(www.vknews. in) ಕುಂದಾಪುರ : ಸಹಾಯಧನ ಹಸ್ತಾಂತರ ಹಾಗೂ ಸನ್ಮಾನ ಕಾರ್ಯಕ್ರಮ
ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಕುಂದಾಪುರ, ಬೈತುಲ್ ಮಾಲ್ ಹಂಗಾರ ಕಟ್ಟೆ, ನಮ್ಮ ನಾಡ ಒಕ್ಕೂಟ (ರಿ.) ಉಡುಪಿ ಜಿಲ್ಲಾ ಸಮಿತಿ, ತವಕ್ಕಲ್ ಯಂಗ್ ಮೆನ್ಸ್ ಅಸೋಸಿಯೇಶನ್ ಕಟಪಾಡಿ, ಟೀಮ್ ಮಲೆನಾಡು ಹೂಮ್ಯಾನಿಟೇರಿಯನ್ ಟ್ರಸ್ಟ್ (ರಿ)ಬೆಳ್ವೆ ಇವರುಗಳ ಆಶ್ರಯದಲ್ಲಿ ಸಹಾಯಧನ ಹಸ್ತಾಂತರ ಹಾಗೂ ಸನ್ಮಾನ ಕಾರ್ಯಕ್ರಮ ಸೆ.29 ಭಾನುವಾರ ಕುಂದಾಪುರ ಎನ್.ಎನ್. ಒ ಕಮ್ಯೂನಿಟಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ಕುಂದಾಪುರ ಎನ್.ಎನ್.ಒ ಕಮ್ಯೂ ನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಸಹಾಯಧನ ಹಸ್ತಾಂತರ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫಾರ್ಮ್ ಡಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ಕುಂದಾಪುರ ಕಟ್ಟೇರಿ ನಿವಾಸಿ ಅಜ್ಞಾಲುನ್ನಿ ಸಾರ ಅವರಿಗೆ ಸಹಾಯಧನ ಹಸ್ತಾಂತರಿಸಿದರು. ಇತ್ತೀಚೆಗಷ್ಟೇ ಸ್ವಾಮಿ ವಿವೇಕಾನಂದ ಪ್ರಶಸ್ತಿ ಪಡೆದ ಎಮ್. ಇಸ್ಟಾಲ್ ಮನ್ನಾ ಉಡುಪಿ ಇವರಿಗೆ ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಸನ್ಮಾನಿಸಿ ಗೌರವಿಸಲಾಯಿತು. ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಹುಸೈನ್ ಹೈಕಾಡಿ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಉದ್ಯೋಗದ ಬಗ್ಗೆ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಯಾರೆಲ್ಲ ಯುವಕರು ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೊಡಿಸುವಂತ ಕಾರ್ಯ ನಮ್ಮ ಎನ್.ಎನ್.ಓ . ಕಮ್ಯುನಿಟಿ ಸೆಂಟರ್ ಕುಂದಾಪುರ ಮಾಡುತ್ತಿದೆ ಎಂದರು. ನಮ್ಮ ಸಂಸ್ಥೆ ಉದ್ಘಾಟನೆ ಆದ ಬಳಿಕ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿದ್ದೇವೆ. ಸರ್ಕಾರ, ನಮ್ಮ ಸಂಸ್ಥೆ, ದಾನಿಗಳ ಸಹಕಾರದೊಂದಿಗೆ ವಿದ್ಯಾಭ್ಯಾಸಕ್ಕೆ, ನಿಟ್ಟಿನಲ್ಲಿ ಮಕ್ಕಳಿಗೆ ಮೋಟಿವೇಶನ್ ಮಾಡುತ್ತಿದ್ದಾರೆ. ಅವರಿಗೆ ಆತ್ಮವಿಶ್ವಾಸ ಜಾಸ್ತಿ ಆಗುವ ಹಾಗೇ ಪ್ರಯತ್ನಿಸುತ್ತಿದ್ದಾರೆ. ಮುಂದಿನ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಸಹಾಯಧನವನ್ನು ಮಾಡುತ್ತಿದ್ದಾರೆ. ಅವರ ಪ್ರತಿಭೆಯನ್ನು ತಿರುವುದು ಬಹಳ ಹೆಮ್ಮೆಯ ವಿಷಯ ವಾಗಿದೆ. ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಆಶಿಸುತ್ತೇನೆ. ಬಡವರಿಗೆ ಸಹಾಯ ನೀಡುತ್ತಿದ್ದೇವೆ. ಗುರುತಿಸುವ ಕಾರ್ಯ ಕೂಡ ಮಾಡು ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಕಾರ್ಡ್ ಮಾಡಿಸುವಲ್ಲಿ ನಮ್ಮ ಸಂಸ್ಥೆ ಕಾರ್ಯ ನಡೆಸುತ್ತಿದೆ. ನಮ್ಮ ಉದ್ದೇಶ ಯಾರೆಲ್ಲ ಯುವಕರು ಉದ್ಯೋಗವಿಲ್ಲದೇ ಮನೆಯಲ್ಲಿ ಇದ್ದವರಿಗೆ ನಾವು ಉದ್ಯೋಗ ಕೊಡಿಸುವಲ್ಲಿ ನಮ್ಮ ಸಂಸ್ಥೆ ಮಾಡುತ್ತಿದೆ ಎಂದರು. ಕೋಡಿ – ಕುಂದಾಪುರ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಅವರು ಮಾತನಾಡಿ, ಎನ್.ಎನ್. ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೋಡಿ ಬ್ಯಾರೀಸ್ ಕಾಲೇಜಿನ ಬಿ.ಸಿ.ಎ. ವಿಭಾಗದಲ್ಲಿ 100/100 ಅಂಕ ಪಡೆದ ವಿದ್ಯಾರ್ಥಿನಿ ಸಫಾಝ್, ಬಿ.ಸಿ.ಎ ಐದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಆಯಿಷಾ ಸಿದ್ದಿಕ್ ಇವರಿಗೆ ಸನ್ಮಾನ ಕಾರ್ಯಕ್ರಮ. ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಕೋಶಾಧಿಕಾರಿ ಪೀರು ಸಾಹೇಬ್, ಹಂಗಾರಕಟ್ಟೆ ಬೈತುಲ್ ಮಾಲ್ ಖಜಾಂಚಿ ಜವಾನ್ ಅಕ್ಟರ್, ಕಟಪಾಡಿ ತವಕ್ಕಲ್ ಯಂಗ್ ಮೆನ್ಸ್ ಅಸೋಸಿ ಯೇಶನ್ ಕಟಪಾಡಿ ಅಧ್ಯಕ್ಷ ಯು.ಎ. ರಶೀದ್, ಟೀಮ್ ಮಲೆನಾಡು ಹ್ಯೂಮೇನಿಟೇರಿಯನ್ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕಾರು, ನಮ್ಮ ನಾಡ ಉಡುಪಿ ಪ್ರಧಾನ ಕಾರ್ಯದರ್ಶಿ ಒಕ್ಕೂಟ ಜಹೀರ್ ನಾಕುದ್, ಟೀಮ್ ಮಲೆನಾಡು ಹ್ಯೂಮೇನಿಟೇರಿಯನ್ ಟ್ರಸ್ಟ್ರಿ ಬೆಳೆ ಟ್ರಸ್ಟಿಗಳಾದ ಮೊಹಮ್ಮದ್ ರೆಯನ್ ಬೆಳ್ವೆ , ಅನ್ವರ್ ಕಂಡ್ಲುರ್ ,ಎನ್ ಎನ್ ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ಉಪಾಧ್ಯಕಾರಾದ ಜಮಾಲ್ ಗುಕ್ವಾಡಿ ಮೊಹಮ್ಮದ್ ಗುಲ್ವಾಡಿ, ಶಾಕಿರ್ ಹಾವಂಜೆ, ನಮ್ಮ ನಾಡ ಒಕ್ಕೂಟ ಜಿಲ್ಲಾ ಯುವ ಸಂಯೋಜಕ ಅಬ್ದುಲ್ ಖಾದರ್ ಮುಡುಗೋಪಾಡಿ , ಜಿಲ್ಲಾ ಸಮಿತಿ ,ಸದಸ್ಯ ಮನ್ಸೂರ್ ಇಬ್ರಾಹಿಂ , ವೇದಿಕೆಯಲ್ಲಿ ಉಪಸ್ಥಿತರಿದ್ದರು.ಟೀಮ್ ಮಲೆನಾಡು ಹ್ಯೂಮೆನೀಟೇರಿಯನ್ ಟ್ರಸ್ಟ್ನ ಉಪಾಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ ವಿಶೇಷವಾಗಿ ಸಹಕರಿಸಿದರು. ಕುಂದಾಪುರ ಎನ್.ಎನ್.ಒ ಕಮ್ಯೂ ನಿಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹುಸೈನ್ ಹೈಕಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಮ್ಮ ನಾಡ ಒಕ್ಕೂಟ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಸದಸ್ಯ ಪಳ್ಳಿ ಉಸ್ಮಾನ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.