(www.vknews. in) ಪುತ್ತೂರು ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ , ನೋಡಲ್ ಅಧಿಕಾರಿಗಳು ಮತ್ತು ಸರಕಾರಿ ದೈಹಿಕ ಶಿಕ್ಷಕರ ಬೇಜವಾಬ್ದಾರಿಯಿಂದ ಮಕ್ಕಳಿಗೆ ಅನ್ಯಾಯ
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯಿಂದ ಕಡಬದಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ನಡೆದ ಅನ್ಯಾಯಕ್ಕೆ ದೂರು ದಾಖಲಾಗಿದ್ದರೂ ಮಕ್ಕಳಿಗೆ ನ್ಯಾಯವಿಲ್ಲ
ಈ ಶೈಕ್ಷಣಿಕ ವರ್ಷ ಪುತ್ತೂರು ತಾಲೂಕಿನಲ್ಲಿ ನಡೆದ ಕ್ರೀಡೆಗಳಲ್ಲಿ ಅತೀ ಹೆಚ್ಚು ಅವ್ಯವಸ್ಥೆ ಹಾಗೂ ಮಕ್ಕಳಿಗೆ ಅನ್ಯಾಯವಾಗಿದ್ದು ಇದರ ಬಗ್ಗೆ ದೂರುಗಳು ದಾಖಲು ಆಗಿದ್ದರೂ ಕೂಡ ಯಾವುದೇ ಮಕ್ಕಳಿಗೆ ನ್ಯಾಯ ಒದಗಿಸದೇ ಪದೇ ಪದೇ ತಪ್ಪುಗಳನ್ನು ಮಾಡುತ್ತಿರುವುದು, ಈ ಪಂದ್ಯಾಟದ ನೋಡಲ್ ಗಳು ಹಾಗೂ ದೈಹಿಕ ಶಿಕ್ಷಕರು ಮಕ್ಕಳಿಗೆ ನ್ಯಾಯ ಒದಗಿಸದೆ ನಾವು ಮಾಡುತ್ತಿರುವ ತಪ್ಪುಗಳನ್ನು ಯಾರೂ ಪ್ರಶ್ನಿಸ ಬಾರದು ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದೆ.
ದಿನಾಂಕ 3/9/2024 ರಂದು ಕಡಬದಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸರಕಾರಿ ಶಾಲೆಗಳ ಸರಕಾರಿ ದೈಹಿಕ ಶಿಕ್ಷಕರು ಇಲ್ಲದ ಶಾಲೆಗಳ ಖಾಸಗಿ ತರಬೇತುದಾರರನ್ನು ಶಾಲಾ ಮುಖ್ಯ ಶಿಕ್ಷಕರಿಂದ ಲಿಖಿತವಾಗಿ ಅನುಮತಿ ಪತ್ರವನ್ನು ಪಡೆದಿದ್ದು ಕೂಡ ಅಂಕಣದೊಳಗೆ ಪ್ರವೇಶಿಸಲು ಬಿಡದೆ ಇದ್ದ ಬಗ್ಗೆ ಮುಖ್ಯಮಂತ್ರಿಗಳ ಕುಂದು ಕೊರತೆ ವಿಭಾಗಕ್ಕೆ ದೂರನ್ನು ಕೊಟ್ಟಿದ್ದರು. ಅಲ್ಲದೆ ಅನ್ಯಾಯವಾದ ಶಾಲೆಗಳ ಎಸ್ಡಿಎಂಸಿ ಮತ್ತು ಶಾಲೆಗಳಲ್ಲಿ ಖಾಸಗಿಯಾಗಿ ತರಬೇತಿ ಕೊಡುತ್ತಾ ಬಂದಿರುವ ಹಿರಿಯ ವಿದ್ಯಾರ್ಥಿಗಳ ಲಿಖಿತ ದೂರಿನ ಮೇರೆಗೆ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯು ಕೂಡ ಇದರ ಬಗ್ಗೆ ಶಿಕ್ಷಣಾಧಿಕಾರಿಗಳಿಂದ ಹಿಡಿದು ರಾಜ್ಯ ಕ್ರೀಡಾ ನಿರ್ದೇಶಕರವರೆಗೆ ದೂರನ್ನು ಸಲ್ಲಿಸಿತ್ತು. ಆದರೆ ಇಷ್ಟೆಲ್ಲಾ ದೂರುಗಳು ಇದ್ದರೂ ಕೂಡ ತದನಂತರ ನಡೆದಂತಹ ತ್ರೋಬಾಲ್ ಪಂದ್ಯಾಟ,ಖೊಖೊ ಪಂದ್ಯಾಟಗಳಲ್ಲಿ ಕೂಡ ಮಕ್ಕಳಿಗೆ ಅನ್ಯಾಯವಾಗಿರುವ ದೂರುಗಳು ಇಲಾಖೆಗೆ ಸಲ್ಲಿಕೆಯಾಗಿದೆ.
ಒಂದೇ ತಾಲೂಕಿನಲ್ಲಿ ಇಷ್ಟೆಲ್ಲಾ ತಪ್ಪುಗಳು ಹಾಗೂ ಮಕ್ಕಳಿಗೆ ಅನ್ಯಾಯವಾಗಿದ್ದರೂ ಕೂಡ ಅಲ್ಲಿ ತಪ್ಪು ಮಾಡುತ್ತಿರುವ ದೈಹಿಕ ಶಿಕ್ಷಕರ ವಿರುದ್ಧ ಯಾವುದೇ ರೀತಿಯ ಕ್ರಮವನ್ನು ಜರಗಿಸದೆ ಇರುವ ಕಾರಣ, ನಾವೇನೂ ಮಾಡಿದರೂ ಕೂಡ ನಡೆಯುತ್ತದೆ ಎನ್ನುವ ಮಟ್ಟಿಗೆ ಮಕ್ಕಳನ್ನು ತಾತ್ಸಾರದಿಂದ ನೋಡುವಲ್ಲಿ ಇಲಾಖೆಯ ಅಧಿಕಾರಿಗಳು ಕೂಡ ಜವಾಬ್ದಾರರು ಆಗಿದ್ದಾರೆ.
ಈಗ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ನಡೆದಂತಹ ವಂಚನೆಯು ,ಆ ತಂಡದ ವಿರುದ್ಧ ಆಡಿದ ವಲಯ, ತಾಲೂಕು, ಹಾಗೂ ಜಿಲ್ಲಾ ಮಟ್ಟದ ಎಲ್ಲಾ ತಂಡದ ಮಕ್ಕಳಿಗೂ ಘೋರ ಅನ್ಯಾಯ ವಾಗಿದ್ದು, ಈ ತಂಡವನ್ನು ತಾಲೂಕು ಜಿಲ್ಲೆಗೆ ಬರಲು ಬೇಕಾಗಿಯೇ, ವಲಯ ಮಟ್ಟದಲ್ಲಿ ಸರಕಾರಿ ಶಾಲೆಯನ್ನು ಸೋಲಿಸುವ ಹುನ್ನಾರ ನಡೆದಿದೆಯೇ ಎನ್ನುವ ಸಂಶಯ ನಾಗರಿಕರಲ್ಲಿ ಮೂಡಿರುತ್ತದೆ.
ಹಾಗೂ ವಲಯ ಮಟ್ಟದ ಪಂದ್ಯಾಟಗಳು ನಡೆದಾಗ ಸ್ಥಳೀಯ ಶಿಕ್ಷಣಾಧಿಕಾರಿಗಳು ಸರಕಾರಿ ಶಾಲಾ ಮಕ್ಕಳಿಗೆ ಅನ್ಯಾಯವಾಗದ ರೀತಿಯಲ್ಲಿ ಆಟವನ್ನು ಆಡಿಸಿ ಎನ್ನುವ ಮೌಖಿಕ ಆದೇಶವನ್ನು ಕೂಡ ಕೊಟ್ಟಿದ್ದು, ಅದನ್ನು ಕೂಡ ಉಲ್ಲಂಘಿಸಿದ ಆ ದಿನದ ನೋಡಲ್ ಗಳು ಹಾಗೂ ಅಲ್ಲಿದ್ದ ಸರಕಾರಿ ದೈಹಿಕ ಶಿಕ್ಷಕರು ಕೂಡ ಈ ಪ್ರಾಯ ಹೆಚ್ಚಿದ್ದ ಮಗುವನ್ನು ಆಡಿಸಿದ ಷಡ್ಯಂತ್ರದಲ್ಲಿ ಭಾಗಿ ಆಗಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
ಆದರಿಂದ ಇಲಾಖೆಯು ಈ ಪುತ್ತೂರು ತಾಲೂಕಿನ ದೈಹಿಕ ಪರಿವೀಕ್ಷಣಾಧಿಕಾರಿ,ಪಂದ್ಯಾಟದ ನೋಡಲ್ ಅಧಿಕಾರಿಗಳು ಹಾಗೂ ಆ ಪಂದ್ಯಾಟಕ್ಕೆ ಸಂಬಂದಿಸಿದ ದೈಹಿಕ ಶಿಕ್ಷಕರನ್ನು ಸೇವೆಯಿಂದ ದೂರನಿಲ್ಲಿಸಿ ಇದರ ಬಗ್ಗೆ ಕೂಲಂಕುಶವಾದ ತನಿಖೆಯನ್ನು ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಜರಗಿಸಲು ಪೋಷಕರು ಹಾಗೂ ಸಾರ್ವಜನಿಕರು ಅಗ್ರಹವನ್ನು ವ್ಯಕ್ತಪಡಿಸುತ್ತಾ ಇದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.