(www.vknews.in) ವನಮಹೋತ್ಸವ ,ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡವಿನ ಕೋಣೆ ಶಿರೂರು,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು, ನಮ್ಮ ನಾಡ ಒಕ್ಕೂಟ ಪರ್ಯವರಣ ಕರ್ನಾಟಕ ರಾಜ್ಯ ಸಮಿತಿ ಇವರುಗಳ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ,ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೇರಣಾ ತರಬೇತಿ ಹಾಗೂ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷ ಮೊಹಮದ್ ಮುಸ್ತಾಕ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಾಗರತ್ನ ಆಚರ್ ,ಉಪಾಧ್ಯಕ್ಷ ಕಪ್ಸಿ ನೂರು ಮೊಹಮ್ಮದ್, ಬೈಂದೂರು ಪೊಲೀಸ್ ಉಪನಿರೀಕ್ಷಕ ತಿಮ್ಮೇಶ್ ಬೀ. ಎನ್.ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್ ,ನಮ್ಮ ನಾಡ ಒಕ್ಕೂಟ ಪಾರ್ಯವರಣ ಸಮಿತಿ ರಾಜ್ಯ ಅಧ್ಯಕ್ಷ ಶೈಖ್ ಅಬ್ದುಲ್ ವಾಹಿದ್, ರಾಜ್ಯ ಕಾರ್ಯದರ್ಶಿ ಹುಸೈನ್ ಹೈಕಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಮುಲ್ಲಾ ಫಾರೂಕ್,ಖಲೀಫಾ ಶಹೀನ್,ಲಿಂಗಪ್ಪ ಮೆಸ್ಟ,ಹಸಂಜಿ ತಬ್ರೆಜ್,ಬೀಬಿ ಅಸ್ಮ ಸುಶೀಲ ಶೆಡ್ತಿ, ಉಡುಪಿ ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಮೌಲಾನ ದಸ್ತಗೀರ ,ಇಂಜಿನಿಯರ್ ಎಸ್. ಎಂ,ಜಾಫರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ , ಮೊಹಮ್ಮದ್ ಜಾಫರ್ ಉಪಸ್ಥಿತರಿದ್ದರು, ಎನ್. ದಬ್ಲೂ. ಏ. ಮಮ್ದು ಇಬ್ರಾಹಿಂ,ಶಿಕ್ಷಣ ಪ್ರೇಮಿ ಇಮ್ತಿಯಾಜ್ ಉಪಸ್ಥಿತರಿದ್ದರು. ಶಿಕ್ಷಣ ತರಬೇತುದಾರ ರಫೀಕ್ ಮಾಸ್ತರ್ ವಿದ್ಯಾರ್ಥಿಗಳಿಗೆ ತರಭೇತಿ ಕಾರ್ಯಗಾರ ನಡೆಸಿಕೊಟ್ಟರು, ನಿವೃತ್ತ ಶಿಕ್ಷಕಿ ಖುರ್ಷಿದ್ ಬಾನು ಹಾಗೂ ನಮ್ಮ ನಾಡ ಒಕ್ಕೂಟದ ಕರ್ನಾಟಕ ರಾಜ್ಯ ಅಧ್ಯಕ್ಷ ಶೈಖ್ ಅಬ್ದುಲ್ ವಾಹೀದ್ ರನ್ನು ಸನ್ಮಾನಿಸಲಾಯಿತು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪೋಷಕರು ಉಪಸ್ತಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.