(www.vknews. in) ಪುತ್ತೂರಿನ ಖ್ಯಾತ ಉದ್ಯಮ KM CONSTRUCTION ಸ್ಥಳಾಂತರಗೊಂಡು ಉದ್ಘಾಟನೆ.
ಪುತ್ತೂರು:ಪಿಡಬ್ಲ್ಯೂಡಿ ಪ್ರಥಮ ದರ್ಜೆ ಗುತ್ತಿಗೆದಾರ ಕೆ. ಎಂ.ಹಂಝ ಸಾಲ್ಮರ ರವರ ಉದ್ಯಮ, KM ಕನ್ಸ್ಟ್ರಕ್ಷನ್ ಪುತ್ತೂರು ಸಿಟಿ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಆಧುನಿಕರಣಗೊಂಡು, ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಪಿಂಟೋ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಉದ್ಘಾಟಸಲ್ಪಟ್ಟಿತು. ಈ ಕಚೇರಿಯನ್ನು ಅಲ್ಹಾಜ್ ಸೈಯದ್ ಮೊಹಮ್ಮದ್ ತಂಗಳ್ ಸಾಲ್ಮರ ರವರು ಉದ್ಘಾಟಿಸಿದರು. ಸೈಯದ್ ಮಲೆ ಜುಮ್ಮ ಮಸೀದಿಯ ಖತೀಬರಾದ ಅಲ್ಹಾಜ್ ಉಮರ್ ದಾರಿಮಿಯವರು ದುವಾ ಗೈದರು. ಪುತ್ತೂರಿನ ಖ್ಯಾತ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ, ಉಮರ್ ಫೈಜಿ ಸಾಲ್ಮರ, ಹೈದರ್ ಇರ್ಫಾನಿ, ಮಹಮ್ಮದ್ ಮುಸ್ಲಿಯರ್, ಐಯೂಬ್ ಮುಸ್ಲಿಯರ್, ಇಸ್ಮಾಯಿಲ್ ಸಾಲ್ಮರ, ಯಹಿಯಾ ಹಾಜಿ ಸಾಲ್ಮರ,ಯೂಸುಫ್ ಮಾಸ್ಟರ್ ಮಿತ್ತೂರು, ಅಶ್ರಫ್ ಮುಕ್ವೆ, ಮಹಮ್ಮದ್ ಕುಂಜಿ ಹಾಜಿ ಪಡಿಲ್, ಸಿರಾಜ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಕೆ.ಎಂ ಹಂಝ ಸಾಲ್ಮರ ಎಲ್ಲರನ್ನು ಸ್ವಾಗತಿಸಿ ಸಹಕಾರವನ್ನು ಕೋರಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.