಲದ ಖಾಝಿಯಾಗಿದ್ದ ಸಯ್ಯದ್ ಫಜಲ್ ಕೋಯಮ್ಮ ಅವರು ತಮ್ಮ ವಫಾತ್ ನಂತರ ಹೊಸ ಖಾಜಿಯನ್ನು ಆರಿಸಿಕೊಂಡರು. ಉಳ್ಳಾಲ ದರ್ಗಾದ ನೂತನ ಖಾಝಿ ಪದಗ್ರಹಣ ಸಮಾರಂಭ ಹಾಗೂ ಸಯ್ಯದ್ ಮದನಿ ಶರಿಯಾ ಕಾಲೇಜಿನ ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭವು ಆ.5ರಂದು ಸಂಜೆ 4 ಗಂಟೆಗೆ ದರ್ಗಾ ಆವರಣದಲ್ಲಿ ನಡೆಯಲಿದೆ ಎಂದು ದರ್ಗಾದ ಅಧ್ಯಕ್ಷ ಬಿ.ಜಿ.ಹನೀಫಾ ಹಾಜಿ ಮತ್ತು ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.