(www.vknews. in) ಗ್ರಾಂಡ್ ಮೀಲಾದ್ ಕಾನ್ಫರೆನ್ಸ್
ಕೆಸಿಎಫ್ ಬಹರೈನ್ ಮನಾಮ ಸೆಕ್ಟರ್ ವತಿಯಿಂದ ಮುಹಮ್ಮದ್ ನಬಿ ﷺ ರವರು ಮಾನವೀಯತೆಯ ಮಾರ್ಗದರ್ಶಿ ಎಂಬ ಘೋಷ ವಾಕ್ಯದೊಂದಿಗೆ ದಿನಾಂಕ 27/09/2024 ರಂದು ಶುಕ್ರವಾರ ರಾತ್ರಿ 7:30 ಕ್ಕೆ ಸರಿಯಾಗಿ ಮನಾಮ ಗೋಲ್ಡ್ ಸಿಟಿಯಲ್ಲಿರುವ ಕೆ ಸಿಟಿ ಸಭಾಂಗಣದಲ್ಲಿ ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ನಡೆಯಲಿರುವುದು.
ಪ್ರಸ್ತುತ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಮಶ್’ವೂರ್ ತಂಙಲ್ ತಲಕ್ಕಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಹು. ಸಫ್ವಾನ್ ಸಖಾಫಿ ಮನಕಡವು ಕೇರಳ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮರ್ಹೂಂ ಅಸ್ಸಯ್ಯಿದ್ ಕೂರ ತಂಙಲ್, ಬಶೀರ್ ಕಾರ್ಲೆ ಅವರ ಅನುಸ್ಮರಣೆ ಹಾಗೂ ಅಸ್ಮಾವುಲ್ ಹುಸ್ನಾ, ಮೌಲಿದ್, ಬುರ್ದಾ ಮಜ್ಲಿಸ್ ನಡೆಯಲಿರುವುದು ಎಂದು ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮದ ಸ್ವಾಗತ ಸಮಿತಿಯ ಚೇರ್ಮಾನ್ ನಝೀರ್ ಹಾಜಿ ದೇರಳಕಟ್ಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.