(www.vknews. in) ಬುರೂಜ್ ಶಾಲೆ: ಗಾಂಧಿ ಜಯಂತಿ ಆಚರಣೆ
ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನದ ಅಂಗವಾಗಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಸಮ್ಮುಖದಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸರ್ವಧರ್ಮ ಪ್ರಾರ್ಥನೆ ಮಾಡುವುದರ ಮುಖಾಂತರ ಈ ದಿನಕ್ಕೆ ಅರ್ಥ ಕಲ್ಪಿಸಲಾಯಿತು. ವಿದ್ಯಾರ್ಥಿಗಳಿಗೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಚತೆಯ ಮಹತ್ವನ್ನು ಚಂದ್ರಾವತಿ ಮತ್ತು ಶೇಖ್ ಜಲಾಲುದ್ದೀನ್ ತಿಳಿಯಪಡಿಸಿದರು. ಈ ಸಂದರ್ಭದಲ್ಲಿ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ನೂರ್ ಜಹಾನ್,ಎಸ್.ಪಿ.ರಝೀಯ, ಶೇಖ್ ಸಾದಿಯ, ಖುರ್ಷಿದ್, ಅನ್ನಪೂರ್ಣೇಶ್ವರಿ,ಮಮತಾ ಆರ್, ವನಿತಾ ಶೆಟ್ಟಿ, ಚೇತನಾ, ಎಲ್ಸಿ ಲಸ್ರಾದೋ, ಆಯಿಷಾ ರಿಫಾನ, ಪ್ರತೀಕ್ಷಾ,ಸಮೀನಾ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.